ಮಕ್ಕಳಂತೆ ಸಾಲಾಗಿ ನಿಲ್ಲಿಸಿ ನಾಗರ ಹಾವುಗಳನ್ನು ಸ್ನಾನ ಮಾಡಿಸುತ್ತಿರುವ ಮಹಿಳೆ !ಮೈನವಿರೇಳಿಸುವ ವಿಡಿಯೋ ಇಲ್ಲಿದೆ !

ಹಾವಿಗೆ ಸಂಬಂಧಿಸಿದ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಹಾವುಗಳನ್ನು ಸ್ನಾನ ಮಾಡಿಸುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.   

Written by - Ranjitha R K | Last Updated : Apr 25, 2025, 04:44 PM IST
  • ಕೆಲವೊಂದು ವಿಡಿಯೋಗಳು ಶೇರ್ ಮಾಡಿದ ಕೂಡಲೇ ವೈರಲ್ ಆಗಿ ಬಿಡುತ್ತವೆ.
  • ಪ್ರಾಣಿಗಳ ವಿಡಿಯೋಗಳನ್ನು ಇಷ್ಟ ಪಡುವ ಒಂದು ವರ್ಗವೇ ಇದೆ.
  • ದೇಶದ ಕೆಲವು ಭಾಗಗಳಲ್ಲಿ ನಾಗರ ಹಾವುಗಳನ್ನು ದೇವರೆಂದು ಪೂಜಿಸಲಾಗುತ್ತದೆ.
ಮಕ್ಕಳಂತೆ ಸಾಲಾಗಿ ನಿಲ್ಲಿಸಿ ನಾಗರ ಹಾವುಗಳನ್ನು ಸ್ನಾನ ಮಾಡಿಸುತ್ತಿರುವ ಮಹಿಳೆ !ಮೈನವಿರೇಳಿಸುವ ವಿಡಿಯೋ ಇಲ್ಲಿದೆ !

ಬೆಂಗಳೂರು : ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ರೀತಿಯ ವಿಡಿಯೋಗಳು ಹರಿದಾಡುತ್ತವೆ. ಕೆಲವೊಂದು ವಿಡಿಯೋಗಳು ಶೇರ್ ಮಾಡಿದ ಕೂಡಲೇ ವೈರಲ್ ಆಗಿ ಬಿಡುತ್ತವೆ. ಅದರಲ್ಲಿಯೂ ಪ್ರಾಣಿಗಳ ವಿಡಿಯೋ, ಮಕ್ಕಳ ವಿಡಿಯೋ, ಅಡುಗೆಗೆ ಸಂಬಂಧಿಸಿದ ವಿಡಿಯೋಗಳನ್ನು ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗುತ್ತದೆ. ಈ ಪೈಕಿ ಪ್ರಾಣಿಗಳ ವಿಡಿಯೋಗಳನ್ನು  ಇಷ್ಟ ಪಡುವ ಒಂದು ವರ್ಗವೇ ಇದೆ. 

Add Zee News as a Preferred Source

ಈ ಭೂಮಿ ಮೇಲೆ ಸಾವಿರಾರು ಪ್ರಭೇದದ ಹಾವುಗಳಿವೆ. ಇವುಗಳಳಲ್ಲಿ ಕೆಲವು ನಿರುಪದ್ರವಿಗಳಾದರೆ ಇನ್ನು ಕೆಲವು ವಿಷ ಸರ್ಪಗಳೇ. ನಮ್ಮ ದೇಶದ ಕೆಲವು ಭಾಗಗಳಲ್ಲಿ ನಾಗರ ಹಾವುಗಳನ್ನು ದೇವರೆಂದು ಪೂಜಿಸಲಾಗುತ್ತದೆ. ಹಾವಿನ  ಮೇಲೆ ಅನೇಕ ಸಿನಿಮಾ, ಧಾರಾವಾಹಿಗಳು ಕೂಡಾ ಮಾಡಲಾಗಿದೆ. ಈ ಪೈಕಿ ಬಹುತೇಕ ಸಿನಿಮಾ, ಧಾರವಾಹಿಗಳು ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. 

ಇದನ್ನೂ ಓದಿ : ಇದೇ ನೋಡಿ.. ಈ ಭೂಮಿಯ ಮೇಲಿನ ಅತಿ ದೊಡ್ಡ "ಅನಕೊಂಡ"...! ಅದರ ಉದ್ದ ತಿಳಿದಿದ್ದರೆ.. ಶಾಕ್‌ ಆಗ್ತಿರಾ..

ಅದೇ ರೀತಿ ಹಾವಿಗೆ ಸಂಬಂಧಿಸಿದ ವಿಡಿಯೋಗಳು ಕೂಡಾ ಸಾಮಾಜಿಕ ಮಾಧ್ಯಮಗಳಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿವೆ. ಇದೀಗ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೆಯಾಗಿರುವ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. 

ಇಲ್ಲಿ ಮಹಿಳೆಯೊಬ್ಬರು ನಾಗರ ಹಾವುಗಳನ್ನು ಸಾಲಾಗಿ ನಿಲ್ಲಿಸಿ, ಮಕ್ಕಳ ಹಾಗೆ ಒಂದೊಂದೇ ಹಾವನ್ನು ಸ್ನಾನ ಮಾಡಿಸುವುದನ್ನು ಕಾಣಬಹುದು. ಇಲ್ಲಿ ಮಹಿಳೆ ಬೇಸಿಗೆ ಸೆಖೆ ಜಾಸ್ತಿ ಎನ್ನುವ ಕಾರಣಕ್ಕೆ ಹಾವುಗಳನ್ನು ನೀರಿನಲ್ಲಿ ಮುಳುಗಿಸುತ್ತಾರೆಯೋ ಅಥವಾ ಹಾವುಗಳಿಗೆ ಸ್ನಾನ ಮಾಡಿಸುವುದು ಅವರಿಗೆ ಪರಿ ಪಾಠವೋ ಗೊತ್ತಿಲ್ಲ. ಆದರೆ ಒಂದು ಪಾತ್ರೆಯಲ್ಲಿ ನೀರು ಇರಿಸಿಕೊಂಡು ನಾಗರಹಾವನ್ನು ಅದರಲ್ಲಿ ಮುಳುಗಿಸಿ ಸ್ನಾನ ಮಾಡಿಸುವುದನ್ನು ಮಾತ್ರ ಕಾಣಬಹುದು. 

 

ಇದನ್ನೂ ಓದಿ : ಮದುವೆ ಮಂಟಪದಲ್ಲಿದ್ದ ನೀಲಿ ಡ್ರಮ್‌ ಒಳಗೆ ಇದ್ದ ವಸ್ತು ನೋಡಿ ವರ ಶಾಕ್‌..! ವಿಡಿಯೋ ನೋಡಿ

ಈ ವಿಡಿಯೋವನ್ನು Aastha ಎನ್ನುವವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಲ್ಲದೆ, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.  

 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

 

 

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News