1919 ರ ಜಲಿಯನ್ ವಾಲಾಬಾಗ್ ಘಟನೆಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್ ಪ್ರಧಾನಿ ಥೆರಸಾ ಮೇ

1919 ರಲ್ಲಿ ಭಾರತದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಈಗ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.ಆದರೆ ಅವರು ಈ ಘಟನೆ ವಿಚಾರವಾಗಿ ಸಂಪೂರ್ಣ ಕ್ಷಮೆ ಕೊರಲಿಲ್ಲ ಎನ್ನಲಾಗಿದೆ.

Last Updated : Apr 10, 2019, 06:52 PM IST
1919 ರ ಜಲಿಯನ್ ವಾಲಾಬಾಗ್ ಘಟನೆಗೆ ವಿಷಾದ ವ್ಯಕ್ತಪಡಿಸಿದ ಬ್ರಿಟನ್ ಪ್ರಧಾನಿ ಥೆರಸಾ ಮೇ  title=
File Image

ನವದೆಹಲಿ: 1919 ರಲ್ಲಿ ಭಾರತದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಈಗ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.ಆದರೆ ಅವರು ಈ ಘಟನೆ ವಿಚಾರವಾಗಿ ಸಂಪೂರ್ಣ ಕ್ಷಮೆ ಕೊರಲಿಲ್ಲ ಎನ್ನಲಾಗಿದೆ.

ಈಗ ಬ್ರಿಟನ್ ಪ್ರಧಾನಿ ತೆರೇಸಾ ಮೇ ಅವರ ಹೇಳಿಕೆ ಪ್ರಮುಖವಾಗಿ ಇದೆ ಏಪ್ರಿಲ್ 13ಕ್ಕೆ  ಜಲಿಯನ್ ವಾಲಾಬಾಗ್  ದುರಂತ ನಡೆದು ನೂರು ವರ್ಷ ತುಂಬುತ್ತಿರುವ ಹಿನ್ನಲೆಯಲ್ಲಿ ಬಂದಿದೆ. ಆದರೆ ಪ್ರಮುಖ ವಿರೋಧ ಪಕ್ಷವಾಗಿರುವ ಲೇಬರ್ ಪಕ್ಷದ ನಾಯಕನಾಗಿರುವ  ಜೆರೆಮಿ ಕಾರ್ಬೋನ್ ಅವರು ಸಂಪೂರ್ಣ ಕ್ಷಮೆಕೋರಲು ಪ್ರಧಾನಿಗೆ ಆಗ್ರಹಿಸಿದರು.

ಸಂಸತ್ತಿನಲ್ಲಿ ಪ್ರಧಾನಿ ತೆರೇಸಾ ಮೇ ಈ ಘಟನೆ ಕುರಿತಾಗಿ ಮಾತನಾಡುತ್ತಾ "ಈ ಹಿಂದೆ ಏನಾಯಿತು ಅದರಿಂದ ಆದ ಹಾನಿಗೆ ನಾವು ವಿಷಾದ ವ್ಯಕ್ತಪಡಿಸುತ್ತೇವೆ" ಎಂದರು. ಏಪ್ರಿಲ್ 13, 1919 ಜಲಿಯನ್ವಾಲಾ ಬಾಗ್ ಹತ್ಯಾಕಾಂಡದಲ್ಲಿ ಬ್ರಿಟಿಷ್ ಸೇನಾಪಡೆಗಳು ಸಾವಿರಾರು ನಿಶ್ಶಸ್ತ್ರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಬಲಿ ತೆಗೆದುಕೊಂಡಿದ್ದರು.ಈ ಘಟನೆ ಇಂದಿಗೂ ಕೂಡ ಭಾರತದ ಸ್ವಾತಂತ್ರ್ಯಪೂರ್ವ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದುಕೊಂಡಿದೆ. 
 
ವಸಾಹತುಶಾಹಿ-ಯುಗದ ದಾಖಲೆಗಳು ಹೇಳುವಂತೆ ಈ ಘಟನೆಯಲ್ಲಿ ಅಮೃತಸರದಲ್ಲಿ ಸುಮಾರು 400 ಜನರು ಸಾವನ್ನಪ್ಪಿದರು ಎನ್ನಲಾಗಿದೆ. ಆದರೆ ಭಾರತೀಯ ಅಂಕಿ-ಅಂಶಗಳು ಹೇಳುವಂತೆ ಈ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಿರವೆಂದರೆ ಸಾವಿರ ಜನರು ಎಂದು ಹೇಳಲಾಗುತ್ತದೆ. ಈ ಹಿಂದೆ  ಬ್ರಿಟಿಷ್ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮೆರಾನ್  2013 ರಲ್ಲಿ ಭಾರತಕ್ಕೆ  ಭೇಟಿ ನೀಡಿದ ಸಂದರ್ಭದಲ್ಲಿ  ಇದನ್ನು ತೀವ್ರ ಅವಮಾನಕರ ಎಂದು ಹೇಳಿದ್ದರೆ ಹೊರತು ಕ್ಷಮಾಪಣೆ ಕೋರಿರಲಿಲ್ಲ. 

Trending News