)
Brain-eating amoeba : ನಲ್ಲಿ ನೀರನ್ನು ಬಳಸಿದ್ದ 71 ವರ್ಷದ ಮಹಿಳೆಯೊಬ್ಬರು ಮಾರಕ ಮೆದುಳಿನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಟ್ಯಾಪ್ ನೀರಿನಿಂದ ಮುಖ ತೊಳೆದ ನಂತರ ಈ ಘಟನೆ ನಡೆದಿದೆ. ಅಲ್ಲದೆ, ಈ ನೀರಿನಲ್ಲಿ ಮಾರಕ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ.
ಈ ಘಟನೆ ಟೆಕ್ಸಾಸ್ನಲ್ಲಿ ನಡೆದಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ವರದಿಯ ಪ್ರಕಾರ, ಮಹಿಳೆ ಕುದಿಸದ ಟ್ಯಾಪ್ ನೀರಿನಿಂದ ಮೂಗನ್ನು ಸ್ವಚ್ಛಗೊಳಿಸಿದ ನಂತರ ಅವರು ಈ ಮಾರಕ ಸೋಂಕಿಗೆ ಒಳಗಾಗದರು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಉಕ್ರೇನ್ನಿಂದ ರಷ್ಯಾದ ಮೇಲೆ ಡ್ರೋನ್ ದಾಳಿ
ಸಿಡಿಸಿ ವರದಿಯ ಪ್ರಕಾರ, ಮಹಿಳೆ ಕ್ಯಾಂಪ್ಗ್ರೌಂಡ್ನಲ್ಲಿ ತನ್ನ ಮೂಗು ತೊಳೆಯುವ ಸಾಧನಕ್ಕೆ ನಲ್ಲಿ ನೀರನ್ನು ಬಳಸಿದ್ದಾರೆ. ಅದರಲ್ಲಿ ಮೆದುಳನ್ನು ತಿನ್ನುವ ಅಮೀಬಾ ನೇಗ್ಲೇರಿಯಾ ಫೌಲೇರಿ (Brain-eating amoeba) ಇತ್ತು ಎಂದು ವರದಿಯಾಗಿದೆ.. ಇದರಿಂದ ಆರೋಗ್ಯವಂತ ಮಹಿಳೆ ಅನಾರೋಗ್ಯಕ್ಕೆ ಗುರಿಯಾದರು. ವೈದ್ಯಕೀಯ ಚಿಕಿತ್ಸೆ ಪಡೆದಿದ್ದರೂ, ಲಕ್ಷಣಗಳು ಕಾಣಿಸಿಕೊಂಡ ಎಂಟು ದಿನಗಳ ನಂತರ ಸಾವನ್ನಪ್ಪಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಿಡಿಸಿಯಲ್ಲಿ ಪ್ರಯೋಗಾಲಯ ಪರೀಕ್ಷೆಯು ರೋಗಿಯ ಸೆರೆಬ್ರೊಸ್ಪೈನಲ್ ದ್ರವದಲ್ಲಿ ಎನ್. ಫೌಲೆರಿ ಇರುವಿಕೆಯನ್ನು ದೃಢಪಡಿಸಿದೆ.
ಘಟನೆಯ ನಂತರ, ಟೆಕ್ಸಾಸ್ ರಾಜ್ಯ ಆರೋಗ್ಯ ಸೇವೆಗಳ ಇಲಾಖೆ ನಡೆಸಿದ ತನಿಖೆಯಲ್ಲಿ, ರೋಗಿಯು ಅನಾರೋಗ್ಯಕ್ಕೆ ಒಳಗಾಗುವ ನಾಲ್ಕು ದಿನಗಳ ಮೊದಲು ಮೂಗು ತೊಳೆಯುವ ಸಾಧನ (nasal irrigation device) ಬಳಸಿ ತಮ್ಮ ಮೂಗನ್ನು ಸ್ವಚ್ಛಗೊಳಿಸಿದ್ದರು ಎಂದು ತಿಳಿದಿದೆ. ಆದರೆ, ಅಮೀಬಾದ ನಿಖರವಾದ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.
ನೇಗ್ಲೇರಿಯಾ ಫೌಲೇರಿ ಎಂದರೇನು? : ನೇಗ್ಲೇರಿಯಾ ಫೌಲೆರಿ ಒಂದು ಸ್ವತಂತ್ರವಾಗಿ ಬದುಕುವ ಅಮೀಬಾ. ಒಂದು ರೀತಿಯ ಏಕಕೋಶೀಯ ಜೀವಿ. ಇದು ಬೆಚ್ಚಗಿನ ಸಿಹಿನೀರಿನ ಸರೋವರಗಳು, ನದಿಗಳು ಮತ್ತು ಬಿಸಿನೀರಿನ ಬುಗ್ಗೆಗಳಲ್ಲಿ ಬೆಳೆಯುತ್ತದೆ. ಇದು ಮೆದುಳಿಗೆ ಸೋಂಕು ತಗುಲಿ ಮೆದುಳಿನ ಅಂಗಾಂಶವನ್ನು ನಾಶಮಾಡುವ ಕಾರಣ ಇದನ್ನು "ಮೆದುಳನ್ನು ತಿನ್ನುವ ಅಮೀಬಾ" (Brain eating amoeba) ಎಂದು ಕರೆಯಲಾಗುತ್ತದೆ. ಸೋಂಕುಗಳು ಅಪರೂಪವಾಗಿದ್ದರೂ, ಅವು ಹೆಚ್ಚಾಗಿ ಮಾರಕವಾಗಿರುತ್ತವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ