Astronomer ceo Andy Byron : ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ವಿಶ್ವಪ್ರಸಿದ್ಧ ಕೋಲ್ಡ್‌ಪ್ಲೇ ಸಂಗೀತ ಕಚೇರಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರಸ್ತುತ ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಒಂದು ಪ್ರಸಿದ್ಧ ಕಂಪನಿಯ ಸಿಇಒ ತನ್ನದೇ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದು, ಬಟಾಬಯಲಾಗಿದೆ.
ಹೌದು.. ಕೋಲ್ಡ್‌ಪ್ರೇ ಮ್ಯೂಸಿಕ್ ಇವೆಂಟ್‌ವೇಳೆ ಕಿಸ್ ಕ್ಯಾಮೆರಾ ಅಂತ ಒಂದು ಪರದೆಯ ಮೇಲೆ ಜೋಡಿಗಳನ್ನು ತೋರಿಸಲಾಗುತ್ತದೆ. ಈ ವೇಳೆ ಇಬ್ಬರೂ ಕಿಸ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ. ಇದೇ ವೇಳೆ ಪ್ರಸಿದ್ದ ಕಂಪನಿ ಸಿಇಒ ಕಿಸ್ ಕ್ಯಾಮ್‌ದಲ್ಲಿ ಸರೆಬಿದ್ದಿದ್ದಾರೆ. ಇದರಿಂದ ಪ್ರಸಿದ್ಧ ಕಂಪನಿಯ ಸಿಇಒ ವಿವಾಹೇತರ ಸಂಬಂಧ ಜಗಜ್ಜಾಹೀರವಾಗಿದೆ.
ಇದನ್ನೂ ಓದಿ:ವಿಶ್ವದ ಅತಿ ಎತ್ತರದ ಶಿಖರ "ಮೌಂಟ್ ಎವರೆಸ್ಟ್"ಗೆ ಇದೇ ಹೆಸರು ಇಟ್ಟಿದ್ದು ಯಾಕೆ ಗೊತ್ತಾ?
ಪ್ರಸಿದ್ಧ ಅಮೇರಿಕನ್ ಕಂಪನಿ ಆಸ್ಟ್ರೋನೊಮರ್‌ನ ಸಿಇಒ ಆಂಡಿ ಬೈರ್ನ್ ಮತ್ತು ಅದೇ ಕಂಪನಿಯ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಕ್ರಿಸ್ಟೀನ್ ಕ್ಯಾಬಟ್ ಕಿಸ್ ಕ್ಯಾಮರದಲ್ಲಿ ಕಾಣಿಸಿಕೊಂಡಿದ್ದಾರೆ. ಪರದೆಯ ಮೇಲೆ ಅವರ ದೃಶ್ಯವನ್ನು ತೋರಿಸಿದಾಗ ಇಬ್ಬರೂ ಅಪ್ಪಿಕೊಂಡಿದ್ದರು.. ಯಾವಾಗ ಅವರಿಗೆ ತಮ್ಮನ್ನು ಚಿತ್ರೀಕರಿಸಲಾಗುತ್ತಿದೆ ಅಂತ ಗೊತ್ತಾಯ್ತು.. ಸಡನ್ನಾಗಿ ಮುಖ ಮುಚ್ಚಿಕೊಂಡಿದ್ದಾರೆ.
Coldplay accidentally exposed an alleged affair between Astronomer CEO Andy Byron and his colleague Kristin Cabot at one of their recent concerts. pic.twitter.com/hsJHV2u5UM
— Pop Base (@PopBase) July 17, 2025
ತಮ್ಮ ವಿವಾಹೇತರ ಸಂಬಂಧ ಬೆಳಕಿಗೆ ಬಂದಿದೆ ಎಂಬ ಭಯದಲ್ಲಿ ಇಬ್ಬರೂ ಮುಖ ಮುಚ್ಚಿಕೊಂಡರು. ಈ ಮೂಲಕ ಇಬ್ಬರೂ ವಿವಾಹೇತರ ಸಂಬಂಧದಲ್ಲಿದ್ದಾರೆಂದು ಬಹಿರಂಗವಾಯಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:ಮಹಿಳೆಯರೇ.. ನೀವು ಮಾಡುವ ಈ ಸಣ್ಣ ತಪ್ಪೇ.. ನಿಮ್ಮ ಗಂಡ ಬೇರೆ ಮಹಿಳೆ ಜೊತೆ ಸಂಬಂಧ ಬೆಳೆಸಲು ಕಾರಣ..!
ಯಾರು ಈ ಆಂಡಿ ಬೈರನ್? : ಆಂಡಿ ಬೈರ್ನ್ ಜುಲೈ 2023 ರಿಂದ ಆಸ್ಟ್ರೋನೊಮರ್‌ನ ಸಿಇಒ ಆಗಿದ್ದಾರೆ. ಇದು ಸಾಫ್ಟ್‌ವೇರ್ ಅಭಿವೃದ್ಧಿ ಕಂಪನಿಯಾಗಿದೆ. ಕ್ರಿಸ್ಟೀನ್ ಕ್ಯಾಬಟ್ ಒಂದೇ ಕಂಪನಿಯಲ್ಲಿ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ (HR Head) ಕೆಲಸ ಮಾಡುತ್ತಿದ್ದಾರೆ.. ಇಬ್ಬರಿಗೂ ಈಗಾಗಲೇ ಬೇರೆ ಬೇರೆ ಮದುವೆಯಾಗಿದೆ.. ಪ್ರಸ್ತುತ ವಿವಾಹೇತರ ಸಂಬಂಧದಲ್ಲಿದ್ದಾರೆ ಎಂಬುದು ದೃಢಪಟ್ಟಿದೆ.









