ಚೀನಾದ ಮೇಲೆ 104% ಸುಂಕ ವಿಧಿಸುವುದಾಗಿ ಘೋಷಿಸಿದ ಅಮೆರಿಕ; ತತಕ್ಷಣದಿಂದಲೇ ಜಾರಿಗೆ

ಮಂಗಳವಾರದೊಳಗೆ ಬೀಜಿಂಗ್ ಅಮೆರಿಕದ ಸರಕುಗಳ ಮೇಲಿನ ಪ್ರತೀಕಾರದ ಸುಂಕವನ್ನು ತೆಗೆದುಹಾಕದಿದ್ದರೆ, ಬುಧವಾರ ಚೀನಾದ ಮೇಲಿನ ಅಸ್ತಿತ್ವದಲ್ಲಿರುವ ಸುಂಕವನ್ನು ಶೇ.50ರಷ್ಟು ಹೆಚ್ಚಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸೋಮವಾರ ಬೆದರಿಕೆ ಹಾಕಿದ್ದರು.

Written by - Puttaraj K Alur | Last Updated : Apr 8, 2025, 11:31 PM IST
  • ಡ್ರ್ಯಾಗನ್ ದೇಶದ ಮೇಲೆ ʼಸುಂಕ ಯುದ್ಧʼ ಘೋಷಿಸಿದ ದೊಡ್ಡಣ್ಣ?
  • ಚೀನಾದ ಮೇಲೆ ಹೆಚ್ಚುವರಿ 50% ಸುಂಕ ಘೋಷಿಸಿದ ಡೊನಾಲ್ಡ್ ಟ್ರಂಪ್
  • ಚೀನಾ-ಅಮೆರಿಕದ ಟ್ರೇಡ್‌ ವಾರ್‌ನಿಂದ ಪ್ರಪಂಚದ ಮೇಲೆ ಪರಿಣಾಮವೇನು?
ಚೀನಾದ ಮೇಲೆ 104% ಸುಂಕ ವಿಧಿಸುವುದಾಗಿ ಘೋಷಿಸಿದ ಅಮೆರಿಕ; ತತಕ್ಷಣದಿಂದಲೇ ಜಾರಿಗೆ

US tariff on china: ಸುಂಕದ ವಿಷಯದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಟ್ರೇಡ್‌ ವಾರ್‌ ಅದ್ಧರೆ ವ್ಯಾಪಾರ ಯುದ್ಧ ನಡೆಯುತ್ತಿದೆ. ಮಂಗಳವಾರ ಚೀನಾದ ಮೇಲೆ ಒಟ್ಟು ಶೇ.104ರಷ್ಟು ಸುಂಕವನ್ನು ವಿಧಿಸುವುದಾಗಿ ಅಮೆರಿಕ ಘೋಷಿಸಿದೆ. ಚೀನಾದ ಮೇಲಿನ ಅಮೆರಿಕದ ಹೊಸ ಸುಂಕಗಳು ಬುಧವಾರದಿಂದಲೇ ಜಾರಿಗೆ ಬರಲಿವೆ. ಈ ಮಾಹಿತಿಯನ್ನು ಶ್ವೇತಭವನ ಖಚಿತಪಡಿಸಿದೆ. ಮಂಗಳವಾರ ಚೀನಾ ಹೆಚ್ಚುವರಿಯಾಗಿ ಶೇ.50ರಷ್ಟು ಸುಂಕ ವಿಧಿಸುವ ಅಮೆರಿಕದ ಬೆದರಿಕೆಗೆ ತಿರುಗೇಟು ನೀಡಿದ್ದು, ಅಮೆರಿಕ ಸುಂಕ ಯುದ್ಧ ಅಥವಾ ವ್ಯಾಪಾರ ಯುದ್ಧವನ್ನು ನಡೆಸುವ ಉದ್ದೇಶ ಹೊಂದಿದ್ದರೆ, ಚೀನಾ ಕೊನೆಯವರೆಗೂ ಹೋರಾಡಲು ಸಿದ್ಧವಾಗಿದೆ ಎಂದು ಹೇಳಿದೆ.

Add Zee News as a Preferred Source

ಮಧ್ಯರಾತ್ರಿಯಿಂದಲೇ ʼಸುಂಕʼ ಜಾರಿ!

ಚೀನಾದ ಮೇಲಿನ ಶೇ.104ರಷ್ಟು ಸುಂಕಗಳನ್ನು ಅಮೆರಿಕದ ಸಮಯ ಬೆಳಗ್ಗೆ 12:01ಕ್ಕೆ ಜಾರಿಗೆ ತರಲಾಗುವುದು ಎಂದು ಶ್ವೇತಭವನ ದೃಢಪಡಿಸಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ. ಮಂಗಳವಾರದೊಳಗೆ ಬೀಜಿಂಗ್ ಅಮೆರಿಕದ ಸರಕುಗಳ ಮೇಲಿನ ಪ್ರತೀಕಾರದ ಸುಂಕವನ್ನು ತೆಗೆದುಹಾಕದಿದ್ದರೆ, ಬುಧವಾರ ಚೀನಾದ ಮೇಲಿನ ಅಸ್ತಿತ್ವದಲ್ಲಿರುವ ಸುಂಕವನ್ನು ಶೇ.50ರಷ್ಟು ಹೆಚ್ಚಿಸುವುದಾಗಿ ಟ್ರಂಪ್ ಸೋಮವಾರ ಎಚ್ಚರಿಕೆ ನೀಡಿದ್ದರು. ಅದೇ ದಿನ ಚೀನಾ ತನ್ನ ಸುಂಕಗಳನ್ನು ತೆಗೆದುಹಾಕಲು ಮಧ್ಯಾಹ್ನ 12 ಗಂಟೆಯವರೆಗೂ ಗಡುವು ನೀಡುವುದಾಗಿ ಟ್ರಂಪ್ ಹೇಳಿದ್ದರು. ಏತನ್ಮಧ್ಯೆ ಬೀಜಿಂಗ್ ತನ್ನ 34% ಪ್ರತೀಕಾರದ ಸುಂಕಗಳನ್ನು ರದ್ದುಗೊಳಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದೆ.

ಇದನ್ನೂ ಓದಿ: ಈ ವರ್ಷದಂದೇ ಪ್ರಪಂಚದ ವಿನಾಶ..! 300 ವರ್ಷಗಳ ಹಿಂದಿನ ನ್ಯೂಟನ್‌ ಪತ್ರ ಪತ್ತೆ, ಶಾಕಿಂಗ್‌ ವಿಚಾರ ಬಹಿರಂಗ.. 

ವಿಶ್ವದ ಎರಡು ಬಲಿಷ್ಠ ರಾಷ್ಟ್ರಗಳ ನಡುವಿನ ಈ ವ್ಯಾಪಾರ ಯುದ್ಧವೂ ಜಾಗತಿಕ ಮಾರುಕಟ್ಟೆಯ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಉಭಯ ದೇಶಗಳ ನಡುವೆ ಇದು ಹೀಗೆಯೇ ಮುಂದುವರೆದರೆ ಭಾರತವೂ ಸೇರಿದಂತೆ ಅನೇಕ ದೇಶಗಳ ಮೇಲೆ ದೊಡ್ಡ ಮಟ್ಟದ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಭಾರತವೂ ಸೇರಿದಂತೆ ಜಗತ್ತಿನ ಬಹುತೇಕ ಎಲ್ಲಾ ರಾಷ್ಟ್ರಗಳ ಮೇಲೂ ಅಮೆರಿಕದ ಡೊನಾಲ್ಡ್ ಟ್ರಂಪ್‌ ಸುಂಕ ಹೇರಿದ್ದಾರೆ. ಏಪ್ರಿಲ್‌ 2ರಂದು ಲಿಬರೇಷನ್‌ ಡೇ ಎಂದು ಘೋಷಿಸಿ ಶ್ವೇತ ಭವನದಲ್ಲಿ ಎಲ್ಲಾ ದೇಶಗಳು ಅಮೆರಿಕದ ವಸ್ತುಗಳ ಮೇಲೆ ಹಾಕುತ್ತಿರುವ ಸುಂಕದ ಪ್ರಮಾಣ, ಅದಕ್ಕೆ ಟ್ರಂಪ್‌ ನಿಗದಿ ಮಾಡಿರುವ ಟಾರಿಫ್‌ನ ಲೆಕ್ಕದ ಪಟ್ಟಿಯನ್ನು ತೋರಿಸಿದ್ದರು.  

ಇದೀಗ ಅಮೆರಿಕ ಮತ್ತು ಚೀನಾ ದೇಶಗಳ ನಡುವಿನ ವ್ಯಾಪಾರ ಯುದ್ಧ ಮತ್ತಷ್ಟು ಉಲ್ಬಣಗೊಂಡಿದೆ. ಟ್ರಂಪ್ ಟಾರಿಫ್ ಘೋಷಣೆಯಿಂದ ತಳಮಳಗೊಂಡಿದ್ದ ಚೀನಾ ಅಮೆರಿಕ ಸರಕುಗಳ ಮೇಲೆ ಸುಂಕ ಹೆಚ್ಚಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಈಗ ಎಲ್ಲಾ ಚೀನೀ ಸರಕುಗಳ ಮೇಲಿನ ಸುಂಕವನ್ನ ಟ್ರಂಪ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿಸಿದ್ದಾರೆ. ಇದು ಡ್ರ್ಯಾಗನ್​ ದೇಶಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಥಾಡ್ ಕ್ಷಿಪಣಿ ವ್ಯವಸ್ಥೆ: ಇಸ್ರೇಲ್‌ಗೆ ಅಮೆರಿಕದ ರಕ್ಷಣಾ ಕವಚ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Puttaraj K Alur

ಪುಟ್ಟರಾಜ ಕೆ ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಜೀ ಕನ್ನಡ ನ್ಯೂಸ್‌ನ ಡಿಜಿಟಲ್‌ ವಿಭಾಗದಲ್ಲಿ ಸೀನಿಯರ್‌ ಸಬ್‌ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮುದ್ರಣ ಮಾಧ್ಯಮ, ಟಿವಿ ಮಾಧ್ಯಮ ಮತ್ತು ಡಿಜಿಟಲ್‌ ಮಾಧ್ಯಮ ಹೀಗೆ ಎಲ್ಲಾ ಮಾಧ್ಯಮಗಳಲ್ಲಿಯೂ 10 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.  

ಮೈಸೂರಿನ ಪ್ರಮುಖ ದಿನಪತ್ರಿಕೆಗಳಾದ ರಾಜ್ಯಧರ್ಮ, ಮೈಸೂರು ಮಿತ್ರದಲ್ಲಿ, ಬೆಂಗಳೂರಿನಲ್ಲಿ ದಿಗ್ವಿಜಯ ನ್ಯೂಸ್ ಚಾನೆಲ್‌, ದೆಹಲಿಯಲ್ಲಿ ಒಪೇರಾ (Opera) ನ್ಯೂಸ್‌, ಯುಸಿ (UC Browser)ನ್ಯೂಸ್‌, ಒಪೊಯಿ‌ (Opoyi)ನ್ಯೂಸ್‌ ಮತ್ತು ಪ್ರಸ್ತುತ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

...Read More

Trending News