)
Viral Video: ಇದು ಸೋಷಿಯಲ್ ಮೀಡಿಯಾ ಯುಗ. ಒಂದೇ ಒಂದು ರೀಲ್ಸ್ ವಿಡಯೋ ಮೂಲಕ ಅನೇಕರು ರಾತ್ರೋರಾತ್ರಿ ಸ್ಟಾರ್ ಆಗುತ್ತಿದ್ದಾರೆ. ಜನಪ್ರಿಯತೆಗಾಗಿ ಇಂದು ಅನೇಕರು ಇನ್ನಿಲ್ಲದ ಹುಚ್ಚಾಟ ನಡೆಸುತ್ತಿದ್ದಾರೆ. ರೀಲ್ಸ್ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡವರು ಅನೇಕರಿದ್ದಾರೆ. ರಾತ್ರೋರಾತ್ರಿ ಫೇಮಸ್ ಆಗಬೇಕು ಅನ್ನೋ ಹುಚ್ಚಿನಲ್ಲಿ ಅನೇಕರು ಇನ್ನಿಲ್ಲದ ಹುಚ್ಚು ಸಾಹಸಕ್ಕೆ ಕೈಹಾಕುತ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ರೀಲ್ಸ್ ಮಾಡಲು ಯುವತಿಯೊಬ್ಬಳು ತನ್ನ ಸೀರೆಗೆ ಬೆಂಕಿ ಹಚ್ಚಿಕೊಂಡು ಡ್ಯಾನ್ಸ್ ಮಾಡಿದ್ದಾಳೆ. ಈ ಆಘಾತಕಾರಿ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವೈರಲ್ ಆಗಿರೋ ಈ ವಿಡಿಯೋದಲ್ಲಿ ಯುವತಿಯೊಬ್ಬಳು ಯುವತಿಯೊಬ್ಬಳು ತನ್ನ ಸೀರೆಗೆ ಬೆಂಕಿ ಹಚ್ಚಿಕೊಂಡು ಡ್ಯಾನ್ಸ್ ಮಾಡುತ್ತಿರುವುದನ್ನ ನೀವು ಕಾಣಬಹುದು. ಆಕೆ ಸೀರೆಗೆ ಬೆಂಕಿ ಹತ್ತಿ ಧಗಧಗನೆ ಉರಿಯುತ್ತಿದ್ದರೂ ಡೋಂಟ್ ಕೇರ್ ಅನ್ನದೆ ಡ್ಯಾನ್ಸ್ ಮಾಡುವುದರಲ್ಲಿ ಮಗ್ನಳಾಗಿರುವುದನ್ನ ನೀವು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಭಾರತೀಯ ಯುವಕ-ಯುವತಿಯರು ತಾವು ಫೇಮಸ್ ಆಗ್ಬೇಕು ಅನ್ನೋ ಹುಚ್ಚಿನಲ್ಲಿ ಈ ರೀತಿಯ ಹುಚ್ಚು ಸಾಹಸಕ್ಕೆ ಕೈಹಾಕುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಅನೇಕರು ಈ ರೀತಿಯ ಅಪಾಯಕಾರಿ ಸಾಹಸ ಪ್ರದರ್ಶಿಸುತ್ತಿದ್ದಾರೆ.
ಈ ವಿಡಿಯೋವನ್ನ @more_fun_007 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಸಾವಿರಾರು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಯುವತಿಯ ರೀಲ್ಸ್ ಹುಚ್ಚಾಟ ಕಂಡು ಆಘಾತಗೊಂಡಿದ್ದಾರೆ. ವಿಡಿಯೋ ನೋಡಿದ ಬಹುತೇಕರು ʼಭಾರತೀಯ ಯುವಕ-ಯುವತಿಯರ ಹುಚ್ಚಾಟ ಎಲ್ಲಿಗೆ ಬಂದು ನಿಂತಿದೆ ನೋಡಿʼ ಅಂತಾ ಕಾಮೆಂಟ್ ಮಾಡಿದ್ದಾರೆ. ಈ ರೀತಿಯ ರೀಲ್ಸ್ ಹುಚ್ಚಾಟಕ್ಕೆ ಯಾರೂ ಪ್ರಯತ್ನಿಸಬಾರದು. ಫೇಮಸ್ ಆಗಲು ಇಂದು ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುವ ಹುಚ್ಚು ಸಾಹಸಕ್ಕೆ ಕೈಹಾಕುತ್ತಾರೆ. ಕೇವಲ ಲೈಕ್ಸ್ ಮತ್ತು ವ್ಯೂಸ್ಗಾಗಿ ಈ ರೀತಿ ಮಾಡುವುದು ಎಷ್ಟು ಸರಿ?ʼ ಎಂದು ಪ್ರಶ್ನಿಸಿದ್ದಾರೆ.
ಪ್ರತಿದಿನವೂ ಅನೇಕರು ಈ ರೀತಿಯ ಹುಚ್ಚಾಟ ಮಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕು ಅಂತಾ ಅನೇಕರು ಚಲಿಸುತ್ತಿರುವ ಟ್ರೈನ್ ಬಳಿ ನಿಂತು ವಿಡಿಯೋ ಮಾಡುವುದು, ಹಳಿ ಮೇಲೆ ಮಲಗುವುದು, ಬೆಂಕಿಯೊಂದಿಗೆ ಸರಸವಾಡುವುದು, ಆಳ ನೀರಿನಲ್ಲಿ ಈಜಾಡುವುದು, ಜಲಪಾತದ ಬಳಿ ನಿಂತು ವಿಡಿಯೋ ಮಾಡುವುದು ಮಾಡುತ್ತಿರುತ್ತಾರೆ. ಈ ರೀತಿ ಮಾಡಲು ಹೋಗಿ ಅನೇಕರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ರೀತಿ ರೀಲ್ಸ್ ಹುಚ್ಚು ಇರುವವರಿಗೆ ಮನೆಯಲ್ಲಿ ಬುದ್ಧಿ ಹೇಳುವವರು ಯಾರೂ ಇರುವುದಿಲ್ಲವೇ? ಎಂದು ನೆಟಿಜನ್ಸ್ ಪ್ರಶ್ನಿಸಿದ್ದಾರೆ.