38 ಜನರಿದ್ದ ಮಿಲಿಟರಿ ವಿಮಾನ ಕಣ್ಮರೆ

ವಿಮಾನದೊಂದಿಗಿನ ಸಂವಹನ ಕಳೆದುಹೋದ ನಂತರ ಎಚ್ಚರಿಕೆಯ ಸ್ಥಿತಿಯನ್ನು ಘೋಷಿಸಲಾಯಿತು. ವಿಮಾನ ಪತ್ತೆ ಹಾಗೂ ವಿಮಾನದಲ್ಲಿದ್ದವರ ರಕ್ಷಣೆಗಾಗಿ ಶೋಧ ಮತ್ತು ರಕ್ಷಣಾ ತಂಡವನ್ನು ಸಕ್ರಿಯಗೊಳಿಸಲಾಗಿದೆ ಎಂದು ಚಿಲಿ ದೇಶದ ಸೇನಾಪಡೆ ತಿಳಿಸಿದೆ.

Last Updated : Dec 10, 2019, 12:02 PM IST
38 ಜನರಿದ್ದ ಮಿಲಿಟರಿ ವಿಮಾನ ಕಣ್ಮರೆ title=
Pic courtesy: Twitter

ಸ್ಯಾಂಟಿಯಾಗೋ: ಚಿಲಿ ದೇಶದ ವಾಯುಪಡೆಗೆ ಸೇರಿದ ವಿಮಾನವೊಂದು ಸೋಮವಾರ ಅಂಟಾರ್ಟಿಕಾ  ಮಾರ್ಗದಲ್ಲಿ ಕಣ್ಮರೆಯಾಗಿದೆ ಎಂದು ವರದಿಯಾಗಿದೆ.

ಸಿ-130 ಹರ್ಕ್ಯುಲಸ್ ವಿಮಾನವು ದಕ್ಷಿಣ ನಗರ ಪಂಟಾ ಅರೆನಾಸ್‌ನಿಂದ ಸಂಜೆ 4:55 ಕ್ಕೆ (1955 ಜಿಎಂಟಿ) ಹೊರಟಿತು. ಕೆಲ ಸಮಯದ ಬಳಿಕ ಸುಮಾರು ಸಂಜೆ 6:00 ಗಂಟೆಯ ನಂತರ ನಿರ್ವಾಹಕರು ಅದರೊಂದಿಗೆ ಸಂಪರ್ಕವನ್ನು ಕಳೆದುಕೊಂಡರು. "ಸಿ 130 ಹರ್ಕ್ಯುಲಸ್ ವಿಮಾನದಲ್ಲಿ 38 ಜನರಿದ್ದು, ಅವರಲ್ಲಿ 17 ಮಂದಿ ವಿಮಾನದ ಸಿಬ್ಬಂದಿ ಮತ್ತು 21 ಪ್ರಯಾಣಿಕರು" ಎಂದು ವಾಯುಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾನದೊಂದಿಗಿನ ಸಂವಹನ ಕಳೆದುಹೋದ ನಂತರ ಎಚ್ಚರಿಕೆಯ ಸ್ಥಿತಿಯನ್ನು ಘೋಷಿಸಲಾಯಿತು. ವಿಮಾನ ಪತ್ತೆ ಹಾಗೂ ವಿಮಾನದಲ್ಲಿದ್ದವರ ರಕ್ಷಣೆಗಾಗಿ ಶೋಧ ಮತ್ತು ರಕ್ಷಣಾ ತಂಡವನ್ನು ಸಕ್ರಿಯಗೊಳಿಸಲಾಗಿದೆ ಎಂದು ಚಿಲಿ ದೇಶದ ಸೇನಾಪಡೆ ತಿಳಿಸಿದೆ. ಅಂಟಾರ್ಕ್ಟಿಕ್ ನೆಲೆಯಲ್ಲಿ ಚಿಲಿಯ ಸೌಲಭ್ಯಗಳ ನಿರ್ವಹಣೆಗಾಗಿ ವಿಮಾನವು ವ್ಯವಸ್ಥಾಪಕ ಬೆಂಬಲ ಕಾರ್ಯಗಳನ್ನು ನಿರ್ವಹಿಸಲು ಪ್ರಯಾಣಿಸುತ್ತಿತ್ತು ಎಂದು ಹೇಳಲಾಗಿದೆ.

Trending News