Viral Video: ಗಂಡನಿಂದ ಡಿವೋರ್ಸ್‌ ಸಿಕ್ಕಿದ್ದಕ್ಕೆ ನೃತ್ಯ ಮಾಡಿ ಸಂಭ್ರಮಿಸಿದ ಮಹಿಳೆ; ವಿಡಿಯೋ ಸಖತ್‌ ವೈರಲ್!!

Divorce Case: ಪಾಕಿಸ್ತಾನದಲ್ಲಿ ವಿಚ್ಛೇದಿತ ಮಹಿಳೆಯೊಬ್ಬಳು ತನ್ನ ಗಂಡನಿಂದ ಬೇರೆಯಾದ ಖುಷಿಗೆ ಪಾಕಿಸ್ತಾನಿ ಹಾಡಿಗೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ. ಪತಿಯಿಂದ ಡಿವೋರ್ಸ್‌ ಪಡೆದ ಸಂಭ್ರಮದಲ್ಲಿ ತಮ್ಮ ಸಂತೋಷವನ್ನ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

Written by - Puttaraj K Alur | Last Updated : Mar 5, 2025, 07:32 PM IST
  • ಗಂಡನಿಂದ ಡಿವೋರ್ಸ್‌ ಸಿಕ್ಕಿದ್ದಕ್ಕೆ ನೃತ್ಯ ಮಾಡಿ ಸಂಭ್ರಮಿಸಿದ ಪಾಕಿಸ್ತಾನಿ ಮಹಿಳೆ
  • ಸಮಾಜದಲ್ಲಿ ಮಹಿಳೆಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ ಮಹಿಳೆ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿರುವ ಮಹಿಳೆಯ ವಿಡಿಯೋ
Viral Video: ಗಂಡನಿಂದ ಡಿವೋರ್ಸ್‌ ಸಿಕ್ಕಿದ್ದಕ್ಕೆ ನೃತ್ಯ ಮಾಡಿ ಸಂಭ್ರಮಿಸಿದ ಮಹಿಳೆ; ವಿಡಿಯೋ ಸಖತ್‌ ವೈರಲ್!!
ಡಿವೋರ್ಸ್‌ ಸಿಕ್ಕಿದ್ದಕ್ಕೆ ನೃತ್ಯ ಮಾಡಿದ ಮಹಿಳೆ!!

Divorce Viral Video: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್‌ ಕೇಸ್‌ಗಳು ಹೆಚ್ಚಾಗುತ್ತಿದ್ದು, ಈ ಆತಂಕಕಾರಿ ಬೆಳವಣಿಗೆಯು ಹೊಂದಾಣಿಕೆಯ ದಾಂಪತ್ಯದ ಮೇಲಿನ ನಂಬಿಕೆಯನ್ನ ದಿನೇ ದಿನೇ ಕಡಿಮೆ ಮಾಡುತ್ತಿದೆ. ಈಗಿನ ಕಾಲದವರು ಮಾದುವೆಯಾದ ಸಂಗಾತಿಯೊಂದಿಗೆ ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳದೆ ಇರುವುದು ಅಥವಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳದಿರುವುದೇ ಇದಕ್ಕೆ ಪ್ರಮುಖ ಕಾರಣ ಎನ್ನಬಹುದು. 

Add Zee News as a Preferred Source

ಒಂದು ವೇಳೆ ಈ ರೀತಿಯ ವಿಚ್ಛೇದನ ವಿಚಾರಗಳಲ್ಲಿ ಇಬ್ಬರು ಒಪ್ಪಿ ನಿರ್ಣಯ ತೆಗೆದುಕೊಂಡು ಬೇರೆಯಾಗಿದ್ದರೂ ಸಹ ಎಲ್ಲಾ ತಪ್ಪನ್ನು ಹುಡುಗಿಯ ಮೇಲೆಯೇ ಹಾಕುತ್ತಾರೆ. ಇನ್ನು ವಿಚ್ಛೇದಿತ ಮಾಹಿಳೆಯನ್ನು ಈ ಸಮಾಜ ನೋಡುವ ರೀತಿಯೇ ಬೇರೆ. ಈ ರೀತಿ ಮಹಿಳೆಯರನ್ನ ವಿನಾಕಾರಣಕ್ಕೆ ಆರೋಪಿಸುವ ಜನರಿಗೆ ಪಾಕಿಸ್ತಾನದ ಮಹಿಳೆಯೊಬ್ಬಳು ತನ್ನ ವಿಡಿಯೋ ಮೂಲಕ ಸಖತ್‌ ಟಾಂಗ್‌ ನೀಡಿದ್ದಾಳೆ.

ಹೌದು, ಪಾಕಿಸ್ತಾನದಲ್ಲಿ ವಿಚ್ಛೇದಿತ ಮಹಿಳೆಯೊಬ್ಬಳು ತನ್ನ ಗಂಡನಿಂದ ಬೇರೆಯಾದ ಖುಷಿಗೆ ಪಾಕಿಸ್ತಾನಿ ಹಾಡಿಗೆ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ. ಪತಿಯಿಂದ ಡಿವೋರ್ಸ್‌ ಪಡೆದ ಸಂಭ್ರಮದಲ್ಲಿ ತಮ್ಮ ಸಂತೋಷವನ್ನ ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಮೂರು ಮಕ್ಕಳ ತಾಯಿಯಾಗಿರುವ ಅಜೀಮಾ ಇಹ್ಸಾನ್‌ ಎಂಬುವರೇ ದಾಂಪತ್ಯ ಜೀವನದಿಂದ ಹೊರಬಂದಿದ್ದಾರೆ. ಅಷ್ಟೇ ಅಲ್ಲದೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಜೊತೆಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ಹೆತ್ತ ಮಗಳ ಎದೆ ಹಾಲು ಕುಡಿದ ತಂದೆ..! 258 ಕೋಟಿ ಮಾರಾಟವಾದ ಈ ಫೋಟೋ ಹಿಂದಿದೆ ಕಣ್ಣೀರಿನ ಕಥೆ..

 
 
 
 

 
 
 
 
 
 
 
 
 
 
 

A post shared by Λzima (@azima_ihsan)

ʼDivorced. Desi. Thrivingʼ ಎಂದು ಅಪರೂಪದ ಹೃದಯಸ್ಪರ್ಶಿ ಶೀರ್ಷಿಕೆಯುಳ್ಳ ಪೋಸ್ಟ್‌ ಹಂಚಿಕೊಂಡಿರುವ ಅವರು, ಪಾಕಿಸ್ತಾನಿ ಸಮಾಜದಲ್ಲಿನಲ್ಲಿ ಕಟ್ಟುಪಾಡುಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಈ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಕುರಿತಾಗಿ ಮನಕಲಕುವ ಬರಹವನ್ನು ಪ್ರಕಟಿಸಿದ್ದಾರೆ.

"ಸಾಮಾಜ ಎನನ್ನುತ್ತದೆಯೋ ಎಂಬ ಭಯಕ್ಕೆ ಹೆದರಿ ನಿಮಗಾಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡು ಸುಮ್ಮನಿರಬೇಡಿ. ಬದಲಾಗಿ ನಿಮ್ಮ ಪರವಾಗಿ ನೀವು ಧ್ವನಿ ಎತ್ತಿರಿ.. ದಾಂಪತ್ಯ ಜೀವನವು ಯಾವಾಗಲು ಪರಸ್ಪರ ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಇರಬೇಕೇ ಹೊರತು ದಬ್ಬಾಳಿಕೆಯಿಂದಲ್ಲ. ಇಂತಹ ನರಕದಿಂದ ಹೊರಬರುವುದು ತಪ್ಪಲ್ಲ. ಮುಂದಿನ ಜೀವನ ಸಾವಾಲಾಗಿದ್ದರು ನನ್ನ ಸ್ವಂತ ನಿರ್ಣಯ ತೆಗೆದುಕೊಳ್ಳುವ ಸ್ವಾತಂತ್ರ್ಯವು ನನಗೆ ಈ ವಿಚ್ಛೇದನದಿಂದ ಸಿಕ್ಕಿದೆ" ಎಂದು ಅಜೀಮಾ ಬರೆದುಕೊಂಡಿದ್ದಾರೆ. 

ಇನ್ನೂ ವಿಡಿಯೋದಲ್ಲಿ ಅವರು ಪಾಕಿಸ್ತಾನಿ ಹಾಡಿಗೆ ಸಂಭ್ರಮದಿಂದ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ಲಕ್ಷಾಂತರ ಜನರ ಗಮನ ಸೆಳೆದಿದೆ. ಅವರ ಈ ಫೋಸ್ಟ್‌ ಬಗ್ಗೆ ಇದೀಗ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಅವರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಅವರ ಈ ನಿರ್ಧಾರವನ್ನ ಟೀಕಿಸಿದ್ದಾರೆ. 

ಇದನ್ನೂ ಓದಿ: ಉತ್ತರ ಕೊರಿಯಾದ ನಾಯಕನ ಪತ್ನಿ ಪಾಲೆಸಲೇಬೇಕಾದ ನಿಯಮಗಳಿವು! ದಾರಿ ತಪ್ಪಿದರೆ ಕ್ರೂರಿ ರಾಜ ಕೊಡುವ ಶಿಕ್ಷೆ ಎಷ್ಟು ಭಯಾನಕವಾದದ್ದು ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News