ಪರೀಕ್ಷೆ ಬರೆಯಲು ತನ್ನಂತೆ ಇರೋ 8 ಜನರನ್ನು ನೇಮಿಸಿದ್ದ ಬಾಂಗ್ಲಾದೇಶದ ಸಂಸದೆ..!

 ಬಾಂಗ್ಲಾದೇಶದ ಸಂಸದೆಯೊಬ್ಬರು ಪರೀಕ್ಷೆ ಬರಿಯಲು ತನ್ನಂತೆ ಇರುವ 8 ವ್ಯಕ್ತಿಗಳನ್ನು ನೇಮಿಸಿದ ಹಿನ್ನಲೆಯಲ್ಲಿ ಈಗ ಅವರನ್ನು ವಿವಿಯಿಂದ ಹೊರಹಾಕಲಾಗಿದೆ.

Last Updated : Oct 24, 2019, 07:13 PM IST
ಪರೀಕ್ಷೆ ಬರೆಯಲು ತನ್ನಂತೆ ಇರೋ 8 ಜನರನ್ನು ನೇಮಿಸಿದ್ದ ಬಾಂಗ್ಲಾದೇಶದ ಸಂಸದೆ..!  title=

ನವದೆಹಲಿ: ಬಾಂಗ್ಲಾದೇಶದ ಸಂಸದೆಯೊಬ್ಬರು ಪರೀಕ್ಷೆ ಬರಿಯಲು ತನ್ನಂತೆ ಇರುವ 8 ವ್ಯಕ್ತಿಗಳನ್ನು ನೇಮಿಸಿದ ಹಿನ್ನಲೆಯಲ್ಲಿ ಈಗ ಅವರನ್ನು ವಿವಿಯಿಂದ ಹೊರಹಾಕಲಾಗಿದೆ.

ಅವಾಮಿ ಲೀಗ್ ಪಕ್ಷದ ಸಂಸದೆ ತಮನ್ನಾ ನುಸ್ರತ್, ಕನಿಷ್ಠ 13 ಪರೀಕ್ಷೆಗಳಲ್ಲಿ ತನ್ನಂತೆ ಹೊಂದಿರುವ ವ್ಯಕ್ತಿಗಳನ್ನು ನೇಮಿಸಿದ್ದರು ಎನ್ನುವ ಆರೋಪವಿದೆ. ಖಾಸಗಿ ಚಾನಲ್ ನಾಗೋರಿಕ್ ಟಿವಿ ಪರೀಕ್ಷಾ ಸಭಾಂಗಣವೊಂದಕ್ಕೆ ಪ್ರವೇಶಿಸಿ ನುಸ್ರತ್ ಪಾತ್ರದಲ್ಲಿ ಕಾಣಿಸಿಕೊಂಡ ಮಹಿಳೆಯೊಬ್ಬರನ್ನು ಸಂದರ್ಶಿಸಿದ ನಂತರ ಈ ಹಗರಣವು ವೈರಲ್ ಆಗಿದೆ.

ಕಳೆದ ವರ್ಷ ಸಂಸತ್ತಿಗೆ ಆಯ್ಕೆಯಾದ ನುಸ್ರತ್, ಬಾಂಗ್ಲಾದೇಶ ಓಪನ್ ಯೂನಿವರ್ಸಿಟಿಯಲ್ಲಿ (ಬಿಒಯು) ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಓದುತ್ತಿದ್ದರು.ಅವರು ಅಪರಾಧ ಮಾಡಿದ್ದರಿಂದ ನಾವು ಅವರನ್ನು ಹೊರಹಾಕಿದ್ದೇವೆ. ಈಗ ಅವರ ದಾಖಲಾತಿಯನ್ನು ರದ್ದುಗೊಳಿಸಿದ್ದೇವೆ. ಆಕೆಗೆ ಮತ್ತೆ ಇಲ್ಲಿ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ.ಕಾಲೇಜಿನ ಅಧಿಕಾರಿಗಳೊಬ್ಬರು ಹೇಳುವಂತೆ 'ಅವರು ಪ್ರಭಾವಿ ಕುಟುಂಬದಿಂದ ಬಂದಿರುವುದರಿಂದ ಯಾರೂ ಕೂಡ ಅವರ ವಿರುದ್ಧವಾಗಿ ಒಂದು ಮಾತು ಕೂಡ ಆಡಿರಲಿಲ್ಲ ಎಂದು ಹೇಳಿದರು.

Trending News