ಕಾಬೂಲ್ : ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್ ಮರಳಿ ಬಂದ ನಂತರ ಪರಿಸ್ಥಿತಿ ಬದಲಾಗತೊಡಗಿತು. ವಿಶ್ವವಿದ್ಯಾನಿಲಯಕ್ಕೆ ಹಾಜರಾಗುವ ಮಹಿಳೆಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು ಮತ್ತು ನಕಾಬ್ ಧರಿಸಬೇಕು ಎನ್ನುವುದನ್ನು  ಕಡ್ಡಾಯಗೊಳಿಸಿದೆ. ಅಲ್ಲದೆ, ಹುಡುಗರು ಮತ್ತು ಹುಡುಗಿಯರ (education in Kabul) ತರಗತಿಗಳನ್ನು ಪ್ರತ್ಯೇಕವಾಗಿ ನಡೆಸುವಂತೆ ಸೂಚಿಸಿದೆ. ಪ್ರತ್ಯೇಕ ತರಗತಿ ನಡೆಸಲು ಸಾಧ್ಯವಾಗದಿದ್ದರೆ,  ಹುಡುಗ ಮತ್ತು ಹುಡುಗಿಯರ ನಡುವೆ ಪರದೆ ಹಾಕುವಂತೆ ಆದೇಶಿಸಲಾಗಿದೆ.


COMMERCIAL BREAK
SCROLL TO CONTINUE READING

ತಾಲಿಬಾನ್ ಆಳ್ವಿಕೆಯ ಫಸ್ಟ್ ಲುಕ್ ಬಹಿರಂಗ : 
ತಾಲಿಬಾನ್ (Taliban) ಆಡಳಿತದ ಫರ್ಸ್ಟ್ ಲುಕ್ ಇದಾಗಿದ್ದು, ಇದು, ಕಾಬೂಲ್‌ನ ಇಬ್ನ್ ಸಿನಾ ವಿಶ್ವವಿದ್ಯಾಲಯದ ಚಿತ್ರ ಎನ್ನಲಾಗಿದೆ. ಇದರಲ್ಲಿ ತರಗತಿಯಲ್ಲಿ ಹುಡುಗರು ಮತ್ತು ಹುಡುಗಿಯರ ಮಧ್ಯೆ ಪರದೆ ಹಾಕಲಾಗಿದೆ.  ಅವರು ಒಬ್ಬರನ್ನೊಬ್ಬರು ನೋಡುವುದು, ಮಾತನಾಡುವುದನ್ನು ತಡೆಯಲು ಈ ರೀತಿ ಪರದೆ ಹಾಕಲಾಗಿದೆ. 


ಇದನ್ನೂ  ಓದಿ : Afghanistan Update: ಪಂಜಶೀರ್ ಪ್ರಾಂತ್ಯದ ಮೇಲೆ ತಾಲಿಬಾನ್ ನಿಯಂತ್ರಣ!


ತಮ್ಮ ಹಕ್ಕಿಗಾಗಿ ಮಹಿಳೆಯರ ಒತ್ತಾಯ : 
ಅಫ್ಘಾನಿಸ್ತಾನ (Afghanistan)  ಮಹಿಳೆಯರು ನಿರಂತರವಾಗಿ ತಮ್ಮ ಹಕ್ಕುಗಳಿಗಾಗಿ ಒತ್ತಾಯ ಮಾಡುತ್ತಿದ್ದಾರೆ. ಆದರೆ,  ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ನೀಡಲು ತಾಲಿಬಾನ್ ನಿರಾಕರಿಸಿದ್ದಲ್ಲದೆ, ಅವರ ಪ್ರತಿಭಟನೆಯನ್ನು ತಡೆಯಲು ದಾಳಿ ಕೂಡಾ ನಡೆಸಲಾಗಿದೆ. ಆದರೆ ಇದುವರೆಗೂ ಈ ಘಟನೆ ಬಗ್ಗೆ ಪ್ರಪಂಚದ ಯಾವ ದೇಶದಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. 


ಮಹಿಳೆಯರ ಮೇಲೆ ತಾಲಿಬಾನ್ ದೌರ್ಜನ್ಯ :
ಕಾಬೂಲ್‌ನಲ್ಲಿ (Kabul) ಅಫ್ಘಾನ್ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುವುದೆಂದರೆ ಸದ್ಯಕ್ಕಂತೂ ದೊಡ್ದ ವಿಚಾರವೇ ಸರಿ.  ಈ ಮಹಿಳೆಯರು ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರದಲ್ಲಿ ತಮಗೆ ಮಹತ್ವದ ಜವಾಬ್ದಾರಿ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದರು. ಈ ಹಿನ್ನೆಲೆಯಲ್ಲಿ,  ಮಹಿಳಾ ಕಾರ್ಯಕರ್ತರು ಮತ್ತು ಪ್ರತಿಭಟನಾಕಾರರು ರಾಷ್ಟ್ರಪತಿ ಭವನದ ಗೇಟ್ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಮಹಿಳಾ ಪ್ರತಿಭಟನಾಕಾರರನ್ನು ಚದುರಿಸಲು ತಾಲಿಬಾನ್‌ಗಳು ಅಶ್ರುವಾಯು ಸಿಡಿಸಿದೆ. ಅಲ್ಲದೆ, ತಾಲಿಬಾನಿಗಳು ಬಂದೂಕಿನಿಂದ ಹೊಡೆದು ಪ್ರತಿಭಟನಾಕಾರರನ್ನು ಗಾಯಗೊಳಿಸಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.


ಇದನ್ನೂ  ಓದಿ : PM Narendra Modi: ಪ್ರಧಾನಿ ಮೋದಿ ವಿರುದ್ಧದ ಪ್ರತಿಭಟನೆ ಹಿನ್ನಲೆ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ ಈ ದೇಶ


ಕಾಬೂಲ್‌ನಲ್ಲಿ ತಾಲಿಬಾನ್ ಆಕ್ರಮಣದ ನಂತರ, ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ನಿರಂತರವಾಗಿ ತಮ್ಮ ಧ್ವನಿಯನ್ನು ಎತ್ತುತ್ತಿದ್ದಾರೆ. ಆದರೆ ಮಹಿಳೆಯರಿಗೆ ಹಕ್ಕುಗಳನ್ನು ನೀಡುವ ಕುರಿತು ಮಾತನಾಡುವ ತಾಲಿಬಾನ್, ಇದೀಗ ಮಹಿಳೆಯರ ಮೇಲೆ ದಾಳಿ ನಡೆಸುತ್ತಿದೆ. ಈ ಪ್ರತಿಭಟನೆಯನ್ನು (Women protest) ವರದಿ ಮಾಡಿದ ಪತ್ರಕರ್ತರರ ಮೇಲೆ ಕೂಡಾ ದಾಳಿ ಮಾಡಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.