ನಾವು ಬಳಸುವ 10 ರೂ. ನಾಣ್ಯವನ್ನು ಎರಡು ಬಗೆಯ ಲೋಹದಿಂದ ತಯಾರಿಸಲಾಗುತ್ತದೆ. ಹಾಗಾದರೆ ಆ ಲೋಹ ಯಾವುದು ಎಂದು ತಿಳಿಯಲು ಮುಂದೆ ಓದಿ..
ನಮ್ಮ ದೇಶದಲ್ಲಿ ನೋಟುಗಳು ಹಾಗೂ ನಾಣ್ಯಗಳು ಎರಡು ಕೂಡ ಅಸ್ಥಿತ್ವದಲ್ಲಿದೆ. ಅದರಲ್ಲೂ ವಿಭಿನ್ನವಾಗಿರುವ ನಾಣ್ಯ ಎಂದರೆ ಅದು 10 ರೂಪಾಯಿ ನಾಣ್ಯ.
ಭಾರತದಲ್ಲಿ 10 ರೂ. ನಾಣ್ಯ ಎರಡು ಬಣ್ಣಗಳಿಂದ ಕೂಡಿದೆ. ಹೊರಗೆ ಹಳದಿ ಹಾಗೂ ಒಳಗೆ ಬೆಳ್ಳಿ ಬಣ್ಣದಿಂದ ಮಾಡಲ್ಪಟ್ಟಿದೆ.
ಈ 10 ರೂ. ನಾಣ್ಯವನ್ನು ತಯಾರಿಸಲು ಎರಡು ರೀತಿಯ ಲೋಹಗಳನ್ನು ಬಳಸಲಾಗುತ್ತದೆ.
ಈ ನಾಣ್ಯಗಳ ಒಳ ಭಾಗ ತರ ನಾಣ್ಯಗಳಂತೆಯೇ ಬೆಳ್ಳಿ ಬಣ್ಣದಲ್ಲಿ ಮಾಡಲಾಗಿರುತ್ತದೆ.
ಈ ನಾಣ್ಯ ಒಟ್ಟು 7.71 ಗ್ರಾಂ ತೂಕ ಇದ್ದು, ಒಳಾಂಗಣ 3.26 ಗ್ರಾಂ, ಹಾಗೂ ಹೊರ ಭಾಗ 4.45 ಗ್ರಾಂ ಇದೆ.
ಈ ನಾಣ್ಯದಲ್ಲಿನ ಒಳ ಭಾಗವೂ ಎಂದರೆ ಬೆಳ್ಳಿ ಬಣ್ಣದ ಭಾಗವೂ ಕುಪ್ರೊ ನಿಕಲ್ ಎಂಬ ಲೋಹದಿಂದ ಮಾಡಲ್ಪಟ್ಟಿದೆ.
ಈ ಮಧ್ಯದ ಭಾಗವೂ 75 ಪ್ರತಿಶತ ತಾಮ್ರ ಹಾಗೂ 25 ಪ್ರತಿಶತ ನಿಕಲ್‌ನಿಂದ ಮಾಡಲ್ಪಟ್ಟಿದೆ.
ಈ ನಾಣ್ಯದಲ್ಲಿನ ಹೊರಭಾಗವೂ ಎಂದರೆ ಹಳದಿ ಭಾಗವೂ ಅಲ್ಯೂಮಿನಿಯಮ್‌ನಿಂದ ಮಾಡಲ್ಪಟ್ಟಿರುತ್ತದೆ.
ಈ ನಾಣ್ಯದಲ್ಲಿನ ಹೊರ ಭಾಗವೂ 92 ಪ್ರತಿಶತ ತಾಮ್ರ ಹಾಗೂ 6 ಪ್ರತಿಶತ ಅಲ್ಯೂಮಿನಿಯಂನಿಂಮದ ಮಾಡಲ್ಪಟ್ಟಿರುತ್ತದೆ.