ಮೂತ್ರದಿಂದ ಕಣ್ಣು ಸ್ವಚ್ಛಗೊಳಿಸಿಕೊಂಡ ಮಹಿಳೆ.. ಮುಂದಾಗಿದ್ದು ಭಯಾನಕ..! ವಿಡಿಯೋ ವೈರಲ್‌ 

Woman clean her eyes from urine : ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ. ಹೆಚ್ಚಾಗಿ ಕಾಡು ಪ್ರಾಣಿಗಳ, ಹಾವಿನ ವಿಡಿಯೋಗಳು ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲದೆ, ಕೆಲವರು ನೀಡುವ ಆರೋಗ್ಯ ಸಲಹೆಗಳ ಕ್ಲಿಪ್‌ಗಳು ಸಹ ಟ್ರೇಂಡ್‌ ಆಗುತ್ತವೆ.. ಇದೀಗ ಮಹಿಳೆಯೊಬ್ಬಳು ನೀಡಿದ ವಿಚಿತ್ರ ಹೆಲ್ತ್‌ ಟಿಪ್ಸ್‌ ವಿಡಿಯೋ ಸಖತ್‌ ಟ್ರೆಂಡಿಗ್‌ ಆಗಿದೆ..

Written by - Krishna N K | Last Updated : Jul 2, 2025, 07:21 PM IST
    • ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಚಿತ್ರ ವಿಚಿತ್ರ ವಿಡಿಯೋಗಳು ವೈರಲ್‌ ಆಗುತ್ತಲೇ ಇರುತ್ತವೆ.
    • ಇದೀಗ ಮಹಿಳೆಯೊಬ್ಬಳು ನೀಡಿದ ವಿಚಿತ್ರ ಹೆಲ್ತ್‌ ಟಿಪ್ಸ್‌ ವಿಡಿಯೋ ಸಖತ್‌ ಟ್ರೆಂಡಿಗ್‌ ಆಗಿದೆ..
    • ಮಹಿಳೆಯೊಬ್ಬರು ಮೂತ್ರದಿಂದ ಕಣ್ಣು ತೊಳೆಯುತ್ತಿರುವ ವೀಡಿಯೊ ಅಂತರ್ಜಾರಲದಲ್ಲಿ ಹಂಚಿಕೊಳ್ಳಲಾಗಿದೆ.
ಮೂತ್ರದಿಂದ ಕಣ್ಣು ಸ್ವಚ್ಛಗೊಳಿಸಿಕೊಂಡ ಮಹಿಳೆ.. ಮುಂದಾಗಿದ್ದು ಭಯಾನಕ..! ವಿಡಿಯೋ ವೈರಲ್‌ 

Shocking video : ಸಾಮಾಜಿಕ ಜಾಲತಾಣ ತುಂಬಾ ವೇಗವಾಗಿ ಸಾಗುತ್ತಿದೆ. ದೇಶ ವಿದೇಶಗಳಲ್ಲಿ ನಡೆಯುವ ವಿದ್ಯಾಮಾನಗಳು ಈಗ ಕ್ಷಣಾರ್ಧದಲ್ಲಿ ಎಲ್ಲರನ್ನು ತಲುಪುತ್ತಿವೆ. ಈ ಪೈಕಿ ಕೆಲವೊಂದಿಷ್ಟು ಉಪಯೋಗಕಾರಿ, ಇನ್ನೂ ಕೆಲವು ಆಘಾತಕಾರಿ ವಿಚಾರಗಳು ಸಹ ಜನರನ್ನು ತಲುಪುತ್ತಿವೆ. ಈ ಪರಿಸ್ಥಿತಿಯಲ್ಲಿ, ಮಹಿಳೆಯೊಬ್ಬಳ ವಿಡಿಯೋ ಗಮನ ಸೆಳೆದಿದೆ..

Add Zee News as a Preferred Source

ಮಹಿಳೆಯೊಬ್ಬರು ಮೂತ್ರದಿಂದ ಕಣ್ಣು ತೊಳೆಯುತ್ತಿರುವ ವೀಡಿಯೊ ಅಂತರ್ಜಾರಲದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ನೋಡಿ ಸ್ವತಃ ವೈದ್ಯರೇ ಶಾಕ್‌ ಆಗಿದ್ದಾರೆ. ಅಲ್ಲದೆ, ಮಹಿಳೆಯ ಪೋಸ್ಟ್ ಮಾಡಿದ ವೀಡಿಯೊಗೆ ತೀವ್ರ ವಿರೋಧ ಮತ್ತು ಟೀಕೆಗಳನ್ನು ಎದುರಾಗಿವೆ.. ಅಸಲಿಗೆ ಆ ಕ್ಲಿಪ್‌ನಲ್ಲಿ ಏನಿದೆ.. ? ಬನ್ನಿ ನೋಡೋಣ..

ಇದನ್ನೂ ಓದಿ:DJ ಶಬ್ದದಿಂದ ಹೃದಯಾಘಾತ... ಭಯಾನಕ ವಿಷಯ ಬಹಿರಂಗ ಪಡಿಸಿದ WHO...! ವರದಿ ನೋಡಿದ್ರೇನೆ.. ನೀವು ಶಾಕ್‌ ಆಗ್ತಿರಾ

ಪುಣೆಯ ಮಹಿಳೆಯೊಬ್ಬರು ತಮ್ಮ ಸಾಮಾಜಿಕ ಮಾಧ್ಯಮ ಪುಟದಲ್ಲಿ ಮೂತ್ರದಿಂದ ಕಣ್ಣು ತೊಳೆಯುವ ಬಗ್ಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ, ಮಹಿಳೆ ತನ್ನ ಕಣ್ಣುಗಳನ್ನು ಮೂತ್ರದಿಂದ ಹೇಗೆ ತೊಳೆಯಬೇಕು ಎಂಬುದನ್ನು ವಿವರಿಸುತ್ತಾರೆ, ಅದು ಅತ್ಯುತ್ತಮ ವಿಧಾನ ಎಂದು ಹೇಳಿಕೊಂಡಿದ್ದಾರೆ. ವೀಡಿಯೊದಲ್ಲಿ, ಬೆಳಿಗ್ಗೆ ಮೂತ್ರದಿಂದ ಕಣ್ಣುಗಳನ್ನು ತೊಳೆಯುವುದರಿಂದ ವಿವಿಧ ಪ್ರಯೋಜನಗಳನ್ನು ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ. ಅಷ್ಟೇ ಅಲ್ಲ, ಹೀಗೆ ಮಾಡುವುದರಿಂದ ನಿರ್ಜಲೀಕರಣ, ಕಣ್ಣಿನ ಕಿರಿಕಿರಿ ಮತ್ತು ಕಣ್ಣುಗಳ ಕೆಂಪು ಬಣ್ಣ ದೂರಾಗುತ್ತದೆ ಅಂತ ಸಮರ್ಥಿಸಿಕೊಂಡಿದ್ದಾರೆ.. 

ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿ ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಮಹಿಳೆಯ ಈ ಕ್ರಮವನ್ನು ಅನೇಕ ಜನರು ವಿರೋಧಿಸಿದರು. ಇದರಿಂದಾಗಿ ಮಹಿಳೆ ತನ್ನ ಇನ್‌ಸ್ಟಾಗ್ರಾಮ್ ಪುಟದಿಂದ ವಿಡಿಯೋವನ್ನು ಅಳಿಸಿಹಾಕಿದ್ದಾರೆ. ಅದರೂ, ವಿಡಿಯೋ ಡೌನ್‌ಲೋಡ್ ಮಾಡಿದ ಅನೇಕ ಜನರು ಇದರ ರೀ ಪೋಸ್ಟ್‌ ಮಾಡಿದ್ದಾರೆ.. ಇದಕ್ಕೆ ವೈದ್ಯರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ವಾಟರ್‌ ಕ್ಯಾನ್‌ನಲ್ಲಿರುವ ನೀರು ಕುಡಿತೀರಾ... ಹುಷಾರ್‌..!! ಅದಕ್ಕೂ ಮುನ್ನ ಈ ವಿಚಾರ ತಿಳಿದುಕೊಳ್ಳಿ..

ಈ ಆಘಾತಕಾರಿ ವಿಡಿಯೋವನ್ನು ತಮ್ಮ ಎಕ್ಸ್ ಪುಟದಲ್ಲಿ ಹಂಚಿಕೊಂಡಿರುವ ವೈದ್ಯರು, " ಈ ರೀತಿ ನಿಮ್ಮ ಕಣ್ಣಿಗೆ ಮೂತ್ರ ಹಾಕಬೇಡಿ. ಇದು ಅಪಾಯಕಾರಿ. ಕೆಲವರು ಇಂತಹ ಕೆಲಸಗಳನ್ನು ಮಾಡುತ್ತಿರುವುದು ದುಃಖಕರ" ಎಂದು ಎಚ್ಚರಿಕೆ ನೀಡಿದ್ದಾರೆ.. ಒಟ್ಟಿನಲ್ಲಿ ವಿಡಿಯೋ ಮಾತ್ರ ಸಖತ್‌ ವೈರಲ್‌ ಆಗಿದೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News