Video: ಗಾಯಗೊಂಡ ನಾಯಿ ನೇರವಾಗಿ ಔಷಧಿ ಅಂಗಡಿಗೆ ಬಂದಾಗ..ಮುಂದಾಗಿದ್ದೇನು?

ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಗಾಯಗೊಂಡು ನೇರವಾಗಿ ಔಷಧಿ ಅಂಗಡಿಗೆ ಪ್ರವೇಶಿಸಿದೆ. 

Last Updated : Jun 25, 2019, 07:23 PM IST
Video: ಗಾಯಗೊಂಡ ನಾಯಿ ನೇರವಾಗಿ ಔಷಧಿ ಅಂಗಡಿಗೆ ಬಂದಾಗ..ಮುಂದಾಗಿದ್ದೇನು? title=
Photo courtesy: Twitter

ನವದೆಹಲಿ: ಈಗ ವೈರಲ್ ಆಗಿರುವ ವಿಡಿಯೋದಲ್ಲಿ ನಾಯಿಯೊಂದು ಗಾಯಗೊಂಡು ನೇರವಾಗಿ ಔಷಧಿ ಅಂಗಡಿಗೆ ಪ್ರವೇಶಿಸಿದೆ. 

ಈ ವಿಡಿಯೋ ಈಗ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ದಿ ಡೋಡೋ ವೆಬ್ ಸೈಟ್ ಪ್ರಕಾರ ಈ ಘಟನೆ ಟರ್ಕಿಯ ಇಸ್ತಾಂಬುಲ್ ನಲ್ಲಿ ನಡೆದಿದೆ ಎನ್ನಲಾಗಿದೆ. ಬಾನು ಸೆಂಗಿಜ್ ನಡೆಸುತ್ತಿದ್ದ ಔಷಧ ಅಂಗಡಿಗೆ ಏಕಾಏಕಿ ಗಾಯಗೊಂಡ ನಾಯಿ ಪ್ರವೇಶಿಸಿದೆ. ಪ್ರಾಣಿ ಪ್ರೇಮಿಯಾಗಿರುವ, ಸೆಂಗಿಜ್ ಅವರು ಡೋಡೋದಲ್ಲಿ ನೀಡಿರುವ ಹೇಳಿಕೆ ಪ್ರಕಾರ 'ನಾನು ಬೇಬಿ ಏನಾದರೂ ಸಮಸ್ಯೆ ಇದೆಯೇ ಎಂದು ಕೇಳಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. 

ರಕ್ತಸ್ರಾವದಿಂದ ಬಳಸುತ್ತಿದ್ದ ನಾಯಿಗೆ ಸೆಂಗಿಸ್ ಅವರು ತಕ್ಷಣ ಚಿಕಿತ್ಸೆ ನೀಡಿದ್ದಾರೆ.

  

Trending News