)
Saweety Boora flights with Deepak Hooda: ಪೊಲೀಸ್ ಠಾಣೆಯಲ್ಲಿಯೇ ಅಂತಾರಾಷ್ಟ್ರೀಯ ಬಾಕ್ಸರ್ ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಸವೀಟಿ ಬೂರಾ ತಮ್ಮ ಪತಿ, ಮಾಜಿ ಭಾರತೀಯ ಕಬಡ್ಡಿ ಆಟಗಾರ ಹಾಗೂ ಏಷ್ಯನ್ ಗೇಮ್ಸ್ ಕಂಚಿನ ಪದಕ ವಿಜೇತ ದೀಪಕ್ ಹೂಡಾಗೆ ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ದೀಪಕ್ ಹೂಡಾ ಮತ್ತು ಅವರ ಕುಟುಂಬಸ್ಥರ ವಿರುದ್ಧ ಸವೀಟಿ ಬೂರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹೀಗಾಗಿ ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಇಬ್ಬರ ಕುಟುಂಬ ಸದಸ್ಯರು ಕುಳಿತಿದ್ದಾಗಲೇ ಏಕಾಏಕಿ ಪತಿ ದೀಪಕ್ ಹೂಡಾಗೆ ಸವೀಟಿ ಥಳಿಸಿದ್ದಾರೆ. ಮಾರ್ಚ್ 15ರಂದು ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
? World Champion Boxer Saweety Bora tried to assault her husband Kabbadi Star Deepak Hooda in Police Station
They have reportedly filed for divorce!pic.twitter.com/TNEkdVujvU https://t.co/lzyyjeLv3W
— The Khel India (@TheKhelIndia) March 25, 2025
ಕಾರು, ಕೋಟ್ಯಂತರ ಹಣ ಪಡೆದಿದ್ದರೂ ಸಹ ದೀಪಕ್ ಇನ್ನೂ ಹೆಚ್ಚಿನ ವರದಕ್ಷಿಣೆ ನೀಡಬೇಕೆಂದು ಪೀಡಿಸುತ್ತಿದ್ದಾರೆ. ಇದೇ ವಿಚಾರವಾಗಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾರೆ ಎಂದು ಸವೀಟಿ ಆರೋಪಿಸಿದ್ದರು. ಇದೇ ವಿಚಾರವಾಗಿ ದೀಪಕ್ ಮತ್ತವರ ಕುಟುಂಬಸ್ಥರ ವಿರುದ್ಧ ಹರಿಯಾಣದ ಹಿಸ್ಸಾರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ FIR ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ತಮ್ಮಿಬ್ಬರ ಹಳಸಿದ ಸಂಬಂಧದಿಂದಾಗಿ ಸವೀಟಿ ಪತಿಯಿಂದ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದರು.
ಪೊಲೀಸ್ ಠಾಣೆಯಲ್ಲಿ ತಮ್ಮ ಕುಟುಂಬಸ್ಥರ ಜೊತೆಗೆ ಕುಳಿತಿದ್ದ ಸವೀಟಿ, ಪತಿ ದೀಪಕ್ ಮಾತಿಗೆ ಕೆರಳಿ ಏಕಾಏಕಿ ಥಳಿಸಲು ಮುಂದಾಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತನ್ನ ಪೋಷಕರೊಂದಿಗೆ ಕುಳಿತಿದ್ದ ಸವೀಟಿ, ಎದುರಿಗಿದ್ದ ಪತಿ ದೀಪಕ್ ಜೊತೆಗೆ ವಾಗ್ವಾದಕ್ಕಿಳಿದಿದ್ದಾರೆ. ಈ ವೇಳೆ ತಾಳ್ಮೆ ಕಳೆದುಕೊಂಡ ಅವರು ಏಕಾಏಕಿ ದೀಪಕ್ ಶರ್ಟ್ ಹಿಡಿದು ಥಳಿಸಿದ್ದಾರೆ. ಈ ಜೋಡಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ಕೆಲ ದಿನಗಳಷ್ಟೇ ಕಳೆದಿದೆ. ಪ್ರಸ್ತುತ ಅರ್ಜಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದರ ನಡುವೆಯೇ ಇಬ್ಬರ ನಡುವೆ ಫೈಟ್ ನಡೆದಿದ್ದು, ಇಬ್ಬರ ಕುಟುಂಬಸ್ಥರಲ್ಲಿಯೂ ಬೇಸರ ಮೂಡಿಸಿದೆ.
ಸೆಕ್ಷನ್ 85ರ ಅಡಿ ಪ್ರಕರಣ ದಾಖಲು!
ದೀಪಕ್ ಹೂಡಾ ಹೆಚ್ಚುವರಿ ವರದಕ್ಷಿಣೆ ಜೊತೆಗೆ ದುಬಾರಿ ಮೌಲ್ಯದ ಫಾರ್ಚೂನರ್ ಕಾರನ್ನು ವರದಕ್ಷಿಣೆ ರೂಪದಲ್ಲಿ ಕೇಳಿ ನನ್ನನ್ನು ಪೀಡಿಸುತ್ತಿದ್ದಾರೆ ಅಂತಾ ಸವೀಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅವರ ದೂರಿನ ಬೆನ್ನಲ್ಲೇ ದೀಪಕ್ ಮತ್ತು ಅವರ ಕುಟುಂಬಸ್ಥರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 85ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ ಸವೀಟಿ ಅವರ ಕುಟುಂಬ ನನ್ನ ಆಸ್ತಿಯನ್ನು ಕಬಳಿಸಿ ಬೆದರಿಕೆ ಹಾಕಿದೆ ಅಂತಾ ದೀಪಕ್ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.