)
ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಒಂದು ಆಭರಣ ಅಂಗಡಿಯಲ್ಲಿ ದಿಟ್ಟ ದರೋಡೆಯೊಂದು ನಡೆದಿದ್ದು, 25 ಕಳ್ಳರು ಒಟ್ಟಿಗೆ ಸೇರಿ ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.
ದರೋಡೆಕೋರರು ಸುತ್ತಿಗೆ, ಸಲಿಕೆಗಳಂತಹ ಮಾರಕ ಆಯುಧಗಳೊಂದಿಗೆ ಅಂಗಡಿಗೆ ನುಗ್ಗಿದ್ದು, ಸಿಬ್ಬಂದಿಯನ್ನು ಬೆದರಿಸಿ, ಅಂಗಡಿಯೊಳಗಿನ ಪ್ರದರ್ಶನ ಕೌಂಟರ್ಗಳನ್ನು ಧ್ವಂಸಗೊಳಿಸಿದ್ದಾರೆ. ಚಿನ್ನಾಭರಣಗಳನ್ನು ಕದ್ದ ನಂತರ ಕಳ್ಳರು ಕ್ಷಿಪ್ರವಾಗಿ ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಆಘಾತಕ್ಕೊಳಗಾದ ಅಂಗಡಿ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
25 masked men steal $1 MILLION worth of merchandise from San Ramon, CA jewelry store
This is what Gavin Newsom's soft on crime laws look like pic.twitter.com/Wu3sIYgMFy
— TaraBull (@TaraBull808) September 24, 2025
ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ಸಾಕ್ಷ್ಯಾಧಾರಗಳನ್ನು ಆಧರಿಸಿ ತನಿಖೆ ಆರಂಭಿಸಿದ್ದಾರೆ. ಒಟ್ಟು 25 ಆರೋಪಿಗಳ ಪೈಕಿ ಇದುವರೆಗೆ 7 ಜನರನ್ನು ಬಂಧಿಸಲಾಗಿದ್ದು, ಅವರಿಂದ ಕೆಲವು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದರೋಡೆಯಿಂದ ಸುಮಾರು 9 ಕೋಟಿ ರೂಪಾಯಿ ಮೌಲ್ಯದ ಆಭರಣಗಳು ಕಳವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ಪೊಲೀಸರ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ಕ್ಯಾಲಿಫೋರ್ನಿಯಾದ ಆಭರಣ ಅಂಗಡಿಗಳನ್ನು ಗುರಿಯಾಗಿಸಿಕೊಂಡ ಇದು ಎರಡನೇ ಅತಿದೊಡ್ಡ ದರೋಡೆಯಾಗಿದೆ. ಈ ಹಿಂದೆ 2023ರಲ್ಲಿ, ಸೇಂಟ್ ಪ್ಯಾಟ್ರಿಕ್ ದಿನದಂದು ಏಳು ಮುಸುಕುಧಾರಿಗಳ ಗುಂಪು ಇನ್ನೊಂದು ಆಭರಣ ಅಂಗಡಿಯಿಂದ ಲಕ್ಷಾಂತರ ಡಾಲರ್ ಮೌಲ್ಯದ ಆಭರಣಗಳನ್ನು ಕದ್ದಿತ್ತು.
ಪೊಲೀಸರು ಉಳಿದ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಘಟನೆಯಿಂದ ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕ ಮೂಡಿದ್ದು, ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.