ಭಾರತದ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಪರವಾಗಿ ಕಣ್ಣೀರು ಹಾಕಿದ ಏಕೈಕ ರಾಷ್ಟ್ರ ಇದು !ಭಯೋತ್ಪಾದಕರ ಬಗ್ಗೆಅದ್ಯಾಕೆ ಅಷ್ಟು ಕರುಣೆ ಇವರಿಗೆ ?

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದನಾ ಶಿಬಿರದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿ ಬಗ್ಗೆ ವಿಶ್ವದ ಮೂಲೆ ಮೂಲೆಗಳಿಂದ ಬೆಂಬಲ ವ್ಯಕ್ತವಾಗಿದೆ. ಆದ್ರೆ ಈ ದೇಶ ಮಾತ್ರ ಭಾರತದ ಈ ಕ್ರಮದ ವಿರುದ್ದ ಬುಸುಗುಡುತ್ತಿದೆ.  

Written by - Ranjitha R K | Last Updated : May 8, 2025, 12:06 PM IST
  • ಪಿಒಕೆ ಮತ್ತು ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಅಡಗುತಾಣಗಳ ನಾಶ
  • ಭಾರತದ ಕ್ರಮವನ್ನು ವಿಶ್ವದಾದ್ಯಂತದ ನಾಯಕರು ಬೆಂಬಲಿಸುತ್ತಿದ್ದಾರೆ.
  • ಭಾರತದ ಈ ಕ್ರಮದ ವಿರುದ್ದ ಪಾಕಿಸ್ತಾನದ ಪರ ಮತ್ತೊಂದು ದೇಶ ಕಣ್ಣೀರು
ಭಾರತದ ಏರ್ ಸ್ಟ್ರೈಕ್ ಬಳಿಕ ಪಾಕಿಸ್ತಾನದ ಪರವಾಗಿ ಕಣ್ಣೀರು ಹಾಕಿದ ಏಕೈಕ ರಾಷ್ಟ್ರ ಇದು !ಭಯೋತ್ಪಾದಕರ ಬಗ್ಗೆಅದ್ಯಾಕೆ ಅಷ್ಟು ಕರುಣೆ ಇವರಿಗೆ ?

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ , ಭಾರತವು ಪಿಒಕೆ ಮತ್ತು ಪಾಕಿಸ್ತಾನದಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿದೆ. ಭಯೋತ್ಪಾದನೆಯ ವಿರುದ್ಧ ಭಾರತದ ಕ್ರಮವನ್ನು ವಿಶ್ವದಾದ್ಯಂತದ ನಾಯಕರು ಬೆಂಬಲಿಸುತ್ತಿದ್ದಾರೆ. ಚೀನಾ ಕೂಡಾ ಭಾರತದ ಕ್ರಮವನ್ನು  ಸಮರ್ಥಿಸಿಯೇ  ಪ್ರತಿಕ್ರಿಯೆಯನ್ನು ನೀಡಿದೆ. ಚೀನಾ ಎಲ್ಲಾ ರೀತಿಯ ಭಯೋತ್ಪಾದನೆಯನ್ನು ವಿರೋಧಿಸುತ್ತದೆ ಎಂದು ಹೇಳಿದೆ. ಟರ್ಕಿ ಪಾಕಿಸ್ತಾನದ ಭಾಷೆಯನ್ನೇ  ಮಾತನಾಡುತ್ತಿದೆ. ಇದರಲ್ಲಿ ಯಾವುದೇ ಅಚ್ಚರಿಯಿಲ್ಲ. ಯಾಕೆಂದರೆ ಈ ಎರಡು ರಾಷ್ಟ್ರಗಳ ನಡುವಿನ ಆಪ್ತತೆ ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ಭಾರತದ ಈ ಕ್ರಮದ ವಿರುದ್ದ ಪಾಕಿಸ್ತಾನದ ಪರ ಮತ್ತೊಂದು ದೇಶ ಕಣ್ಣೀರು ಸುರಿಸುತ್ತಿದೆ. ಈ ದೇಶದ ಹೆಸರು ಅಜೆರ್ಬೈಜಾನ್.

Add Zee News as a Preferred Source

ಭಯೋತ್ಪಾದಕರ ವಿರುದ್ಧದ ಕ್ರಮವನ್ನು ವಿರೋಧಿಸಿ  ಅಜೆರ್ಬೈಜಾನ್ ಅಧಿಕೃತ ಹೇಳಿಕೆ ನೀಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಬಗ್ಗೆ ಅಜೆರ್ಬೈಜಾನ್ ಕಳವಳ ವ್ಯಕ್ತಪಡಿಸಿದ್ದಲ್ಲದೆ, 'ಇಸ್ಲಾಮಿಕ್ ಗಣರಾಜ್ಯ ಪಾಕಿಸ್ತಾನದ ವಿರುದ್ಧ ನಡೆದ ಮಿಲಿಟರಿ ದಾಳಿಯಲ್ಲಿ ನಾಗರಿಕರು ಸಾವನ್ನಪ್ಪಿ ಜನರು ಗಾಯಗೊಂಡಿದ್ದಾರೆ' ಎಂದು ಹೇಳಿದೆ.

ಇದನ್ನೂ ಓದಿ : ಆಪರೇಶನ್ ಸಿಂಧೂರ ಬೆನ್ನಲ್ಲೆ ಪಾಕಿಸ್ತಾನದ ಲಾಹೋರ್ ನಲ್ಲಿ ಒಂದರ ಹಿಂದೆ ಒಂದರಂತೆ, ಮೂರು ಸ್ಪೋಟ !ಲಾಹೋರ್‌ನಾದ್ಯಂತ ಕೂಗುತ್ತಿವೆ ಸೈರನ್‌ಗಳು

ಸತ್ತಿರುವುದು ಜನ ಸಾಮಾನ್ಯರಲ್ಲ ಭಯೋತ್ಪಾದಕರು : 
ಪಾಕಿಸ್ತಾನದಲ್ಲಿ ಪೋಷಿಸಲಾಗುತ್ತಿದ್ದ ಭಯೋತ್ಪಾದಕ ಶಿಬಿರಗಳನ್ನು ಭಾರತ ಸ್ಫೋಟಿಸಿದೆ. ಭಾರತ ಯಾವುದೇ ಸಾಮಾನ್ಯ ವ್ಯಕ್ತಿ ಅಥವಾ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂಬುದನ್ನು ಅಜೆರ್ಬೈಜಾನ್ ಮರೆತು ಮಾತನಾಡುತ್ತಿದೆ. ಈ ಭಯೋತ್ಪಾದಕ ಶಿಬಿರಗಳಲ್ಲಿ ತರಬೇತಿ ಪಡೆದ ನಂತರ, ಅವರು ಭಾರತದ ಮೇಲೆ ದಾಳಿ ಮಾಡುತ್ತಾರೆ. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಯ ತಾಯಿ ಎಂಬುದಕ್ಕೆ ಭಾರತವು ಹಲವು ಬಾರಿ ಜಗತ್ತಿಗೆ ಪುರಾವೆ ನೀಡಿದೆ. ಅಲ್ಲಿಂದ ಬಂದ ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ ಅಮಾಯಕ ಜನರನ್ನು ಅವರ ಧರ್ಮವನ್ನು ಕೇಳಿ ಕೊಂದಿದ್ದರು. ಆ ಸಂದರ್ಭದಲ್ಲಿ ಅಜೆರ್ಬೈಜಾನ್‌ಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ಆದರೆ ಈಗ ಭಯೋತ್ಪಾದಕರನ್ನು ಗುರಿಯಾಗಿಸಿಕೊಂಡು ಭಾರತ ನಡೆಸಿರುವ ದಾಳಿಯ ಬಗ್ಗೆ ಕಣ್ಣೀರು ಹಾಕುತ್ತಿದೆ. 

ಅಸಮಾಧಾನಕ್ಕೆ ಕಾರಣ ?:
ಹೌದು, ಅಜೆರ್ಬೈಜಾನ್‌ಗೆ ಭಾರತದ ಮೇಲೆ ಇರುವ ದ್ವೇಷಕ್ಕೆ ಒಂದು ವಿಶೇಷ ಕಾರಣವಿದೆ. ಅದರ ನೆರೆಯ ದೇಶವಾದ ಅರ್ಮೇನಿಯಾ ಭಾರತೀಯ ಶಸ್ತ್ರಾಸ್ತ್ರಗಳ ದೊಡ್ಡ ಖರೀದಿದಾರನಾಗಿ ಹೊರಹೊಮ್ಮಿದೆ. ಕೆಲವು ತಿಂಗಳುಗಳ ಹಿಂದೆ, ಅವರು ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂಬ ಸುದ್ದಿ ಬಂದಿತು. ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ನಾಗೋರ್ನೊ ಮತ್ತು ಕರಬಖ್ ಪ್ರದೇಶಗಳಿಗಾಗಿ ಬಹಳ ಸಮಯದಿಂದ ಹೋರಾಡುತ್ತಿವೆ. ಅಜೆರ್ಬೈಜಾನ್‌ನ ಹೇಳಿಕೆ ಭಾರತೀಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನರು ಅರ್ಮೇನಿಯಾಗೆ  ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ : Operation Sindoor: ಬಿಕ್ಕಟ್ಟನ್ನು ರಾಜತಾಂತ್ರಿಕವಾಗಿ ಬಗೆಹರಿಸಿಕೊಳ್ಳಿ: ಇಂಡಿಯಾ-ಪಾಕ್​ಗೆ ಯುಕೆ ಒತ್ತಾಯ

ಅಂದಹಾಗೆ, ಭಾರತವು ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ಎರಡರೊಂದಿಗೂ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿದೆ. ಇದು ಮಧ್ಯ ಏಷ್ಯಾ ಮತ್ತು ಇರಾನ್ ಮೂಲಕ ರಷ್ಯಾ ಮತ್ತು ಯುರೋಪ್‌ನೊಂದಿಗೆ ಸಂಪರ್ಕಕ್ಕೆ ಭೌಗೋಳಿಕವಾಗಿ ಮುಖ್ಯವಾಗಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Ranjitha R K

ರಂಜಿತಾ ಆರ್.ಕೆ ಪ್ರಸ್ತುತ `ಜೀ ಕನ್ನಡ ನ್ಯೂಸ್‌' ವೆಬ್‌ನಲ್ಲಿ ಚೀಫ್ ಸಬ್ ಎಡಿಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ 19 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿರುವ ಇವರು 2020 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯ, ಬ್ಯುಸಿನೆಸ್, ಟೆಕ್ನಾಲಜಿ, ಹೆಲ್ತ್ ಅಂಡ್ ಲೈಫ್ ಸ್ಟೈಲ್, ಸ್ಪಿರಿಚ್ಯುವಲ್ ವಿಭಾಗಗಲ್ಲಿ ಆಸಕ್ತಿಕರ ಲೇಖನಗಳನ್ನು ಒದಗಿಸುವ ಅನುಭವವನ್ನು ಹೊಂದಿರುತ್ತಾರೆ. 2006ರಲ್ಲಿ ʼರಾಮೋಜಿ ಗ್ರೂಪ್‌ʼನ ಈಟಿವಿ  ಕನ್ನಡ ವಾಹಿನಿಯಿಂದ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು, ನಂತರ ಜನಶ್ರೀ, ಸಮಯ, ಸುವರ್ಣ ವಾಹಿನಿಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ. ...Read More

Trending News