)
ಕ್ವೆಟ್ಟಾ: ಬಲೂಚಿಸ್ತಾನದ ಕ್ವೆಟ್ಟಾ ನಗರದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಿಂದಾಗಿ 10 ಜನರು ಸಾವನ್ನಪ್ಪಿದ್ದಲ್ಲದೆ 32 ಜನರು ಗಾಯಗೊಂಡಿದ್ದಾರೆ.ಕ್ವೆಟ್ಟಾದಲ್ಲಿರುವ ಫ್ರಾಂಟಿಯರ್ ಕಾರ್ಪ್ಸ್ (ಎಫ್ಸಿ) ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ಪ್ರಬಲ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಲೂಚಿಸ್ತಾನದ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ಅವರು ಮಂಗಳವಾರ ಕ್ವೆಟ್ಟಾದ ಬೀದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿರುವುದಲ್ಲದೆ 32 ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
BREAKING: Powerful explosion near FC headquarters in Quetta, Pakistan, followed by heavy gunfire. Multiple fatalities. pic.twitter.com/Vor9rIzfL9
— AZ Intel (@AZ_Intel_) September 30, 2025
ಸದ್ಯ 32 ಗಾಯಾಳುಗಳನ್ನು ನಾಗರಿಕ ಆಸ್ಪತ್ರೆ ಮತ್ತು ಆಘಾತ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.ಸ್ಫೋಟದ ನಂತರ, ಬಲೂಚಿಸ್ತಾನ್ ಆರೋಗ್ಯ ಇಲಾಖೆಯು ರಾಜಧಾನಿಯಾದ್ಯಂತ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಆರೋಗ್ಯ ಕಾರ್ಯದರ್ಶಿ ಮುಜಿಬುರ್ ರೆಹಮಾನ್ ತಿಳಿಸಿದ್ದಾರೆ.
'ಕ್ವೆಟ್ಟಾ ಸಿವಿಲ್ ಆಸ್ಪತ್ರೆ, ಬಲೂಚಿಸ್ತಾನ್ ವೈದ್ಯಕೀಯ ಕಾಲೇಜು (ಬಿಎಂಸಿ) ಆಸ್ಪತ್ರೆ ಕ್ವೆಟ್ಟಾ ಮತ್ತು ಟ್ರಾಮಾ ಸೆಂಟರ್ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.ಎಲ್ಲಾ ಸಲಹೆಗಾರರು, ವೈದ್ಯರು, ಔಷಧಿಕಾರರು, ಸ್ಟಾಫ್ ನರ್ಸ್ಗಳು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಆಸ್ಪತ್ರೆಗಳಲ್ಲಿ ಹಾಜರಿರುವಂತೆ ಸೂಚಿಸಲಾಗಿದೆ. ಎಂದು ತಿಳಿಸಿದ್ದಾರೆ' ಎಂದು ರೆಹಮಾನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.