ಅಮೆರಿಕ ಅಧ್ಯಕ್ಷರ ಆ ಒಂದೇ ಒಂದು ಮಾತಿಗೆ ಪಾಕ್‌ ಗಡಗಡ..! ಅಷ್ಟಕ್ಕೂ ಟ್ರಂಪ್ ಪಾಕ್‌ ಪಿಎಂಗೆ ಹೇಳಿದ್ದೇನು..?

IND PAK war live latest updates : ಭಾರತ-ಪಾಕಿಸ್ತಾನ ಯುದ್ಧದ ಮಧ್ಯೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಂಟ್ರಿ ಕೊಟ್ಟಿದ್ದಾರೆ.. ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಸಾಮೂಹಿಕ ಎಚ್ಚರಿಕೆ ನೀಡಲಾಗಿದೆ. ಏಷ್ಯಾದ ಶಾಂತಿಯುತ ವಾತಾವರಣಕ್ಕೆ ತೊಂದರೆಯಾಗದಂತೆ ನಡೆಯಲು ಸಲಹೆ ನೀಡಿದ್ದಾರೆ.   

Written by - Krishna N K | Last Updated : May 9, 2025, 02:54 AM IST
    • ಭಾರತ-ಪಾಕಿಸ್ತಾನ ಯುದ್ಧದ ಮಧ್ಯೆ ಅಮೆರಿಕ ಅಧ್ಯಕ್ಷ ಟ್ರಂಪ್ ಎಂಟ್ರಿ ಕೊಟ್ಟಿದ್ದಾರೆ..
    • ಪಾಕಿಸ್ತಾನಿ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಸಾಮೂಹಿಕ ಎಚ್ಚರಿಕೆ ನೀಡಲಾಗಿದೆ.
    • ಶಾಂತಿಯುತ ವಾತಾವರಣಕ್ಕೆ ತೊಂದರೆಯಾಗದಂತೆ ನಡೆಯಲು ಸಲಹೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷರ ಆ ಒಂದೇ ಒಂದು ಮಾತಿಗೆ ಪಾಕ್‌ ಗಡಗಡ..! ಅಷ್ಟಕ್ಕೂ ಟ್ರಂಪ್ ಪಾಕ್‌ ಪಿಎಂಗೆ ಹೇಳಿದ್ದೇನು..?

India Pakistan War live : "ಆಪರೇಷನ್ ಸಿಂಧೂರ" ನಂತರ, ಪಾಕಿಸ್ತಾನ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿದಾಳಿ ನಡೆಸಿತು. ಭಾರತದ ಎಸ್-400 ವ್ಯವಸ್ಥೆಯು ಕ್ಷಿಪಣಿಗಳು ಪಾಕ್‌ ಡ್ರೋನ್‌ಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಎದುರಿಸಿದವು.. ಗುರುವಾರ ಸಂಜೆ, ಪಾಕಿಸ್ತಾನವು ಪ್ರಚೋದನಕಾರಿ ಪ್ರತಿದಾಳಿಗಳನ್ನು ನಡೆಸಿತು. ಜಮ್ಮು ಮತ್ತು ಕಾಶ್ಮೀರದ ವಾಯುನೆಲೆ ಸೇರಿದಂತೆ ಹನ್ನೆರಡು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಫಿರಂಗಿ ಗುಂಡಿನ ದಾಳಿ, ಡ್ರೋನ್ ದಾಳಿ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು. ಇದೀಗ ಭಾರತ-ಪಾಕಿಸ್ತಾನ ಯುದ್ಧದ ಮಧ್ಯದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಪ್ರವೇಶ ಮಾಡಿದ್ದಾರೆ..

Add Zee News as a Preferred Source

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಂಪ್ ಹಲವು ಬಾರಿ ಪ್ರತಿಕ್ರಿಯಿಸಿದ್ದಾರೆ. ಎರಡೂ ದೇಶಗಳಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾದರೆ, ಖಂಡಿತವಾಗಿಯೂ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ. ಎರಡೂ ದೇಶಗಳ ನಡುವೆ ಹೆಚ್ಚುತ್ತಿರುವ ಸಂಘರ್ಷದ ವಾತಾವರಣವನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಅದು ತುಂಬಾ ಭಯಾನಕವಾಗಿರುತ್ತದೆ ಎಂದು ಟ್ರಂಪ್‌ ತಿಳಿಸಿದರು.

ಇದನ್ನೂ ಓದಿ:IND PAK War updates : ಪಾಕ್ ಪ್ರಧಾನಿ ಮನೆ ಹತ್ತಿರ ಭಾರಿ ಸ್ಪೋಟ.. ಶೆಹಬಾಜ್ ಜಸ್ಟ್‌ ಮಿಸ್‌..!

ಭಾರತ ಮತ್ತು ಪಾಕಿಸ್ತಾನ ಎರಡನ್ನೂ ನಾನು ಚೆನ್ನಾಗಿ ಬಲ್ಲೆ. ಇಬ್ಬರು ತಮ್ಮ ಉದ್ವಿಗ್ನತೆಯನ್ನು ಕೊನೆಗೊಳಿಸಬೇಕೆಂದು ಟ್ರಂಪ್ ಹೇಳಿದರು. ಆದರೆ. ಟ್ರಂಪ್ ಎರಡೂ ದೇಶಗಳಿಗೆ ಬೆಂಬಲ ನೀಡುವುದಾಗಿ ಸ್ಪಷ್ಟಪಡಿಸಿದ ಕೆಲವೇ ಗಂಟೆಗಳಲ್ಲಿ, ಪಾಕಿಸ್ತಾನ ತನ್ನ ವಿಕೃತ ಸ್ವಭಾವವನ್ನು ಬಹಿರಂಗಪಡಿಸಿತು. 

ಜಗತ್ತಿನ ಎಲ್ಲಾ ದೇಶಗಳು ಭಾರತವನ್ನು ಬೆಂಬಲಿಸುತ್ತಿರುವುದನ್ನು ಸಹಿಸದ ಪಾಕಿಸ್ತಾನ, ಭಾರತದ ವಿರುದ್ಧ ವಾಗ್ದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ರಾಜಸ್ಥಾನದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆದರೆ, ಭಾರತೀಯ ಸೇನೆಯು ತನ್ನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬಳಸಿಕೊಂಡು ಪಾಕ್‌ ಪ್ಲಾನ್‌ನನ್ನು ಹಾಳು ಮಾಡಿತು. 

ಇದನ್ನೂ ಓದಿ:ಪಾಕ್‌ ಮೇಲೆ ಭಾರತದ ಭಯಾನಕ ಅಸ್ತ್ರ ಪ್ರಯೋಗ..! ಸತ್ನೋ.. ಬದುಕಿದ್ನೋ ಅಂತ ಓಡಿದ ಪಾಕಿಸ್ತಾನಿಗಳು..

ಇದಾದ ನಂತರ ಭಾರತ-ಪಾಕಿಸ್ತಾನ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಾರೆ. ಏಷ್ಯಾದ ಶಾಂತಿಯುತ ವಾತಾವರಣವನ್ನು ಹಾಳು ಮಾಡಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಸಾಮೂಹಿಕ ಎಚ್ಚರಿಕೆ ನೀಡಲಾಯಿತು. ಇಂತಹ ಹುಚ್ಚುತನದ ಕೆಲಸಗಳನ್ನು ಮಾಡುವುದನ್ನು ನಿಲ್ಲಿಸದಿದ್ದರೆ ಶಿಕ್ಷೆ ಖಂಡಿತ ಎಂದು ಎಚ್ಚರಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News