ವಾಷಿಂಗ್ಟನ್: ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಅಧ್ಯಯನವು ಕರೋನವೈರಸ್ ಗಾಳಿಯಲ್ಲಿ ಹರಡಬಹುದು ಎಂಬ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದರ ನಂತರ ಯಾವ ಮಾಸ್ಕ್ ಕರೋನಾದಿಂದ ನಮ್ಮನ್ನು ರಕ್ಷಿಸಬಹುದು ಎಂಬ ಪ್ರಶ್ನೆಗಳು ಮತ್ತೆ ಉದ್ಬವವಾಗಿವೆ. ಅಂದರೆ ಕರೋನಾವೈರಸ್‌ ತಡೆಗಟ್ಟುವಲ್ಲಿ ಬಟ್ಟೆ ಮಾಸ್ಕ್ ಪರಿಣಾಮಕಾರಿಯಾಗಿದೆಯೇ ಅಥವಾ N95 ನಂತಹ ಮಾಸ್ಕ್ ಗಳನ್ನು ಬಳಸಬೇಕೇ? ಎಂಬ ಬಗ್ಗೆ ಹಲವರಲ್ಲಿ ಗೊಂದಲ ಮೂಡಿದೆ. ಈ ಸಂದರ್ಭದಲ್ಲಿ ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್‌ನ ಡಾ. ಫಹೀಮ್ ಯೂನಸ್ (Dr Faheem Younus) ಈ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಿದ್ದು ಕರೋನಾದ ಎರಡನೇ ತರಂಗವನ್ನು ತಪ್ಪಿಸಲು ಅವರು N95 ಅಥವಾ KN95 ಮಾಸ್ಕ್ಗಳನ್ನು ಧರಿಸಲು ಶಿಫಾರಸು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಈ ರೀತಿ ಮಾಸ್ಕ್ ಬಳಸಿ : 
ನಮ್ಮ ಪಾಲುದಾರ ವೆಬ್‌ಸೈಟ್ ಡಿಎನ್‌ಎಯಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಡಾ. ಫಹೀಮ್ ಯೂನಸ್ ಅವರು ಎನ್ 95 (N 95) ಅಥವಾ ಕೆಎನ್ 95 ಮಾಸ್ಕ್ ಬಳಸುವುದು ವಾಯುಗಾಮಿ ವೈರಸ್ ಅನ್ನು ಎದುರಿಸಲು ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ. ಜನರಿಗೆ ಎರಡು ಎನ್ 95 ಅಥವಾ ಕೆಎನ್ 95 ಮಾಸ್ಕ್ ಗಳನ್ನು ಖರೀದಿಸಲು ಮತ್ತು ದಿನಕ್ಕೆ ಒಂದು ಮಾಸ್ಕ್ ಬಳಸಲು ಅವರು ಸಲಹೆ ನೀಡಿದ್ದಾರೆ. ಅದರ ನಂತರ ಅದನ್ನು ಕಾಗದದ ಚೀಲದಲ್ಲಿ ಇರಿಸಿ ಮತ್ತು ಇನ್ನೊಂದನ್ನು ಬಳಸಿ. ಪ್ರತಿ 24 ಗಂಟೆಗಳಿಗೊಮ್ಮೆ ಅಂತಹ ಮಾಸ್ಕ್ ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಿ. ಮಾಸ್ಕ್ ಚೆನ್ನಾಗಿದ್ದರೆ  ಅದನ್ನು ಮತ್ತೆ ಹಲವಾರು ವಾರಗಳವರೆಗೆ ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.


ಇದನ್ನೂ ಓದಿ - Coronavirus Spreading Through Air: ಗಾಳಿಯ ಮೂಲಕ ಹರಡುತ್ತಿದೆಯೇ ಕರೋನಾ, ಅಧ್ಯಯನದಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ


ಮಾಸ್ಕ್ ಇಲ್ಲದೆಯೇ ಉದ್ಯಾನವನ ಮತ್ತು ಬೀಚ್‌ಗೆ ಹೋಗುವುದು ಸುರಕ್ಷಿತವೇ? 
ಮಾಸ್ಕ್ ಧರಿಸದೆಯೇ ಉದ್ಯಾನವನಗಳು ಮತ್ತು ಕಡಲತೀರಗಳಿಗೆ ಹೋಗುವುದು ಸುರಕ್ಷಿತವೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಡಾ.ಫಾಹಿಮ್ ಯೂನುಸ್, ಇಬ್ಬರು ವ್ಯಕ್ತಿಗಳ ನಡುವೆ 6 ಅಡಿ ಅಂತರವಿದ್ದರೆ, ಮಾಸ್ಕ್ ಇಲ್ಲದೆಯೇ ಅಂತಹ ಸ್ಥಳಗಳಲ್ಲಿ ನಡೆಯುವುದು ಸುರಕ್ಷಿತ ಎಂದು ಹೇಳಿದ್ದಾರೆ. ಗಾಳಿಯಲ್ಲಿ ಹರಡುವ ವೈರಸ್ (Coronavirus) ವಿಷಯಕ್ಕೆ ಬಂದಾಗ, ಬಟ್ಟೆಯಿಂದ ಮಾಡಿದ ಮಾಸ್ಕ್ ಗಳಿಗಿಂತ ಎನ್ 95 (N95) ಮಾಸ್ಕ್ ಗಳು ಖಂಡಿತವಾಗಿಯೂ ಉತ್ತಮವಾಗಿವೆ ಎಂದು ಅವರು ಹೇಳಿದರು.  N95 ಮತ್ತು ಸರ್ಜರಿ ಮಾಸ್ಕ್ ಗಳು ವೈಯಕ್ತಿಕ ರಕ್ಷಣಾ ಸಾಧನಗಳ ಉದಾಹರಣೆಗಳಾಗಿದ್ದು ಅದನ್ನು ಧರಿಸಿದವವರಿಗೆ ಗಾಳಿಯಲ್ಲಿರುವ ಸೂಕ್ಷ್ಮ ಕಣಗಳಿಂದ ರಕ್ಷಣೆ ಸಿಗುತ್ತದೆ. ಇದು ಗಾಳಿಯಲ್ಲಿರುವ 95 ಪ್ರತಿಶತದಷ್ಟು ಕಣಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ. ಹಾಗಾಗಿಯೇ ಇದಕ್ಕೆ  N95 ಎಂದು ಹೆಸರಿಸಲಾಗಿದೆ ಎಂದಿದ್ದಾರೆ.


Corona Strain: ಕಳೆದ 24 ಗಂಟೆಗಳಲ್ಲಿ 2.75 ಲಕ್ಷ ಹೊಸ ಪ್ರಕರಣ, ಕಳವಳ ಹೆಚ್ಚಿಸುವ ಸಾವಿನ ಅಂಕಿ-ಅಂಶ


N95 ಮಾಸ್ಕ್ ಗಳನ್ನು ತೊಳೆಯಬಹುದೇ? 
N95 ಮಾಸ್ಕ್ ಗಳನ್ನು ಮರುಬಳಕೆ ಮಾಡಬಹುದೇ ಎಂಬ ಸ್ಥಿತಿ ಸ್ಪಷ್ಟವಾಗಿಲ್ಲ. ಡಾ. ಫಹೀಮ್ ಯೂನಿಸ್ ಅವರ ಪ್ರಕಾರ, ಅದನ್ನು ಮತ್ತೆ ಬಳಸಬಹುದು. ಅದೇ ಸಮಯದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಈ ಹಿಂದೆ ಎನ್ 95 ಮಾಸ್ಕ್ ಅನ್ನು ಒಮ್ಮೆ ಮಾತ್ರ ಬಳಸಬಹುದು ಎಂದು ಹೇಳಿದೆ.  ಮಾರುಕಟ್ಟೆಯಲ್ಲಿ N95 ಮಾಸ್ಕ್ ಗಳು  ಲಭ್ಯವಿದ್ದು, ಅವು ಕೊಳೆಯಾದಾಗ ಅವುಗಳನ್ನು ತೊಳೆಯದು ಅದನ್ನು ಮರುಬಳಕೆ ಮಾಡಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.