VIDEO: ಸೆಕ್ಯುರಿಟಿ ಗಾರ್ಡ್ ಮುಂದೆ ಜೀನ್ಸ್ ತೆಗೆದ ಯುವತಿ...! ಯಾಕೆ ಗೊತ್ತಾ?

ಯುವತಿಯೊಬ್ಬರು ಶಾಪಿಂಗ್ ಅಂಗಡಿಯಲ್ಲಿ ಮಾಡಿದ್ದ ಈ ಕೆಲಸ ವಿಡಿಯೋ ರೆಕಾರ್ಡ್ ಆಗಿದೆ.

Yashaswini V Yashaswini V | Updated: Dec 6, 2019 , 01:46 PM IST
VIDEO: ಸೆಕ್ಯುರಿಟಿ ಗಾರ್ಡ್ ಮುಂದೆ ಜೀನ್ಸ್ ತೆಗೆದ ಯುವತಿ...! ಯಾಕೆ ಗೊತ್ತಾ?
ಫೋಟೋ: Facebook

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಅಯ್ಯೋ, ಯಾರನ್ನು ನಂಬುವುದು ತಿಳಿಯುವುದೇ ಇಲ್ಲ. ಇಡೀ ಪ್ರಪಂಚನೇ ಒಂದು ಮಾಯಾ ಜಾಲ... ಎಂದು ಹಲವರು ಹೇಳುವುದನ್ನು ಕೇಳಿರುತ್ತೇವೆ. ಹೇಗೇಗೆಲ್ಲಾ ಮೋಸ ಹೋಗುತ್ತೇವೆ ಎಂಬುದಕ್ಕೆ ನಿತ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಕಳ್ಳರೂ ಕೂಡ ವಿಶಿಷ್ಟ ರೀತಿಯಲ್ಲಿ, ಕೆಲವೊಮ್ಮೆ ನಮ್ಮ ಊಹೆಗೂ ನಿಲುಕದಂತೆ ಕಳ್ಳತನ ಮಾಡುತ್ತಾರೆ. ಅಂತಹಕ್ಕೆ ಕೆಲಸ ಮಾಡಿದ ಕಳ್ಳಿ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ....!

ವಾಸ್ತವವಾಗಿ, ಯುವತಿಯೊಬ್ಬರು ಶಾಪಿಂಗ್ ಅಂಗಡಿಯಲ್ಲಿ ಮಾಡಿದ್ದ ಈ ಕೆಲಸ ವಿಡಿಯೋ ರೆಕಾರ್ಡ್ ಆಗಿದೆ. ವಿಡಿಯೋ ಸಾಕ್ಷ್ಯದಿಂದಾಗಿ ಆಕೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಈ ಇಡೀ ಘಟನೆ ನಡೆದಿರುವುದು ವೆನೆಜುವೆಲಾದಲ್ಲಿ. ವೀಡಿಯೊದಲ್ಲಿ, ಬಟ್ಟೆ ಅಂಗಡಿಯಿಂದ ಹಲವಾರು ಜೀನ್ಸ್ ಕದ್ದ ಆರೋಪದ ಮೇಲೆ ಯುವತಿಯನ್ನು ಭದ್ರತಾ ಸಿಬ್ಬಂದಿ ತಡೆ ಹಿಡಿದಿದ್ದಾರೆ. ಆಕೆ ಕದ್ದಿದ್ದು ಒಂದಲ್ಲಾ... ಎರಡಲ್ಲಾ.... ಬರೋಬ್ಬರಿ 8 ಜೀನ್ಸ್. ಜೀನ್ಸ್ ಕದ್ದಿದ್ದರು ಎನ್ನುವುದಕ್ಕಿಂತ ಆಕೆ ಜೀನ್ಸ್ ಕದ್ದಿದ್ದ ರೀತಿಯೇ ಬಹಳ ರೋಚಕ. 

ಈ ಕೆಳಗಿನ ವೀಡಿಯೊದಲ್ಲಿ, ಯುವತಿ ಜೀನ್ಸ್ ಅನ್ನು ಒಂದರ ನಂತರ ಒಂದರಂತೆ ಧರಿಸಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಭದ್ರತಾ ಸಿಬ್ಬಂದಿಯ ಆಜ್ಞೆಯ ಮೇರೆಗೆ ಮಹಿಳೆ ಎಲ್ಲಾ ಜೀನ್ಸ್ ಅನ್ನು ಒಂದೊಂದಾಗಿ ತೆಗೆದುಹಾಕುತ್ತಾಳೆ. ಈ ವಿಡಿಯೋ ನೋಡಿ ಜನ ಹೀಗೂ ಉಂಟಾ... ಎಂದು ಬಾಯ ಮೇಲೆ ಬೆಟ್ಟು ಇಡುವುದಂತು ಸತ್ಯ...

 

ಈ ವೀಡಿಯೊವನ್ನು ವಾಶ್ ರೂಂ ಒಳಗೆ ಚಿತ್ರೀಕರಿಸಲಾಗಿದೆ. ವೀಡಿಯೊದಲ್ಲಿ, ವ್ಯಕ್ತಿಯೊಬ್ಬರು ಜೀನ್ಸ್ ಸಂಖ್ಯೆಯನ್ನು ಎಣಿಸುವದನ್ನೂ ಕೇಳಬಹುದು. ಆದಾಗ್ಯೂ, ಜೀನ್ಸ್ ಗಳನ್ನು ವಶಕ್ಕೆ ಪಡೆದು ನಂತರ ಯುವತಿಯನ್ನು ಬಿಡುಗಡೆ ಮಾಡಲಾಗಿದೆ. 

ವೀಡಿಯೊವನ್ನು ಇಂಟರ್ನೆಟ್‌ಗೆ ಅಪ್‌ಲೋಡ್ ಮಾಡಿದಾಗಿನಿಂದ ಲಕ್ಷಾಂತರ ಜನರು ಇದನ್ನು ವೀಕ್ಷಿಸಿದ್ದಾರೆ.