ಜೇಮ್ಸ್ ಪೀಬಲ್ಸ್ ಸೇರಿ ಮೂವರಿಗೆ 2019ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ

2019 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೆನಡಾದ-ಅಮೇರಿಕನ್ ಭೌತಶಾಸ್ತ್ರಜ್ಞ ಜೇಮ್ಸ್ ಪೀಬಲ್ಸ್ ಮತ್ತು ಸ್ವಿಸ್ ವಿಜ್ಞಾನಿಗಳಾದ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ ಮಂಗಳವಾರ ನೀಡಲಾಯಿತು.

Last Updated : Oct 8, 2019, 04:52 PM IST
ಜೇಮ್ಸ್ ಪೀಬಲ್ಸ್ ಸೇರಿ ಮೂವರಿಗೆ 2019ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ  title=
Photo courtesy: Twitter

ನವದೆಹಲಿ: 2019 ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಕೆನಡಾದ-ಅಮೇರಿಕನ್ ಭೌತಶಾಸ್ತ್ರಜ್ಞ ಜೇಮ್ಸ್ ಪೀಬಲ್ಸ್ ಮತ್ತು ಸ್ವಿಸ್ ವಿಜ್ಞಾನಿಗಳಾದ ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ ಮಂಗಳವಾರ ನೀಡಲಾಯಿತು.

ಭೌತಿಕ ವಿಶ್ವವಿಜ್ಞಾನದಲ್ಲಿ ಸೈದ್ಧಾಂತಿಕ ಆವಿಷ್ಕಾರಗಳ ಅನ್ವೇಷಣೆಗಾಗಿ ಜೇಮ್ಸ್ ಪೀಬಲ್ಸ್ ಗೆ ನೊಬೆಲ್ ಪ್ರಶಸ್ತಿ ದೊರೆತಿದೆ ಮತ್ತು ಉಳಿದ ಭಾಗವನ್ನು ಮೈಕೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಜಂಟಿಯಾಗಿ ಸೌರ-ಮಾದರಿಯ ನಕ್ಷತ್ರವನ್ನು ಪರಿಭ್ರಮಿಸುವ ಎಕ್ಸೋಪ್ಲಾನೆಟ್ನ ಆವಿಷ್ಕಾರಕ್ಕಾಗಿ ಹಂಚಿಕೊಂಡರು. 

ಎರಡು ದಶಕಗಳಲ್ಲಿ ಅಭಿವೃದ್ಧಿಪಡಿಸಿದ ಜೇಮ್ಸ್ ಪೀಬಲ್ಸ್‌ನ ಸೈದ್ಧಾಂತಿಕ ಚೌಕಟ್ಟು, ಬ್ರಹ್ಮಾಂಡದ ಇತಿಹಾಸದ ಬಗ್ಗೆ ಬಿಗ್‌ಬ್ಯಾಂಗ್‌ನಿಂದ ಇಂದಿನವರೆಗೆ ನಮ್ಮ ಆಧುನಿಕ ತಿಳುವಳಿಕೆಗೆ ಅಡಿಪಾಯ ಹಾಕಿದೆ ಎಂದು ನೊಬೆಲ್ ಪ್ರಶಸ್ತಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿದೆ.

ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಮತ್ತು ಆಮ್ಲಜನಕದ ಲಭ್ಯತೆಗೆ ಹೇಗೆ ಹೊಂದಿಕೊಳ್ಳುತ್ತವೆ ಎಂಬ ಆವಿಷ್ಕಾರಗಳಿಗಾಗಿ ಯುಎಸ್ ಮತ್ತು ಬ್ರಿಟನ್‌ನ ಮೂವರು ಸಂಶೋಧಕರು ನೊಬೆಲ್ ವೈದ್ಯಕೀಯ ಪ್ರಶಸ್ತಿಯನ್ನು ಹಂಚಿಕೊಂಡ ಒಂದು ದಿನದ ನಂತರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ರಸಾಯನಶಾಸ್ತ್ರದ ಬಹುಮಾನವನ್ನು ಬುಧವಾರ ಹಾಗೂ 2018 ಮತ್ತು 2019 ಸಾಲಿನ ನೊಬೆಲ್ ಸಾಹಿತ್ಯ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಲಿದೆ ಎನ್ನಲಾಗಿದೆ. 

Trending News