)
Chat GPT: ChatGPTಯಲ್ಲಿ ತಲೆಗೆ ಬಂದ ಪ್ರಶ್ನೆಗಳನ್ನೆಲ್ಲಾ ಕೇಳಿ, ಅದು ನೀಡಿದ ಉತ್ತರಗಳನ್ನು ಕಣ್ಣು ಮುಚ್ಚಿ ನಂಬುವ ಮುನ್ನ ಈ ಶಾಕಿಂಗ್ ವಿಚಾರದ ಬಗ್ಗೆ ತಿಳಿದುಕೊಳ್ಳಿ. ಏಕೆಂದರೆ ಇತ್ತೀಚೆಗೆ 60 ವಯಸ್ಸಿನ ವೃದ್ದನೊಬ್ಬ ಈ ತಪ್ಪನ್ನು ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ.
ಇತ್ತೀಚೆಗೆ ಯಾವುದೇ ಸಣ್ಣ ವಿಷಯಗಳ ಕುರಿತು ಗೊಂದಲಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳಲು ಜನರು ChatGPTಯ ಮೊರೆಹೋಗುತ್ತಾರೆ. ಇದರ ಪರಿಣಾಮವಾಗಿ ಜನರು ಪರೋಕ್ಷವಾಗಿ ಇದರ ಮೇಲೆ ಅವಲಂಬಿತವಾಗುತ್ತಿದ್ದಾರೆ. ಇನ್ನು ಈ ರೀತಿ ChatGPTಯ ವ್ಯಸನಿಯಾಗಿರುವವರು ಕೇವಲ ವಯಸ್ಕರಷ್ಟೇ ಅಲ್ಲ,ವೃದ್ದರು ಕೂಡ ಇದರಿಂದ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿದಾರೆ.
ಪ್ರಸ್ತುತ ಯುಗವು AI ಮಯವಾಗಿಬಿಟ್ಟಿದೆ. ಈಗೆಲ್ಲಾ ನೀವು ಬಯಸಿದ್ದೆಲ್ಲವೂ AI ನಲ್ಲಿ ಸುಲಭವಾಗಿ ಲಭ್ಯವಾಗುತ್ತದೆ. ಈ AI ಮೇಲೆ ಅವಲಂಬನೆಯಾಗಿರುವುದನ್ನು ನೋಡುತ್ತಿದ್ದರೆ ಇನ್ನೇನು ಕೆಲವೇ ವರ್ಷಗಳಲ್ಲಿ AI ಅಂದರೆ ಕೃತಕ ಬುದ್ಧಿಮತ್ತೆ ಮನುಷ್ಯರನ್ನು ಮೀರಿಸುತ್ತದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಇದು ನಿಜವಾದರೇ ಒಂದು ದಿನ ಯಂತ್ರಗಳು ಮನುಷ್ಯರನ್ನು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ ಮತ್ತು ನಂತರ ಅವು ಮನುಷ್ಯರನ್ನು ನಿರ್ಮೂಲನೆ ಮಾಡಿ ಜಗತ್ತನ್ನು ಆಳುವುತ್ತವೆ; ಇದರ ಕುರಿತು ಯಾವುದೇ ಸಂಶಯವಿಲ್ಲ. ಇನ್ನೂ ಕೆಲವರು ಈ ರೀತಿ ಅಪಾಯವೆಲ್ಲ ಆಗಲು ಸಾದ್ಯವಿಲ್ಲ ಎಂದು ನಿರ್ಲಕ್ಷ್ಯಿಸುತ್ತಿದ್ದಾರೆ. ಆದರೆ ಇದಕ್ಕೆ ಸೂಕ್ತ ಉದಾಹರಣೆಯಾಗಿ ಅಚ್ಚರಿಯ ಸಂಗತಿಯೊಂದು ನಡೆದಿದೆ. ಅದೇನೆಂದರೆ ಒಬ್ಬ ವ್ಯಕ್ತಿ ChatGPTಗೆ ತನ್ನ ಆರೋಗ್ಯ ಸಮಸ್ಯೆಯ ಕುರಿತು ಪ್ರಶ್ನೆ ಕೇಳಿದ್ದಾನೆ. ಅದು ನೀಡಿದ ಉತ್ತರವನ್ನು ಪಾಲಿಸಿ ಆ ವೃದ್ದ ಆರೋಗ್ಯ ಸಮಸ್ಯೆ ಕಡಿಮೆ ಮಾಡಿಕೊಳ್ಳುವ ಬದಲು ಪ್ರಾಣಾಪಾಯವನ್ನು ತಂದುಕೊಂಡಿದ್ದಾನೆ.
ಇತ್ತೀಚೆಗೆ 60 ವರ್ಷದ ವ್ಯಕ್ತಿಯೊಬ್ಬ ತನಗೆ ಹೆಚ್ಚುತ್ತಿರುವ ಪ್ಯಾರನೋನಿಯಾ ಮತ್ತು ಶ್ರವಣ ಹಾಗೂ ದೃಶ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ ಈ ರೀತಿಯ ಸಮಸ್ಯೆ ಅವನಿಗೆ ಕಾಣಿಸಿಕೊಳ್ಳಲು ಯಾವುದೇ ಆರೋಗ್ಯ ಸಮಸ್ಯೆ ಅಥವಾ ವಯೋಸಹಜ ಸಮಸ್ಯೆಗಳು ಕಾರಣವಾಗಿರಲಿಲ್ಲ. ಬದಲಾಗಿ ಅವನು ಅತಿಯಾಗಿ ತೋರಿಸಿದ ಜಾಣ್ಮೆಯಿಂದ ಈ ಆರೋಗ್ಯ ಸಮಸ್ಯೆಯನ್ನು ತಂದುಕೊಂಡಿದ್ದಾನೆ. ಕೆಲವು ದಿನಗಳ ಹಿಂದೆ ವೃದ್ದನಿಗೆ ವೈದ್ಯರು ಹೆಚ್ಚಿನ ಉಪ್ಪು ಸೇವಿಸುವುದನ್ನು ಕಡಿಮೆ ಮಾಡಲು ಸಲಹೆ ನೀಡಿದ್ದರು. ಆದರೆ ವೃದ್ದ ಈ ಉಪ್ಪನ್ನು ನೈಸರ್ಗಿಕವಾಗಿ ತ್ಯಜಿಸುವ ಬದಲು ಬೇರೆ ಪೂರಕವನ್ನು ಉಪಯೋಗಿಸಿದ್ದಾನೆ. ಇದರಿಂದ ಆತನಿಗೆ ದೇಹದಲ್ಲಿ ಅಡ್ಡಪರಿಣಾಮ ಉಂಟಾಗಿ, ಕೊನೆಗೆ ವೃದ್ದ ಪ್ರಾಣಾಪಾಯವನ್ನು ತಂದುಕೊಂಡಿದ್ದಾನೆ. ತೊಂದರೆ ಹೆಚ್ಚಾದ ನಂತರ ಆಸ್ಪತ್ರೆ ಸೇರಿದ ವೃದ್ದನನ್ನು ಪರಿಸೀಲಿಸಿದಾಗ ತಿಳಿದಿದ್ದೇನೆಂದರೆ, ಆತ ಕಳೆದ ಮೂರು ತಿಂಗಳಿನಿಂದ ಬ್ರೋಮೈಡ್ ತೆಗೆದುಕೊಳ್ಳುತ್ತಿದ್ದ. ಇದೇ ಕಾರಣಕ್ಕೆ ಅವನಿಗೆ ಆರೋಗ್ಯ ಸಮಸ್ಯೆಯನ್ನುಂಟು ಮಾಡಿದೆ. ಆತ ಸೋಡಿಯಂ ಕ್ಲೋರೈಡ್ನ ದುಷ್ಪರಿಣಾಮಗಳ ಬಗ್ಗೆ ಓದಿದ್ದರಿಂದ, ಸೋಡಿಯಂ ಬ್ರೋಮೈಡ್ನ್ನು ಯಾವುದೇ ವೈದ್ಯಕೀಯ ಸಲಹೆ ಪಡೆಯದೇ ಈ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ವೃದ್ದ ತನ್ನ ಕಾಲೇಜಿನ ದಿನಗಳಲ್ಲಿ ಆಹಾರ ಪದ್ಧತಿಯನ್ನು ಅಧ್ಯಯನ ಮಾಡಿದ ಇತಿಹಾಸದಿಂದ ಪ್ರೇರಿತರಾಗಿ, ತಮ್ಮ ಆಹಾರದಿಂದ ಕ್ಲೋರೈಡ್ ಅನ್ನು ತೆಗೆದುಹಾಕಲು ವೈಯಕ್ತಿಕ ಪ್ರಯೋಗವನ್ನು ನಡೆಸಲು ನಿರ್ಧರಿಸಿದ್ದನು.
ಈ ರೀತಿಯ ಸಾಹಸಕ್ಕೆ ಕೈಹಾಕಲು ಆ ವ್ಯಕ್ತಿ ChatGPTಯ ಸಹಾಯ ತೆಗೆದುಕೊಂಡಿದ್ದ. ತನ್ನ ಉಪ್ಪು ಸೇವನೆಯನ್ನು ಕಡಿಮೆ ಮಾಡಲು ವೃದ್ದChatGPT ಯಿಂದ ಸಲಹೆ ಪಡೆದಿದ್ದ. ಕೃತಕ ಬುದ್ಧಿಮತ್ತೆ ಸಲಹೆಯನ್ನು ಅನುಸರಿಸಿ ಆ ವ್ಯಕ್ತಿ ಸೋಡಿಯಂ ಕ್ಲೋರೈಡ್ ಬದಲಿಗೆ ಸೋಡಿಯಂ ಬ್ರೋಮೈಡ್ ಅನ್ನು ಸೇವಿಸಲು ಪ್ರಾರಂಭಿಸಿದ. ಇದರ ಪರಿಣಾಮ ಆತ ಬ್ರೋಮಿಸಂ ಎಂಬ ವಿಷಕ್ಕೆ ಬಲಿಯಾಗಿ ಆಸ್ಪತ್ರೆ ಸೇರಬೇಕಾಯಿತು. ವರದಿಗಳಿದ ತಿಳಿದುಬಂದಿದ್ದೇನೆಂದರೆ ಆ ವ್ಯಕ್ತಿ ಬ್ರೋಮಿಸಮ್ ಅಥವಾ ಬ್ರೋಮೈಡ್ ವಿಷದಿಂದ ಬಳಲುತ್ತಿದ್ದರು ಎನ್ನಲಾಗಿದೆ.
ಈ ಸ್ಥಿತಿಯು ಬ್ರೋಮಿನ್ಗೆ ದೀರ್ಘಕಾಲದವರೆಗೆ ದೇಹಕ್ಕೆ ತೆಗೆದುಕೊಳ್ಳುವುರಿಂದ ಉಂಟಾಗುತ್ತದೆ. ಇದರ ಕುರಿತು ಅಚ್ಚರಿಯ ಸಂಗತಿ ಏನೆಂದರೆ 1990 ರ ದಶಕದಲ್ಲಿ, ನಿದ್ರಾಹೀನತೆ, ಉನ್ಮಾದ ಮತ್ತು ಆತಂಕಕ್ಕೆ ಚಿಕಿತ್ಸೆ ನೀಡಲು ಸೋಡಿಯಂ ಬ್ರೋಮೈಡ್ ಅನ್ನು ಓವರ್-ದಿ-ಕೌಂಟರ್ ಔಷಧಿಗಳಲ್ಲಿ ಸೇರಿಸಲಾಯಿತು. ಆದರೆ ನರಮನೋವೈದ್ಯಕೀಯ ಮತ್ತು ಚರ್ಮರೋಗಗಳಿಗೆ ಇದು ಕಾರಣವಾಗುವುದರಿಂದ ಅದರ ಬಳಕೆಯನ್ನು ಕ್ರಮೇಣ ನಿಲ್ಲಿಸಲಾಯಿತು.
ChatGPT ಯ ಸಲಹೆ ಇದಕ್ಕೆ ಅಪಾಯಕ್ಕೆ ಕಾರಣವಾಯಿತು.
ಉಪ್ಪು ಸೇವನೆಯು ಹೃದಯ ಕಾಯಿಲೆ, ಅಂಗಾಂಗ ಹಾನಿ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. ಆದರೆ ಜರ್ನಲ್ಸ್ ಆಫ್ ದಿ ಅಮೇರಿಕನ್ ಕಾಲೇಜ್ ಆಫ್ ಫಿಸಿಶಿಯನ್ಸ್ನಲ್ಲಿ ಪ್ರಕಟವಾದ ಹೊಸ ವೈದ್ಯಕೀಯ ಪ್ರಕರಣ ಅಧ್ಯಯನದ ಪ್ರಕಾರ, ಈ ವ್ಯಕ್ತಿಗೆ ಸೋಡಿಯಂ ಕ್ಲೋರೈಡ್ ಬದಲಿಗೆ ಸೋಡಿಯಂ ಬ್ರೋಮೈಡ್ ತೆಗೆದುಕೊಳ್ಳಲು ಚಾಟ್ಜಿಪಿಟಿ ಸಲಹೆ ನೀಡಿತು, ಅದು ಅತ್ಯಂತ ಅಪಾಯಕಾರಿ ಎಂದು ಸಾಬೀತಾಗಿದೆ.