close

News WrapGet Handpicked Stories from our editors directly to your mailbox

ಭಾರತದೊಂದಿಗೆ ಇಮ್ರಾನ್ ಮಾತುಕತೆ, ಉಗ್ರ ಚಟುವಟಿಕೆ ನಿಲ್ಲಿಸಲು ಪಾಕ್‌ಗೆ ಯುಎಸ್ ಆಗ್ರಹ

ಇಸ್ಲಾಮಾಬಾದ್ ನಲ್ಲಿ ಭಯೋತ್ಪಾದಕರು ಸ್ವತಂತ್ರವಾಗಿ ಚಲಿಸುವ ಮತ್ತು ಆಯುಧಗಳನ್ನು ಪಡೆದುಕೊಳ್ಳದಂತೆ ತಡೆಯಬೇಕೆಂದು ವೈಟ್ ಹೌಸ್ನ ಅಧಿಕೃತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ವರದಿ ಮಾಡಿದೆ.

Updated: Jun 10, 2019 , 04:38 PM IST
ಭಾರತದೊಂದಿಗೆ ಇಮ್ರಾನ್ ಮಾತುಕತೆ, ಉಗ್ರ ಚಟುವಟಿಕೆ ನಿಲ್ಲಿಸಲು ಪಾಕ್‌ಗೆ ಯುಎಸ್ ಆಗ್ರಹ

ಭಯೋತ್ಪಾದನೆಗೆ ಕಡಿವಾಣ ಹಾಕಿ ಬಳಿಕ ಪಾಕಿಸ್ತಾನವು ಭಾರತದೊಂದಿಗೆ ಸಂಬಂಧವನ್ನು ಮುಂದುವರೆಸಬೇಕು ಎಂದು ಅಮೆರಿಕ ಹೇಳಿದೆ. ಭಯೋತ್ಪಾದನೆ ವಿರುದ್ಧ ಹೆಚ್ಚು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಲು ಪಾಕಿಸ್ತಾನವನ್ನು ಒತ್ತಾಯಿಸಿರುವ ಅಮೆರಿಕ, ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದೆ.

ಇಸ್ಲಾಮಾಬಾದ್ ನಲ್ಲಿ ಭಯೋತ್ಪಾದಕರು ಸ್ವತಂತ್ರವಾಗಿ ಚಲಿಸುವ ಮತ್ತು ಆಯುಧಗಳನ್ನು ಪಡೆದುಕೊಳ್ಳದಂತೆ ತಡೆಯಬೇಕು. ಇದಲ್ಲದೆ, ಭಯೋತ್ಪಾದಕರು  ಭಾರತೀಯ ಭೂಪ್ರದೇಶದ ಒಳನುಸುಳಿ ದಾಳಿ ಮಾಡುವುದನ್ನೂ ಕೂಡ ತಡೆಯಬೇಕು ವೈಟ್ ಹೌಸ್ನ ಅಧಿಕೃತ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ವರದಿ ಮಾಡಿದೆ.  

ಭಾರತ-ಪಾಕಿಸ್ತಾನ ನಡುವಿನ ಶಾಂತಿಯುತ ಸಂಧಾನದ ಜೊತೆಗೆ, ಪಾಕಿಸ್ತಾನ ತನ್ನ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಸ್ಥಗಿತಗೊಳಿಸುತ್ತದೆ. ಅಷ್ಟೇ ಅಲ್ಲದೆ, ಭಯೋತ್ಪಾದನ ಚಟುವಟಿಕೆಗಳನ್ನು ನಿಗ್ರಹಿಸುವ ಸಲುವಾಗಿ ಉತ್ತಮ ಹೆಜ್ಜೆ ಇಡಲಿದೆ ಎಂದು ನಿರೀಕ್ಷಿಸುತ್ತಿರುವುದಾಗಿ ಅಮೇರಿಕಾ ತಿಳಿಸಿದೆ.

ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಭಾರತ-ಪಾಕಿಸ್ತಾನ ನಡುವಿನ ಶಾಂತಿಯುತ ಮಾತುಕತೆಗೆ ಬಯಸುತ್ತಿರುವುದಾಗಿ ತಿಳಿಸಿ ಕಳೆದ ವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕಾಶ್ಮೀರ ಸೇರಿದಂತೆ ಭಾರತ-ಪಾಕಿಸ್ತಾನ ನಡುವಿನ ಎಲ್ಲಾ ಸಮಸ್ಯೆಗಳನ್ನು ಕುಳಿತು ಬಗೆಹರಿಸಿಕೊಳ್ಳುವ ಬಗ್ಗೆ ಇಮ್ರಾನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಇಮ್ರಾನ್ ಖಾನ್ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆ ಉಭಯ ದೇಶಗಳು ಶಾಂತಿಯಿಂದ ಇರಲು ಇರುವ ಏಕೈಕ ಪರಿಹಾರವಾಗಿದೆ.