ಬ್ರೆಸಿಲಿಯಾ: ಕರೋನಾ ಸೋಂಕಿಗೆ ಒಳಗಾಗಿದ್ದರೂ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಅವರ ಚಿಂತನೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಹೆಚ್ಚುತ್ತಿರುವ ಕರೋನಾದ ಬೆದರಿಕೆಯನ್ನೂ ಕಡೆಗಣಿಸಿರುವ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಮತ್ತೊಮ್ಮೆ ವಿಚಿತ್ರ ಹೇಳಿಕೆ ನೀಡಿದ್ದು ಬ್ರೆಜಿಲ್‌ಗೆ ಲಸಿಕೆ ಅಗತ್ಯವಿಲ್ಲ ಎಂದಿದ್ದಾರೆ. ತಾವು ಲಸಿಕೆ ತೆಗೆದುಕೊಳ್ಳುವುದಿಲ್ಲ ಎಂದಿರುವ ಬ್ರೆಜಿಲ್ ಅಧ್ಯಕ್ಷ ಇದರೊಂದಿಗೆ ಲಸಿಕೆ ಕಾರ್ಯಕ್ರಮದ ಬಗ್ಗೆಯೂ ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ಒಂದು ಹೇಳಿಕೆಯಲ್ಲಿ ಜೈರ್ ಬೋಲ್ಸನಾರೊ (Jair Bolsonaro), ನಾನು ಇದನ್ನು(ಲಸಿಕೆ) ತೆಗೆದುಕೊಳ್ಳಲು ಹೋಗುವುದಿಲ್ಲ. ಇದು ನನ್ನ ಹಕ್ಕು ಎಂದಿದ್ದಾರೆ. ಜೈರ್ ಬೋಲ್ಸನಾರೊ ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 


ಬಿಕ್ಕಟ್ಟಿನ ಮಧ್ಯೆ ಪರಿಹಾರದ ಸುದ್ದಿ: ಕರೋನಾ ಲಸಿಕೆಯ ಸಂಪೂರ್ಣ ವೆಚ್ಚ ಭರಿಸಲಿದೆಯಂತೆ ಮೋದಿ ಸರ್ಕಾರ!


ಮಾಸ್ಕ್ ಉಪಯುಕ್ತತೆ ಬಗ್ಗೆಯೂ ಪ್ರಶ್ನಿಸಿರುವ ಬೋಲ್ಸನಾರೊ ಕರೋನಾವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಮಾಸ್ಕ್ ಪರಿಣಾಮಕಾರಿಯಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಆದಾಗ್ಯೂ ಕರೋನಾದೊಂದಿಗಿನ ಯುದ್ಧದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಸೇರಿದಂತೆ ಎಲ್ಲಾ ಆರೋಗ್ಯ ಸಂಸ್ಥೆಗಳು ಮಾಸ್ಕ್ ಅನ್ನು ಪರಿಣಾಮಕಾರಿ ಅಸ್ತ್ರವೆಂದು ಕರೆಯುತ್ತಿರುವುದು ವಿಭಿನ್ನವಾಗಿದೆ ಎಂದಿದ್ದಾರೆ.


ಈ ಮೊದಲೂ ಕರೋನಾ ಲಸಿಕೆಯನ್ನು ಅಪಹಾಸ್ಯ ಮಾಡಿದ್ದ ಬ್ರೆಜಿಲ್ ಅಧ್ಯಕ್ಷ:
ಕರೋನಾ ಲಸಿಕೆಗಾಗಿ (Corona Vaccine) ಇಡೀ ಜಗತ್ತು ಕಾಯುತ್ತಿರುವಾಗ ಬ್ರೆಜಿಲ್ ಅಧ್ಯಕ್ಷರ ಹೇಳಿಕೆಯು ಕರೋನಾವೈರಸ್ ಬಗೆಗಿನ ಅವರ ಉದಾಸೀನತೆಯನ್ನು ತೋರಿಸುತ್ತದೆ. ಲಸಿಕೆ ಲಭ್ಯವಾದರೂ ಬ್ರೆಜಿಲ್ ಜನರಿಗೆ ಲಸಿಕೆ ಅಗತ್ಯವಿಲ್ಲ ಎಂದು ಬೋಲ್ಸನಾರೊ ಈ ಹಿಂದೆ ಹೇಳಿದ್ದಾರೆ. ಇದು ಮಾತ್ರವಲ್ಲ, ಸ್ವಲ್ಪ ಸಮಯದ ಹಿಂದೆ ಟ್ವಿಟ್ಟರ್ ನಲ್ಲಿ ಲಸಿಕೆ ಪ್ರಕ್ರಿಯೆಯನ್ನು ಅವರು ಗೇಲಿ ಮಾಡಿದ್ದರು ಮತ್ತು ಲಸಿಕೆ ತನ್ನ ನಾಯಿಗೆ ಮಾತ್ರ ಬೇಕಾಗುತ್ತದೆ ಎಂದು ಹೇಳಿದರು.


Good News:'ಈ ದಿನ ಅಮೇರಿಕಾದಲ್ಲಿ Corona Vaccineನ ಮೊದಲ ಲಸಿಕೆ ನೀಡಲಾಗುವುದು'


ಯಾವುದೇ ಬದಲಾವಣೆ ಇಲ್ಲ:
ಜುಲೈನಲ್ಲಿ ಜೈರ್ ಬೋಲ್ಸನಾರೊ ಸ್ವತಃ ಕರೋನಾ ಸೋಂಕಿಗೆ ಒಳಗಾಗಿದ್ದಾರೆ, ಆದರೆ ಇದರ ಹೊರತಾಗಿಯೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಕರೋನಾವೈರಸ್‌  (CoronaVirus)ನಿಂದ ಸಂಭವಿಸಿರುವ ಸಾವುಗಳ ಅಂಕಿ-ಅಂಶಗಳನ್ನು ನೋಡುವುದಾದರೆ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ಆದರೆ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವ ಬದಲು, ಅಧ್ಯಕ್ಷರು ಸಾಂಕ್ರಾಮಿಕ ರೋಗವನ್ನು ಗೇಲಿ ಮಾಡುತ್ತಿದ್ದಾರೆ ಮತ್ತು ಸ್ವತಃ ಕರೋನಾ ಸೋಂಕಿಗೆ ತುತ್ತಾಗಿದ್ದರೂ ಅವರ ಮನೋಭಾವದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.  ಕರೋನಾದ ಆರಂಭದಲ್ಲಿ ಲಾಕ್‌ಡೌನ್, ಸಾಮಾಜಿಕ ದೂರ ಮತ್ತು ಮಾಸ್ಕ್ ಧರಿಸುವಂತಹ ಕ್ರಮಗಳನ್ನು ಬೋಲ್ಸನಾರೊ ತೀವ್ರವಾಗಿ ವಿರೋಧಿಸಿದರು, ಇದು ಬ್ರೆಜಿಲ್‌ನಲ್ಲಿ ಹಾನಿಯನ್ನುಂಟುಮಾಡಿತು.