ಈ ದೇಶದಲ್ಲಿ ಹಸಿವಿನಿಂದ 2 ದಶಲಕ್ಷ ಜನರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಯುಕ್ತ ರಾಷ್ಟ್ರ

ಯುನೈಟೆಡ್ ನೇಷನ್ಸ್ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ ಬರಗಾಲ ಪೀಡಿತ ಎಥಿಯೋಪಿಯಾ ಮತ್ತು ಕೀನ್ಯಾ ಹಾಗೂ ಸೋಮಾಲಿಯಾ, ನೀರು ಮತ್ತು ಆಹಾರ ಕೊರತೆಯ ಅಗತ್ಯತೆಗಳನ್ನು ಪೂರೈಸಲು ಒಟ್ಟು 4.5 ಕೋಟಿ ಡಾಲರ್ ಅನ್ನು ನಿಗದಿಪಡಿಸಿದೆ.

Last Updated : Jun 6, 2019, 08:19 AM IST
ಈ ದೇಶದಲ್ಲಿ ಹಸಿವಿನಿಂದ 2 ದಶಲಕ್ಷ ಜನರ ಸಾವಿನ ಬಗ್ಗೆ ಆತಂಕ ವ್ಯಕ್ತಪಡಿಸಿದ ಸಂಯುಕ್ತ ರಾಷ್ಟ್ರ  title=
File Image

ಸಂಯುಕ್ತ ರಾಷ್ಟ್ರ: ವಿಶ್ವಸಂಸ್ಥೆಯ ತುರ್ತು ಪರಿಹಾರ ನಿಧಿಯಿಂದ ಸೊಮಾಲಿಯಾಕ್ಕೆತಕ್ಷಣವೇ  ಅಂತರಾಷ್ಟ್ರೀಯ ನೆರವು ಕಳುಹಿಸದಿದ್ದರೆ, ಬೇಸಿಗೆಯ ಕೊನೆಯಲ್ಲಿ ಎರಡು ದಶಲಕ್ಷಕ್ಕಿಂತ ಹೆಚ್ಚಿನ ಪುರುಷರು, ಮಹಿಳೆಯರು ಮತ್ತು ಮಕ್ಕಳು ಹಸಿವಿನಿಂದ ಸಾಯುತ್ತಾರೆ ಎಂದು ಸಂಯುಕ್ತ ರಾಷ್ಟ್ರ(ಯುಎನ್) ಆತಂಕ ವ್ಯಕ್ತಪಡಿಸಿದೆ.

ಯುಎನ್ ಅಂಡರ್ ಸೆಕ್ರೆಟರಿ - ಜನರಲ್ ಮಾರ್ಕ್ ಲಾಕೆಕ್ ಬರಗಾಲದ ನಂತರ ಸೊಮಾಲಿಯಾಕ್ಕೆ 70 ಮಿಲಿಯನ್ ಡಾಲರ್ ಅಗತ್ಯವಿದೆ ಎಂದು ಹೇಳಿದರು. ಮಳೆಯ ಕೊರತೆಯಿಂದಾಗಿ ಪ್ರಾಣಿಗಳು ಸಾವನ್ನಪ್ಪುತ್ತಿವೆ ಮತ್ತು ಬೆಳೆಗಳು ನಾಶವಾಗಿವೆ ಎಂದು ಹೇಳಲಾಗಿದೆ.

ಯುನೈಟೆಡ್ ನೇಷನ್ಸ್ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ ಬರಗಾಲ ಪೀಡಿತ ಎಥಿಯೋಪಿಯಾ ಮತ್ತು ಕೀನ್ಯಾ ಹಾಗೂ ಸೋಮಾಲಿಯಾ, ನೀರು ಮತ್ತು ಆಹಾರ ಕೊರತೆಯ ಅಗತ್ಯತೆಗಳನ್ನು ಪೂರೈಸಲು ಒಟ್ಟು 4.5 ಕೋಟಿ ಡಾಲರ್ ಅನ್ನು ನಿಗದಿಪಡಿಸಿದೆ.

ಸೊಮಾಲಿಯಾ ಜನಸಂಖ್ಯೆಯು 1.5 ಮಿಲಿಯನ್ ಎಂದು ಮಾರ್ಕ್ ಹೇಳಿದ್ದಾರೆ. ಇವರಲ್ಲಿ 30 ಲಕ್ಷ ಜನರು ಆಹಾರದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಲು ಹೆಣಗಾಡುತ್ತಿದ್ದಾರೆ. ಆಹಾರ ಕೊರತೆಯ ಪರಿಸ್ಥಿತಿಯು ಹಿಂದಿನ ಚಳಿಗಾಲದಲ್ಲಿ ಬಹಳ ಕೆಟ್ಟದಾಗಿದೆ ಎಂದು ಅವರು ತಿಳಿಸಿದ್ದಾರೆ.

Trending News