ಲಂಡನ್‌ನಲ್ಲಿ ಗಾಂಧೀಜಿಯ ಗೋಲ್ಡ್ ಪ್ಲೇಟೆಡ್ ಗ್ಲಾಸ್‌ಗಳ ಹರಾಜು, ಬೆಲೆ ಎಷ್ಟೆಂದು ತಿಳಿಯಿರಿ

'ಮಹಾತ್ಮ ಗಾಂಧಿಯವರ ಕನ್ನಡಕ' ಮಿಲಿಟರಿ, ಇತಿಹಾಸ ಮತ್ತು ಕ್ಲಾಸಿಕ್ ಕಾರುಗಳ ಹರಾಜುದಾರರ ಸರಣಿಯ ಒಂದು ಭಾಗವಾಗಿದ್ದು, ಆಗಸ್ಟ್ 21 ರಂದು ಆನ್‌ಲೈನ್ ಹರಾಜಿನಲ್ಲಿ ಮಾರಾಟವಾಗಲಿದೆ.

Last Updated : Aug 11, 2020, 07:30 AM IST
ಲಂಡನ್‌ನಲ್ಲಿ ಗಾಂಧೀಜಿಯ ಗೋಲ್ಡ್ ಪ್ಲೇಟೆಡ್ ಗ್ಲಾಸ್‌ಗಳ ಹರಾಜು, ಬೆಲೆ ಎಷ್ಟೆಂದು ತಿಳಿಯಿರಿ title=

ನವದೆಹಲಿ: ರಾಷ್ಟ್ರದ ಪಿತಾಮಹ ಮಹಾತ್ಮ ಗಾಂಧಿ (Mahatma Gandhi)ಯವರ ಚಿನ್ನದ ಲೇಪಿತ ಕನ್ನಡಕವನ್ನು ಇಂಗ್ಲೆಂಡ್‌ನಲ್ಲಿ ಆನ್‌ಲೈನ್ ಹರಾಜಿಗೆ ಇಡಲಾಗಿದೆ. ಅವರು ದಕ್ಷಿಣ ಆಫ್ರಿಕಾದಲ್ಲಿ ವಾಸವಾಗಿದ್ದಾಗ ಈ ಕನ್ನಡಕವನ್ನು ಧರಿಸಿದ್ದರು. ಅದು ಆ ಸಮಯದಲ್ಲಿ ಅವರ ಆರಂಭಿಕ ದಿನಗಳ ನೆನಪಿಗೆ ಸಂಬಂಧಿಸಿದೆ. ಗಾಂಧೀಜಿ 1893ರಲ್ಲಿ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾಕ್ಕೆ (South Africa) ಹೋದರು. ಈ ಸಮಯದಲ್ಲಿ ಅವರು ಈ ಕನ್ನಡಕವನ್ನು ಧರಿಸಿದ್ದರು. ಇಂಗ್ಲೆಂಡ್‌ನಲ್ಲಿ ಇದರ ಬೆಲೆ 10 ಸಾವಿರದಿಂದ 15 ಸಾವಿರ ಪೌಂಡ್ಗಳವರೆಗೆ ಇರುತ್ತದೆ ಎಂದು ಅಂದಾಜಿಸಲಾಗಿದೆ.

ನೈಋತ್ಯ ಇಂಗ್ಲೆಂಡ್‌ನ ಹ್ಯಾನ್‌ಹ್ಯಾಮ್‌ನಲ್ಲಿರುವ ಈಸ್ಟ್ ಬ್ರಿಸ್ಟಲ್ ಹರಾಜು ಭವನದ ಪ್ರಕಾರ, "ತಮ್ಮ ಪತ್ರ ಪೆಟ್ಟಿಗೆಯಲ್ಲಿ ಹೊದಿಕೆಗೆ ಹಾಕಿದ ಕನ್ನಡಕಗಳ ಜೋಡಿ ಅದರ ಹಿಂದೆ ಅಂತಹ ಅದ್ಭುತ ಇತಿಹಾಸವನ್ನು ಹೊಂದಿರಬಹುದು ಎಂದು ನಮಗೆ ಆಶ್ಚರ್ಯವಾಯಿತು." ಇದು ಮಹಾತ್ಮ ಗಾಂಧಿಯವರದು ಎಂದು ಅಂದಾಜಿಸಲಾಗಿದೆ. ವಸಾಹತುಶಾಹಿ ವಿರೋಧಿ ರಾಷ್ಟ್ರೀಯತೆ, ರಾಜಕೀಯ ನೈತಿಕತೆ ಮತ್ತು ಅಹಿಂಸಾತ್ಮಕ ಪ್ರತಿರೋಧದ ಸಂಕೇತವಾಗಿರುವ ಮಹಾತ್ಮ ಗಾಂಧೀಜಿ ಅವರ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ '. ಇದು ಐತಿಹಾಸಿಕ ಮಹತ್ವದ ಆವಿಷ್ಕಾರ ಎಂದು ಹರಾಜುಗಾರ ಆಂಡಿ ಸ್ಟೌ ಹೇಳಿದರು. 

ಮಹಾತ್ಮ ಗಾಂಧಿ ಭಾರತ್ ರತ್ನಕ್ಕಿಂತ ಹೆಚ್ಚು: ಸುಪ್ರೀಂ ಕೋರ್ಟ್

ಇದು ಆಸಕ್ತಿದಾಯಕವಾಗಬಹುದು ಎಂದಿರುವ ಅವರು ಅದು ಯಾವುದೇ ಪ್ರಾಮುಖ್ಯತೆಯನ್ನು ಹೊಂದಿಲ್ಲದಿದ್ದರೆ ನೀವು ಅದನ್ನು ನಾಶಪಡಿಸಬಹುದು ಎಂದು ಅವರು ಹೇಳಿದರು.

ಆನ್‌ಲೈನ್ ಹರಾಜಿನಲ್ಲಿ ಕನ್ನಡಕಕ್ಕೆ ಈಗಾಗಲೇ £ 6000 ಬೆಲೆಯಿದೆ, ಮತ್ತು ಈ ಕನ್ನಡಕಗಳನ್ನು ಹೊಂದಿದ್ದ ಇಂಗ್ಲೆಂಡ್‌ನಲ್ಲಿ ಅಪರಿಚಿತ ವೃದ್ಧ ಮಾರಾಟಗಾರರ ಬಳಿ ಈ ಕನ್ನಡಕ ಇತ್ತು. 1910 ರಿಂದ 1930 ರ ನಡುವೆ, ಅವರು ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಷ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅವರ ಚಿಕ್ಕಪ್ಪನಿಗೆ ಈ ಕನ್ನಡಕ ಸಿಕ್ಕಿತ್ತು ಎಂದು ಹೇಳಿದ್ದರಂತೆ. ಗಮನಾರ್ಹವಾಗಿ  ಗಾಂಧಿ 1914 ರಲ್ಲಿ ದಕ್ಷಿಣ ಆಫ್ರಿಕಾವನ್ನು ತೊರೆದರು.

ಸ್ಟೋವ್ ಪ್ರಕಾರ, ಮಾರಾಟಗಾರನ ತಂದೆ ಈ ಕಥೆಯನ್ನು 50 ವರ್ಷಗಳ ಹಿಂದೆ ಹೇಳಿದ್ದರು. ಅವರ ಪ್ರಕಾರ ಈ ಕನ್ನಡಕದ ಕುರಿತಂತೆ ಮಿಶ್ರ ದಿನಾಂಕಗಳನ್ನು ಹೊಂದಿದ್ದ ವರಿಗೆ ಕೆಲವು ಪುರಾವೆಗಳು ದೊರೆತಿವೆ. ಅದರಲ್ಲಿ ಗಾಂಧೀಜಿಯವರು ಮೊದಲ ಬಾರಿಗೆ ಕನ್ನಡಕ ಧರಿಸಿದ ದಿನಾಂಕವೂ ಸಹ ಉಲ್ಲೇಖವಾಗಿದೆ. ಅದು ಅವರ  ಆರಂಭಿಕ ಕನ್ನಡಕಗಳಲ್ಲಿ ಒಂದಾಗಿರಬಹುದು ಎಂದು ಅಭಿಪ್ರಾಯಪಡಲಾಗಿದೆ. ಸ್ಟೋವ್ ಪ್ರಕಾರ ಅದು ಬಿಳಿ ಲಕೋಟೆಗಳಲ್ಲಿದ್ದು ಅವುಗಳನ್ನು ಸುಲಭವಾಗಿ ಕದಿಯಬಹುದು, ಹೊರಗೆ ಬಿದ್ದಿರಬಹುದು ಅಥವಾ ಬಾಕ್ಸ್ ನಲ್ಲಿಯೇ ನಾಶಪಡಿಸಬಹುದು. ಇದು ಕಂಪನಿಯಾಗಿ ನಾವು ಮಾಡಿದ ಅತಿದೊಡ್ಡ ಆವಿಷ್ಕಾರವಾಗಿದೆ ಎಂದು ವಿವರಿಸಿದ್ದಾರೆ.

'ಮಹಾತ್ಮ ಗಾಂಧಿಯವರ ಕನ್ನಡಕ' ಮಿಲಿಟರಿ, ಇತಿಹಾಸ ಮತ್ತು ಕ್ಲಾಸಿಕ್ ಕಾರುಗಳ ಹರಾಜುದಾರರ ಸರಣಿಯ ಒಂದು ಭಾಗವಾಗಿದ್ದು, ಆಗಸ್ಟ್ 21 ರಂದು ಆನ್‌ಲೈನ್ ಹರಾಜಿನಲ್ಲಿ ಮಾರಾಟವಾಗಲಿದೆ.

Trending News