)
Swachh Bharat
: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಇತ್ತೀಚೆಗೆ ‘ಸ್ವಚ್ಛ ಸರ್ವೇಕ್ಷಣ್ 2024-25’ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಇಂದೋರ್ ಮತ್ತೊಮ್ಮೆ ಅತ್ಯಂತ ಸ್ವಚ್ಛ ನಗರವೆಂಬ ಬಿರುದನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ. ಇದರಲ್ಲಿ ರಸ್ತೆಬದಿಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಟ್ಯಾಂಕರ್ ನೀರು ಸ್ಪ್ರೇ ಮಾಡುವುದನ್ನ ಕಾಣಬಹುದು. ಇದು ಇಂದೋರ್ನಲ್ಲಿ ನಡೆದ ಘಟನೆ ಎಂದು ಅನೇಕರು ಈ ವಿಡಿಯೋವನ್ನ ಹಂಚಿಕೊಂಡಿದ್ದಾರೆ.
ಫೇಸ್ಬುಕ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ‘ಇಂದೋರ್- ಸ್ವಚ್ಛ ನಗರವೆಂಬ ಬಿರುದು ಪಡೆದ ಸಿಟಿಯನ್ನು ಗಲೀಜು ಮಾಡುವವರಿಗೆ ಹೇಗೆ treat ಮಾಡಬೇಕು ಅನ್ನೋದು ತಿಳಿದಿದೆ ಅಲ್ಲವೇʼ ಎಂದು ಕ್ಯಾಪ್ಶನ್ ನೀಡಿದ್ದಾರೆ. ಆದರೆ ಕೆಲವು ಫ್ಯಾಕ್ಟ್ ಚೆಕ್ ಮಾಡುವ ವೆಬ್ಸೈಟ್ಗಳು ಈ ಸುದ್ದಿಯ ಸತ್ಯಾಸತ್ಯತೆಯನ್ನ ತಿಳಿಸಿವೆ. ಇದೀಗ ವೈರಲ್ ಅಗಿರೋ ಈ ವಿಡಿಯೋ ಇಂದೋರ್ಗೆ ಸೇರಿದ್ದಲ್ಲ. ಈ ವಿಡಿಯೋಗೂ ಭಾರತಕ್ಕೂ ಯಾವುದೇ ಸಂಬಂಧವಿಲ್ಲ. ವಾಸ್ತವವಾಗಿ ಈ ಘಟನೆ ಪೆರುವಿನ ರಾಜಧಾನಿ ಲಿಮಾದಲ್ಲಿ ನಡೆದಿದೆ ಎಂದು ಸ್ಪಷ್ಟನೆ ನೀಡಿವೆ.
शहर को स्वच्छ रखने का इंदौरी तरीका।??#SwachhBharat #Indore pic.twitter.com/oohYCe1fb4
— Mukesh Mathur (@mukesh1275) July 21, 2025
ಈ ಘಟನೆ ಎಲ್ಲಿಯೇ ಆಗಿರಲಿ ಈ ವಿಡಿಯೋ ನೋಡುವ ಪ್ರತಿಯೊಬ್ಬರಿಗೂ ಒಂದು ಉತ್ತಮ ಸಂದೇಶ ನೀಡುವಂತಿದೆ. ಸಿಟಿಗಳಲ್ಲಿ ಯಾರ ಭಯವೂ ಇಲ್ಲದೆ ಸಾರ್ವಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ವರ್ತಿಸುವ ಜನರಿಗೆ ಇದೇ ರೀತಿ ಪಾಠ ಕಲಿಸಬೇಕೆಂದು ಸೋಷಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅಂದಹಾಗೆ ಈ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸಾರ್ವಜನಿಕ ಪ್ರದೇಶದಲ್ಲಿಯೇ ಗೋಡೆಯೊಂದಕ್ಕೆ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾನೆ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಟ್ಯಾಂಕರ್ ಅನ್ನ ನಿಲ್ಲಿಸಿ ಗಲೀಜು ಮಾಡುತ್ತಿದ್ದ ವ್ಯಕ್ತಿಯ ಮೇಲೆ ನೀರು ಸುರಿಸಲಾಗಿದೆ. ಇದರಿಂದ ಆತ ಸಂಪೂರ್ಣವಾಗಿ ನೆನೆದು ಹೋಗಿದ್ದ. ಟ್ಯಾಂಕರ್ ನೀರಿನಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಆತನಿಗೆ ಸಾಧ್ಯವಾಗಿಲ್ಲ.
ಟ್ಯಾಂಕರ್ ಚಾಲಕ ಆತ ಎಲ್ಲಿ ಹೋಗುತ್ತಾನೋ ಅಲ್ಲಿ ದೊಡ್ಡ ಪೈಪ್ ಹಿಡಿದು ನೀರು ಆತನ ಮೇಲೆ ನೀರು ಸುರಿಸಿದ್ದಾನೆ. ಸಾರ್ವಜನಿಕ ಸ್ಥಳಗಳಲ್ಲಿ ಗಲೀಜು ಮಾಡುವ ವ್ಯಕ್ತಿಗಳಿಗೆ ಇದು ಒಂದು ರೀತಿ ತಕ್ಕಪಾಠ ಕಲಿಸಿದಂತಾಗಿದೆ. ಇದೇ ಬೆಂಗಳೂರಿನಲ್ಲಿಯೂ ಮಾಡಬೇಕು. ಇಲ್ಲಿಯೂ ಸಹ ಅನೇಕ ಜನರು ಜನರು ಓಡಾಡುವ ಸ್ಥಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳಿಗೆ ಯಾರ ಭಯವೂ ಇರಲ್ಲ, ನಾಚಿಕೆಯಂತೂ ಮೊದಲೇ ಇರಲ್ಲ. ಹೀಗಾಗಿ ಅಂತಹವರಿಗೆ ತಕ್ಕಪಾಠ ಕಲಿಸಬೇಕಿದೆ ಅಂತಾ ನೆಟಿಜನ್ಸ್ ಆಗ್ರಹಿಸಿದ್ದಾರೆ.