ಕೃತಕ ಕಾಲು ಅಳವಡಿಸಿದ ನಂತರ ಕುಣಿದು ಕುಪ್ಪಳಿಸಿದ ಬಾಲಕ....! ವೀಡಿಯೋ ವೈರಲ್

ಅಫ್ಘಾನಿಸ್ತಾನದ ಆಸ್ಪತ್ರೆಯಲ್ಲಿ ಚಿಕ್ಕ ಬಾಲಕನೊಬ್ಬ ಕೃತಕ ಕಾಲನ್ನು ಅಳವಡಿಸಿದ ನಂತರ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

Updated: May 7, 2019 , 05:20 PM IST
 ಕೃತಕ ಕಾಲು ಅಳವಡಿಸಿದ ನಂತರ ಕುಣಿದು ಕುಪ್ಪಳಿಸಿದ ಬಾಲಕ....! ವೀಡಿಯೋ ವೈರಲ್
Photo courtesy: Twitter

ನವದೆಹಲಿ: ಅಫ್ಘಾನಿಸ್ತಾನದ ಆಸ್ಪತ್ರೆಯಲ್ಲಿ ಚಿಕ್ಕ ಬಾಲಕನೊಬ್ಬ ಕೃತಕ ಕಾಲನ್ನು ಅಳವಡಿಸಿದ ನಂತರ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಈಗ ಬಾಲಕನ್ನು ಅಹಮ್ಮದ್ ಎಂದು ಗುರುತಿಸಲಾಗಿದ್ದು ಕೃತಕ ಕಾಲಿನ ಅಳವಡಿಕೆ ನಂತರ ಸಂತಸಗೊಂಡ ಬಾಲಕ ಕುಣಿದು ಕುಪ್ಪಲಿಸುತ್ತಿದ್ದಾನೆ. ಸಾಂಪ್ರದಾಯಿಕ ಕೋಬಾಲ್ಟ್ ನೀಲಿ ಪೇರಾನ್ ಧರಿಸಿರುವ ಬಾಲಕ ಅಪಘಾನಿಸ್ತಾನದ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮೂಳೆ ಕೇಂದ್ರದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾನೆ.ಲೋಗರ್ ಪ್ರದೇಶದಲ್ಲಿ ಭೂಕುಸಿತ ಸ್ಫೋಟದಲ್ಲಿ ಆತನ ತನ್ನ ಬಲಗಾಲನ್ನು ಕಳೆದುಕೊಂಡಿದ್ದನು.

ಯುದ್ಧದ ಹಾನಿಗೊಳಗಾದ ಪ್ರದೇಶದಲ್ಲಿನ ಭೂಕುಸಿತ ಸ್ಫೋಟಗಳಿಗೆ ಬಲಿಪಶುವಾಗಿರು ಮಕ್ಕಳಿಗೆ ಅಹಮ್ಮದ್  ಪ್ರಾತಿನಿಧಿಕ ಎನ್ನುವಂತೆ ಇದ್ದಾನೆ.ಈಗ ಈ ಬಾಲಕನ ಸ್ಫೂರ್ತಿ ಎಲ್ಲರು ಬೆರಗಾಗಿದ್ದಾರೆ.