ಸಿಮೆಂಟ್‌ನಿಂದ ಮನಸೂರೆಗೊಳ್ಳುವ ಮಂಚ ತಯಾರಿಸಿದ ವ್ಯಕ್ತಿ, ಆ ಎಂಜಿನಿಯರ್‌ನ ನಂಬರ್ ಕೊಡಿ ಎಂದ ನೆಟ್ಟಿಗರು: ವಿಡಿಯೋ ವೈರಲ್

Viral Video: ಕೇವಲ ಪುಸ್ತಕದಿಂದ ಕಲಿಯುವುದು ಮಾತ್ರ ವಿದ್ಯೆಯಲ್ಲ. ಕಲೆ, ಕುಶಲಕರ್ಮಿಕರು ಮಾಡುವ ಕೆಲಸ ಎಲ್ಲವೂ ವಿದ್ಯೆಯೇ... ಇದೀಗ ಅಂತಹ ಚಾಣಾಕ್ಷಣ ವಿಡಿಯೋವೊಂದು ವೈರಲ್ ಆಗುತ್ತಿದೆ. 

Written by - Yashaswini V | Last Updated : May 17, 2025, 12:32 PM IST
  • ಸಿಮೆಂಟ್ ಬೆಡ್ ವೈರಲ್ ವಿಡಿಯೋ
  • ಕುಶಲಕರ್ಮಿಯ ಕೈಚಳಕಕ್ಕೆ ಬೆರಗಾದ ನೆಟ್ಟಿಗರು
ಸಿಮೆಂಟ್‌ನಿಂದ ಮನಸೂರೆಗೊಳ್ಳುವ ಮಂಚ ತಯಾರಿಸಿದ ವ್ಯಕ್ತಿ, ಆ ಎಂಜಿನಿಯರ್‌ನ ನಂಬರ್ ಕೊಡಿ ಎಂದ ನೆಟ್ಟಿಗರು: ವಿಡಿಯೋ ವೈರಲ್

Viral Video Today: ನೆಮ್ಮದಿಯಿಂದ ಕಣ್ಮುಚ್ಚಿ ಮಲಗಲು ಒಂದು ಮಂಚ, ಹಾಸಿಗೆ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಸಾಮಾನ್ಯವಾಗಿ ಮರ-ಮುಟ್ಟುಗಳಿಂದ ತಯಾರಿಸಿದ ವೈವಿಧ್ಯಮಯ ಮಂಚಗಳನ್ನು ನೀವು ನೋಡಿರಬಹುದು. ಆದರೆ, ಇಟ್ಟಿಗೆ, ಸಿಮೆಂಟ್‌ನಿಂದ ತಯಾರಿಸಿದ ಮಂಚವನ್ನು ಎಂದಾದರೂ ನೋಡಿದ್ದೀರಾ.... ಇದು ವಿಚಿತ್ರ ಎನಿಸಿದರೂ ಸಹ ಸತ್ಯವೇ... ಇದೀಗ ಅಂತದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆ ವಿಡಿಯೋದಲ್ಲಿ ವ್ಯಕ್ತಿಯೊರ್ವ ಒಂದು ಕೋಣೆಯಲ್ಲಿ ಇಟ್ಟಿಗೆ, ಸಿಮೆಂಟ್‌ನಿಂದ ಒಂದು ಸುಂದರ ಮನಮೋಹಕವಾದ ಮಂಚ ತಯಾರಿಸಲು ಸಮರ್ಪಣಾ ಮನೋಭಾವದಿಂದ ಶ್ರಮವಹಿಸುತ್ತಿದ್ದಾನೆ. 

ಇದನ್ನೂ ಓದಿ- ನಡುರಸ್ತೆಯಲ್ಲಿ ಗರಿಬಿಚ್ಚಿ ನರ್ತಿಸಿದ ಮಯೂರ- ವಿಡಿಯೋ ವೈರಲ್

ವೈರಲ್ ವಿಡಿಯೋದಲ್ಲಿ ಕುಶಲಕರ್ಮಿ ತನ್ನ ಕೈಚಳಕವನ್ನು ಬಳಸಿ ಸಿಮೆಂಟ್ ನಿಂದಲೇ ಎಲ್ಲರ ಮನಸೂರೆಗೊಳ್ಳುವಂತ ಬೆಡ್ ತಯಾರಿಸುತ್ತಿದ್ದಾನೆ. ಇದರ ಸುತ್ತಲೂ ಆಕರ್ಷಕ ಕಲಾಕೃತಿಗಳ ಕೆತ್ತನೆಯನ್ನು ಸಹ ಮಾಡಲಾಗಿದ್ದು, ನೋಡಲು ರಾಜ-ಮಹಾರಾಜರ ಸುಪ್ಪತ್ತಿಗೆಯಂತೆ ಕಾಣುತ್ತಿದೆ. 

ಇದನ್ನೂ ಓದಿ- ಪಹಲ್ಗಾಮ್​ನ ಆ ಮುಸ್ಲಿಂ ವ್ಯಕ್ತಿಯನ್ನು ಎಂದೂ ಮರೆಯೊಲ್ಲ: ವೈರಲ್ ವಿಡಿಯೋದ ಸತ್ಯ ಬಿಚ್ಚಿಟ್ಟ ಮೃತ ಮಂಜುನಾಥ್ ಪತ್ನಿ ಪಲ್ಲವಿ

ಆಕರ್ಷಕ ಲುಕ್ ನೊಂದಿಗೆ ತಯಾರಿಸಲಾಗಿರುವ ಈ ಸಿಮೆಂಟ್ ಮಂಚಕ್ಕೆ ವ್ಯಕ್ತಿ ಫೈನಲ್ ಟಚ್ ನೀಡುತ್ತಿರುವ ದೃಶ್ಯದ ವಿಡಿಯೋ ವೈರಲ್ ಆಗುತ್ತಿದೆ. 
ಇನ್ಸ್ಟಾಗ್ರಾಂನಲ್ಲಿ @mdasad6102 ಎಂಬ ಬಳಕೆದಾರರು ಈ ವಿಡಿಯೋವನ್ನು ಶೇರ್ ಮಾಡಿದ್ದು ಇದುವರೆಗೂ ಸುಮಾರು 30 ಮಿಲಿಯನ್ ವೀಕ್ಷಣೆ ಕಂಡಿರುವ ಈ ವಿಡಿಯೋಗೆ ಲಕ್ಷಾಂತರ ಮಂದಿ ಲೈಕ್ ಮಾಡಿದ್ದಾರೆ. 

ಸಿಮೆಂಟ್‌ನಿಂದ ತಯಾರಾಗುತ್ತಿರುವ ಬೆಡ್ ವೈರಲ್ ವಿಡಿಯೋ ಹೇಗಿದೆ ಇಲ್ಲಿ ವೀಕ್ಷಿಸಿ... 

 
 
 
 

 
 
 
 
 
 
 
 
 
 
 

A post shared by Asadujjman Nur (@mdasad6102)

ಈ ವಿಡಿಯೋಗೆ ನೆಟ್ಟಿಗರು ತರಾವರಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಇದೊಂದು ಅದ್ಭುತ ಪ್ರತಿಭೆ ಎಂದು ಬರೆದರೆ, ಓರ್ವ ಬಳಕೆದಾರರು 'ಪತಿ-ಪತ್ನಿ ನಡುವೆ ಜಗಳವಾದರೆ ಯಾರ ತಲೆ ಹೊಡೆಯುತ್ತದೆ ಗೊತ್ತಿಲ್ಲ'  ಎಂದು ತಮಾಷೆಯಾಗಿ ಬರೆದಿದ್ದಾರೆ. ಮತ್ತೊರ್ವ ಬಳಕೆದಾರ ನನಗೆ ಆ ಎಂಜಿನಿಯರ್ ನಂಬರ್ ಕೊಡಿ ಎಂದು ಒಬ್ಬರು ಬರೆದಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News