)
Snake Viral Video: ಪ್ರತಿದಿನ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯ ಹಾವುಗಳು ವೈರಲ್ ಆಗುತ್ತಿರುತ್ತವೆ. ಕೆಲವು ವಿಡಿಯೋಗಳು ಜನರ ಗಮನ ಸೆಳೆಯುತ್ತವೆ. ಈ ಪೈಕಿ ಹಾವುಗಳ ಸರಸವಾಡುವ ವಿಡಿಯೋಗಳನ್ನ ಜನರು ಬಹಳ ಕುತೂಹಲದಿಂದ ವೀಕ್ಷಿಸುತ್ತಾರೆ. ಪ್ರಸ್ತುತ ಅಂತಹದ್ದೇ ಒಂದು ವಿಡಿಯೋ ಸಖತ್ ಸೌಂಡ್ ಮಾಡುತ್ತಿದೆ. ಎರಡು ವಿಷಕಾರಿ ಹಾವುಗಳು ಹಾಡಹಗಲೇ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಪ್ರಸ್ತುತ ವೈರಲ್ ಆಗುತ್ತಿದೆ.
ವಾಸ್ತವವಾಗಿ ಆಸ್ಟ್ರೇಲಿಯಾದ ವನ್ಯಜೀವಿ ಸಂರಕ್ಷಣಾಲಯವು ಇತ್ತೀಚೆಗೆ ತನ್ನ ಫೇಸ್ಬುಕ್ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಇದರಲ್ಲಿ ಎರಡು ವಿಷಕಾರಿ ಹಾವುಗಳು ಪರಸ್ಪರ ಸರಸವಾಡುತ್ತಿರುವುದನ್ನು ನೀವು ಕಾಣಬಹುದು. ಈ ವಿಡಿಯೋ ನೋಡಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನೋಡಲು ಸುಂದರವಾಗಿ ಕಾಣುವ ಈ ಹಾವುಗಳು ರಸ್ತೆ ಬದಿಯಲ್ಲಿ ಸರಸವಾಡಿವೆ. ಸುಮಾರು ಒಂದು ನಿಮಿಷವಿರುವ ಈ ವಿಡಿಯೋವನ್ನ ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ವೈರಲ್ ಆಗಿರೋ ಈ ವಿಡಿಯೋದಲ್ಲಿ ಹಾವುಗಳ ಗಂಟೆಗಟ್ಟಲೇ ಸರಸವಾಡುತ್ತಾ ಜನರ ಗಮನ ಸೆಳೆದಿವೆ. ಈ ವೀಡಿಯೊವನ್ನು ನೋಡಿದ ನಂತರ ವನ್ಯಜೀವಿ ಪ್ರಿಯರು ಉತ್ಸುಕತೆಯಿಂದ ಖುಷಿ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯನ್ ವನ್ಯಜೀವಿ ಸಂರಕ್ಷಣಾ ಸೊಸೈಟಿಯ ಪ್ರಕಾರ, ಈ ಹಾವುಗಳ ಸರಸದ ದೃಶ್ಯಗಳು ಮುರ್ರೆ-ಡಾರ್ಲಿಂಗ್ ಬೇಸಿನ್ನಲ್ಲಿರುವ ಅವರ ಸ್ಕಾಟಿಯಾ ವನ್ಯಜೀವಿ ಅಭಯಾರಣ್ಯದಲ್ಲಿ ಬೆಳಕಿಗೆ ಬಂದಿವೆ.
ಆಸ್ಟ್ರೇಲಿಯಾದಲ್ಲಿರುವ ಎಲ್ಲಾ ಹಾವು ಪ್ರಭೇದಗಳಲ್ಲಿ ಮುಲ್ಗಾ ಹಾವು ಅತ್ಯಂತ ವ್ಯಾಪಕವಾಗಿ ಕಂಡುಬರುತ್ತದೆ. ಈ ಹಾವುಗಳು ಬಹುತೇಕ ಖಂಡದಾದ್ಯಂತ ಕಂಡುಬರುತ್ತವೆ. ಆಸ್ಟ್ರೇಲಿಯನ್ ವಸ್ತುಸಂಗ್ರಹಾಲಯದ ಪ್ರಕಾರ, ಈ ಹಾವಿನ ಪ್ರಭೇದದ ಗಂಡು ಹಾವುಗಳ ತನ್ನ ಪ್ರೇಯಸಿಗಾಗಿ ಸಾಕಷ್ಟು ಕಾದಾಟ ನಡೆಸುತ್ತವೆಯಂತೆ. ಹೆಣ್ಣುಹಾವುಗಳ ಮನಸ್ಸು ಗೆಲ್ಲುವ ಗಂಡು ಹಾವುಗಳು ಅವುಗಳ ಜೊತೆಗೆ ಗಂಟೆಗಟ್ಟಲೇ ಸರಸವಾಡುತ್ತವಂತೆ.
ಸ್ಕಾಟಿಯಾ ವನ್ಯಜೀವಿ ಅಭಯಾರಣ್ಯದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಈ ಎರಡು ಹಾವುಗಳು ಸರಸವಾಡಿರುವ ದೃಶ್ಯಗಳು ಕಂಡುಬಂದಿದೆ. ಆಸ್ಟ್ರೇಲಿಯನ್ ವನ್ಯಜೀವಿ ಸಂರಕ್ಷಣಾಲಯ (AWC) ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ