ಮೆಕ್ಕಾ ದುರಂತ: ಬಸ್ ಅಪಘಾತದಲ್ಲಿ 42 ಭಾರತೀಯರ ದಾರುಣ ಅಂತ್ಯ

Saudi Arabia Bus Accident: ಮೆಕ್ಕಾ ಯಾತ್ರೆ ವೇಳೆ ಭಾರತೀಯರ ಬಸ್ ಅಪಘಾತಕ್ಕೀಡಾಗಿದ್ದು 42 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೈದರಾಬಾದ್ ಮೂಲದವರೇ ಅಧಿಕ ಮಂದಿ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Nov 17, 2025, 02:26 PM IST
  • ಮೆಕ್ಕಾದಿಂದ ಮದೀನಾಕ್ಕೆ ಹೋಗುತ್ತಿದ್ದಾಗ ಬಸ್ ಮತ್ತು ಟ್ಯಾಂಕರ್'ಗೆ ಡಿಕ್ಕಿ
  • ಬಸ್-ಟ್ಯಾಂಕರ್ ನಡುವಿನ ಅಪಘಾತದಲ್ಲಿ ಹೊತ್ತಿ ಉರಿದಿರುವ ಬಸ್
  • ಸೌದಿ ಅರೇಬಿಯಾದಲ್ಲಿ ಸಂಭವಿಸಿರುವ ಈ ಅಪಘಾತದಲ್ಲಿ 42 ಮಂದಿ ದಾರುಣ ಸಾವು
ಮೆಕ್ಕಾ ದುರಂತ: ಬಸ್ ಅಪಘಾತದಲ್ಲಿ 42 ಭಾರತೀಯರ ದಾರುಣ ಅಂತ್ಯ

Saudi Arabia Bus Accident: ಮುಸಲ್ಮಾನರ ಪವಿತ್ರ ಯಾತ್ರಾ ಸ್ಥಳವಾದ ಮೆಕ್ಕಾದಲ್ಲಿ ಭಾರತೀಯ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿರುವ ದುರಂತ ಘಟನೆ ಸಂಭವಿಸಿದೆ. 

Add Zee News as a Preferred Source

ಸೌದಿ ಅರೇಬಿಯಾದಲ್ಲಿ ಭಾರತದಿಂದ ಮೆಕ್ಕಾಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೆಕ್ಕಾದಿಂದ ಮದೀನಾಗೆ ಸಾಗುತ್ತಿದ್ದ ಮಾರ್ಗದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. 

ಮಧ್ಯರಾತ್ರಿ 01:30 ರ ಸುಮಾರಿಗೆ ಭಾರತದಿಂದ ಮೆಕ್ಕಾಗೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆಡಿದೆ. ತಕ್ಷಣವೇ, ಬೆಂಕಿ ಹೊತ್ತಿಕೊಂಡು ಬಸ್ ಕೆಲವೇ ಸೆಕೆಂಡುಗಳಲ್ಲಿ ಸುಟ್ಟುಕರಕಲಾಗಿದೆ. ಪರಿಣಾಮ ಈ ಅಪಘಾತದಲ್ಲಿ 42 ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಗಳು ತಿಳಿಸಿವೆ. 

ಸೌದಿ ಅರೇಬಿಯಾದ ಮಾಧ್ಯಮ ವರದಿಗಳ ಪ್ರಕಾರ, ಮೆಕ್ಕಾ ಮದೀನ ಮಾರ್ಗ ಮಧ್ಯೆ ಸಂಭವಿಸಿರುವ ರಸ್ತೆ ಅಪಘಾತದಲ್ಲಿ ಮೃತಪಟ್ಟವರಲ್ಲಿ 20 ಮಹಿಳೆಯರು ಮತ್ತು 11 ಮಕ್ಕಳು ಸೇರಿದ್ದಾರೆ. 

ಈ ಅಪಘಾತದಲ್ಲಿ 42 ಜನರು ಮೃತಪಟ್ಟಿದ್ದಾರೆ. ಇವರಲ್ಲಿ ಹೆಚ್ಚಿನವರು ಹೈದರಾಬಾದ್ ಮೂಲದವರು ಎಂದು ವರದಿಗಳು ತಿಳಿಸಿವೆ. ಆದಾಗ್ಯೂ, ಸೌದಿ ಅಧಿಕಾರಿಗಳು ಅಪಘಾತದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. 

ಇದನ್ನೂ ಓದಿ- ಭಾರತದಲ್ಲಿ ತಿಂಗಳುಗಟ್ಟಲೇ ದುಡಿಯುವಷ್ಟು ಈ ದೇಶದಲ್ಲಿ ನಿಮಿಷಕ್ಕೆ ಗಳಿಸ್ತೀರಾ..! ಬಲಿಷ್ಠ ಕರೆನ್ಸಿ ಹೊಂದಿದ ರಾಷ್ಟ್ರದಲ್ಲಿ ಇರುವವರೆಲ್ಲ ಶ್ರೀಮಂತರೇ

ಇದನ್ನೂ ಓದಿ- ಈ ದೇಶದಲ್ಲಿ 96 ವರ್ಷಗಳಿಂದ ಒಂದೇ ಒಂದು ಮಗು ಜನಿಸಿಲ್ಲ! ಕಾರಣ ಏನು ಗೊತ್ತೇ?

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News