'ಕಾಶ್ಮೀರ ಸಮಸ್ಯೆ ಕುರಿತು ಶೀಘ್ರವೇ ಸಭೆ ಕರೆಯಿರಿ'; ವಿಶ್ವಸಂಸ್ಥೆ ಎದುರು ಪಾಕಿಸ್ತಾನದ ಬೇಡಿಕೆ

ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಯುಎನ್ ಭದ್ರತಾ ಮಂಡಳಿಗೆ ಪತ್ರ ಬರೆದು ಕಾಶ್ಮೀರದ ವಿಷಯದ ಬಗ್ಗೆ ಕೂಡಲೇ ಸಭೆ ನಡೆಸಬೇಕು ಎಂದು ಮನವಿ ಮಾಡಿದೆ.

Last Updated : Aug 14, 2019, 02:32 PM IST
'ಕಾಶ್ಮೀರ ಸಮಸ್ಯೆ ಕುರಿತು ಶೀಘ್ರವೇ ಸಭೆ ಕರೆಯಿರಿ'; ವಿಶ್ವಸಂಸ್ಥೆ ಎದುರು ಪಾಕಿಸ್ತಾನದ ಬೇಡಿಕೆ title=
File Image

ಇಸ್ಲಾಮಾಬಾದ್: ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿರುವ ಭಾರತ ಸರ್ಕಾರದ ವಿರುದ್ಧ ಕಿಡಿಕಾರಿರುವ ಪಾಕಿಸ್ತಾನ, ಈ ವಿಷಯ ಕುರಿತು ಸಾಧ್ಯವಾದಷ್ಟು ಬೇಗ ವಿಶ್ವಸಂಸ್ಥೆ ಮಧ್ಯಪ್ರವೇಶಿಸಲು ಬಯಸಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಯುಎನ್ ಭದ್ರತಾ ಮಂಡಳಿಗೆ ಪತ್ರ ಬರೆದು ಕಾಶ್ಮೀರದ ವಿಷಯದ ಬಗ್ಗೆ ಕೂಡಲೇ ಸಭೆ ನಡೆಸಬೇಕು ಎಂದು ಮನವಿ ಮಾಡಿದೆ.

ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಪತ್ರದ ಪ್ರಕಾರ, ಕಾಶ್ಮೀರದ ವಿಷಯದಲ್ಲಿ ಭಾರತ ಕೈಗೊಂಡ ನಿರ್ಧಾರದ ಬಗ್ಗೆ ತಕ್ಷಣದ ಸಭೆ ನಡೆಸುವಂತೆ ಪಾಕಿಸ್ತಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಕೇಳಿದೆ.

'ಭಾರತ-ಪಾಕಿಸ್ತಾನ ಪ್ರಶ್ನೆ' ಎಂಬ ಕಾರ್ಯಸೂಚಿಯಡಿ ಸಭೆಗೆ ಹಾಜರಾಗುವಂತೆ ಒತ್ತಾಯಿಸುವುದಾಗಿ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಯುಎನ್‌ಎಸ್‌ಸಿ ಅಧ್ಯಕ್ಷ ಜೊವಾನ್ನಾ ರೊಂಕಾ ಅವರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ ಎನ್ನಲಾಗಿದೆ.
 

Trending News