ಮಾರುಕಟ್ಟೆಗೆ ಬೇಗ ಬರಲ್ಲ Coronaಗೆ ರಾಮಬಾಣ ಔಷಧಿ, ಭಾರತಕ್ಕೆ ಎಚ್ಚರಿಕೆ ನೀಡಿದ WHO

ಬ್ರೆಜಿಲ್ ಮತ್ತು ಭಾರತದಲ್ಲಿ ಹೆಚ್ಚಾಗುತ್ತಿರುವ ಕರೋನಾ ಪ್ರಕೋಪದ ಬಗ್ಗೆ ಡಬ್ಲ್ಯುಎಚ್‌ಒ ಕಳವಳ ವ್ಯಕ್ತಪಡಿಸಿದೆ. ಕೋವಿಡ್ -19 ಗೆ ಖಾತರಿಯೊಂದಿಗೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಸಾನೆ ಹೇಳಿದ್ದಾರೆ.

Last Updated : Aug 4, 2020, 11:12 AM IST
ಮಾರುಕಟ್ಟೆಗೆ ಬೇಗ ಬರಲ್ಲ Coronaಗೆ ರಾಮಬಾಣ ಔಷಧಿ, ಭಾರತಕ್ಕೆ ಎಚ್ಚರಿಕೆ ನೀಡಿದ WHO title=

ಜಿನೇವಾ: ಕೊರೊನಾ ವೈರಸ್ ಚಿಕಿತ್ಸೆಗಾಗಿ ಪ್ರಬಲ ವ್ಯಾಕ್ಸಿನ್ ಅಭಿವೃದ್ಧಿಯ ಕುರಿತು ವಿಶ್ವಾದ್ಯಂತ ಹಲವು ದೇಶಗಳು ಹಕ್ಕು ಮಂಡಿಸುತ್ತಿರುವ ನಡುವೆಯೇ ಕೊವಿಡ್-19ಗೆ ಪರಿಣಾಮಕಾರಿ ಚಿಕಿತ್ಸೆಯ ಇನ್ನೂ ದೂರದ ದಾರಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಪರಿಸ್ಥಿತಿ ಸಾಮಾನ್ಯವಾಗಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗಲಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೇಸ್ ಹೇಳಿದ್ದಾರೆ.

Covid-19 ವ್ಯಾಕ್ಸಿನ್ ಕುರಿತು WHO ಗಂಭೀರ ಹೇಳಿಕೆ
ಕರೋನಾ ವೈರಸ್ ವಿರುದ್ಧದ ಕೆಲವು ಲಸಿಕೆಗಳ ಫಲಿತಾಂಶಗಳು ನಿರೀಕ್ಷೆಯಂತೆ ಹೊರಹೊಮ್ಮಿವೆ. ಆದರೆ ಕೋವಿಡ್ -19 ಪರಿಣಾಮಕಾರಿ ಚಿಕಿತ್ಸೆಯ ತನ್ನ ಅಂತಿಮ ಘಟ್ಟ ತಲುಪದೇ ಇರಬಹುದುದು ಎಂದು ಅವರು ಹೇಳಿದ್ದಾರೆ. ಜಗತ್ತು ತನ್ನ ಸಾಮಾನ್ಯ ಸ್ಥಿತಿಯತ್ತ ಮರಳಲು ಇನ್ನೂ ಸಾಕಷ್ಟು ಕಾಲಾವಕಾಶ ಬೇಕಾಗಲಿದೆ. ಈ ಕುರಿತು ವಿಶ್ವದಲ್ಲಿನ ಎಲ್ಲ ದೇಶಗಳ ಸರ್ಕಾರಗಳು ಮತ್ತಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತ ಇದೇ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೇಸ್ ಮತ್ತು ತುರ್ತು ಮುಖ್ಯಸ್ಥ ಮೈಕ್ ರಯಾನ್ ಒತ್ತಿ ಹೇಳಿದ್ದಾರೆ. ಫೇಸ್ ಮಾಸ್ಕ ಧರಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು, ಸಾಮಾಜಿಕ ಅಂತರ ಕಾಯುವುದು, ಕೈ ತೊಳೆಯುವುದು ಮತ್ತು ಅಗತ್ಯವಿದ್ದಾಗ ಪರೀಕ್ಷೆಗಳನ್ನು ನಡೆಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಜಿನೀವಾದ ಡಬ್ಲ್ಯುಎಚ್‌ಒ ಕೇಂದ್ರ ಕಚೇರಿಯಿಂದ ವರ್ಚುವಲ್ ನ್ಯೂಸ್ ಬ್ರೀಫಿಂಗ್ ಮೂಲಕ ಮಾತನಾಡಿರುವ ಅವರು, "ಈ ಸಂದೇಶವು ಎಲ್ಲಾ ಜನರಿಗೆ ಮತ್ತು ಸರ್ಕಾರಗಳಿಗೆ, ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಿ, ಪ್ರಸ್ತುತ ಲಸಿಕೆಗಳು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿವೆ ಹಾಗೂ ಅವು ಜನರನ್ನು ಸೋಂಕಿನಿಂದ ರಕ್ಷಿಸಲು ಸಿದ್ಧವಾಗುತ್ತಿವೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಆದರೆ ಇದರ ಹೊರತಾಗಿಯೂ,ಪ್ರಸ್ತುತ ಕರೋನಾಗೆ ಯಾವುದೇ ರಾಮಬಾಣ ಚಿಕಿತ್ಸೆ ಇಲ್ಲ ಮತ್ತು ಬಹುಶಃ ಬರುವ ಸಾಧ್ಯತೆ ಕೂಡ ಇಲ್ಲ" ಎಂದಿದ್ದಾರೆ, ಪರಿಸ್ಥಿತಿ ಸಾಮಾನ್ಯವಾಗಲು ಹೆಚ್ಚು ಸಮಯಾವಕಾಶ ಬೇಕಾಗಲಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ಬ್ರೆಜಿಲ್ ಮತ್ತು ಭಾರತದಂತಹ ದೇಶಗಳಲ್ಲಿ ಹೆಚ್ಚುತ್ತಿರುವ ಸೋಂಕಿನ ಪ್ರಸಾರದ ಕುರಿತು ಆತಂಕ ವ್ಯಕ್ತಪಡಿಸಿರುವ ರಯಾನ್, ಈ ದೇಶಗಳು ದೊಡ್ಡ ಯುದ್ಧಕ್ಕಾಗಿಯೇ ಸಿದ್ಧತೆ ನಡೆಸಬೇಕಾಗಿದೆ ಎಂದಿದ್ದಾರೆ. ಇದರಿಂದ ಹೊರಬರುವ ಕಾಲ ಇನ್ನೂ ದೂರವಿದೆ ಮತ್ತು ಬದ್ಧತೆಯ ಅಗತ್ಯವಿದೆ. ಚೀನಾದ ಮತ್ತು ಅಂತರರಾಷ್ಟ್ರೀಯ ತಜ್ಞರ ದೊಡ್ಡ ತಂಡವು ವುಹಾನ್‌ಗೆ ಹೋಗಿ ಅಲ್ಲಿ ವೈರಸ್‌ನ ಉಗಮದ ಬಗ್ಗೆ ಸಂಶೋಧನೆ ಪೂರ್ಣಗೊಳಿಸಿವೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಜುಲೈ 10 ರಂದು ಚೀನಾಕ್ಕೆ ಭೇಟಿ ನೀಡಿದ್ದ ಡಬ್ಲ್ಯುಎಚ್‌ಒ ತಂಡ, ತನ್ನ ಮಿಷನ್ ಪೂರ್ಣಗೊಳಿಸಿದೆ. ಇದು ಕರೋನಾ ವೈರಸ್ ಮನುಷ್ಯರಿಗೆ ಹರಡಿದ್ದಾದರೂ ಹೇಗೆ ಎಂಬ ಬಗ್ಗೆ ಸಂಶೋಧನೆಯನ್ನು ಮುಂದುವರೆಸಲು ಹೆಚ್ಚಿನ ಸಹಾಯ ಮಾಡಲಿದೆ.  ಸಮಯ ಮತ್ತು ತಂಡದ ಬಗ್ಗೆ ಚಿತ್ರ ಇನ್ನೂ ಸ್ಪಷ್ಟವಾಗಿಲ್ಲ. ಕೋವಿಡ್ -19 ಪೀಡಿತ ಮಹಿಳೆಯರ ಸ್ತನ್ಯಪಾನ ಮಾಡಸಬೇಕೆಂದು ಟೆಡ್ರೊಸ್ ಮನವಿ ಮಾಡಿದ್ದಾರೆ. ಇದು ಸೋಂಕಿನ ಅಪಾಯ ಕಡಿಮೆಯಾಗಲು ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.

Trending News