Coronavirus ಸಂಕಷ್ಟದ ಕುರಿತು ರಷ್ಯಾಗೆ ಮೊದಲೇ ಮಾಹಿತಿ ಇತ್ತೇ? ಇಲ್ಲಿದೆ ಬೆಚ್ಚಿಬೀಳಿಸುವ ವರದಿ

Coronavirus ಸೋಂಕು ಹರಡುವಿಕೆಯ ಕುರಿತು ರಷ್ಯಾದಿಂದ ಬೆಚ್ಚಿಬೀಳಿಸುವ ವರದಿಯೊಂದು ಹೊರಬಂದಿದೆ. ಈ ವರದಿಯಿಂದ ರಷ್ಯಾಗೆ ಕೊರೊನಾ ಸಂಕಷ್ಟದ ಕುರಿತು ಮೊದಲೇ ಮಾಹಿತಿ ಇತ್ತೇ ಎಂಬ ಪ್ರಶ್ನೆಗಳು ಇದೀಗ ಏಳಲಾರಂಭಿಸಿವೆ.

Updated: Apr 2, 2020 , 09:23 PM IST
Coronavirus ಸಂಕಷ್ಟದ ಕುರಿತು ರಷ್ಯಾಗೆ ಮೊದಲೇ ಮಾಹಿತಿ ಇತ್ತೇ? ಇಲ್ಲಿದೆ ಬೆಚ್ಚಿಬೀಳಿಸುವ ವರದಿ

ನವದೆಹಲಿ: ಕೊರೊನಾವೈರಸ್ ಗೆ ಸಂಬಂಧಿಸಿದಂತೆ ಇದೀಗ ಹಲವು ರೀತಿಯ ಮಾತುಗಳು ಕೇಳಿಬರಲಾರಂಭಿಸಿವೆ. ಒಂದೆಡೆ ಕೆಲ ದೇಶಗಳು ಇದು ಚೀನಾದ ಜೈವಿಕ ಅಸ್ತ್ರ ಎಂದು ಹೇಳುತ್ತಿದ್ದರೆ ಇನ್ನೊಂದೆಡೆ ಕೆಲವರ ದೃಷ್ಟಿಯಲ್ಲಿ ಇದು ಅಮೇರಿಕದ ಸಂಚು ಎಂದು ಹೇಳಲಾರಂಭಿಸಿದ್ದಾರೆ. ಈ ನಡುವೆ ರಷ್ಯಾದಿಂದ ಬೆಚ್ಚಿಬೀಳಿಸುವ ಮಾಹಿತಿಯೊಂದು ಬಹಿರಂಗಗೊಂಡಿದ್ದು, ಇದರಿಂದ ಕೊರೊನಾ ವೈರಸ್ ಸಂಕಷ್ಟದ ಕುರಿತು ರಷ್ಯಾಗೆ ಮೊದಲೇ ತಿಳಿದಿತ್ತೆ ಎಂಬ ಪ್ರಶ್ನೆಗಳು ಏಳಲಾರಂಭಿಸಿವೆ. ಈ ಕುರಿತು ಪ್ರಕಟಗೊಂಡಿರುವ ಸೆಟೆಲೈಟ್ ಚಿತ್ರೊಂದರ ಪ್ರಕಾರ ರಷ್ಯಾ ತುಂಬಾ ದಿನಗಳ ಹಿಂದೆಯೇ ಮಾಸ್ಕೋ ಹೊರವಲಯದಲ್ಲಿ  92 ಮಿಲಿಯನ್ ಪೌಂಡ್ ಹಣ ವಿನಿಯೋಗಿಸಿ ಆಸ್ಪತ್ರೆಯೊಂದನ್ನು ನಿರ್ಮಿಸಲು ಆರಂಭಿಸಿತ್ತು ಎಂಬುದಾಗಿ ತಿಳಿದುಬಂದಿದೆ. ಯಾವುದೇ ಒಂದು ದೊಡ್ಡ ಅವಘಡದ ಮುನ್ಸೂಚನೆ ಇದ್ದಾಗ ಮಾತ್ರ ಈ  ರೀತಿಯ ತಯಾರಿ ಸಂಭವನೀಯ ಎಂದು ಶಂಕಿಸಲಾಗುತ್ತಿದೆ. 

ಹಾಗಾದರೆ ಬನ್ನಿ ರಷ್ಯಾ ಕೈಗೊಂಡಿರುವ ಈ ತಯಾರಿಯನ್ನು Maxar ಮೂಲಕ ಕ್ಲಿಕ್ಕಿಸಲಾಗಿರುವ ಫೋಟೋಗಳ ಮುಖಾಂತರ ಅರಿಯುವ ಪ್ರಯತ್ನ ಮಾಡೋಣ.

ಕಳೆದ ವರ್ಷ ನವೆಂಬರ್ 11ರಂದು ಕ್ಲಿಕ್ಕಿಸಲಾಗಿರುವ ಈ ಫೋಟೋದಲ್ಲಿ ಬಹುತೇಕ ಹೊಲಗದ್ದೆಗಳು ಕಾಣಿಸುತ್ತಿವೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕೊರೊನಾ ವೈರಸ್ ಪ್ರಕೋಪ ಆರಂಭವಾಗುವುದಕ್ಕೂ ಒಂದು ತಿಂಗಳು ಮುಂಚಿತವಾಗಿ ಈ ಫೋಟೋ ಕ್ಲಿಕ್ಕಿಸಲಾಗಿದೆ.

ಫೆಬ್ರವರಿ 28, 2020 ಅಂದರೆ ಸುಮಾರು ಮೂರು ತಿಂಗಳುಗಳ ಬಳಿಕ ತೆಗೆಯಲಾಗಿರುವ ಈ ಫೋಟೋದಲ್ಲಿ ಹೊಲ-ಗದ್ದೆಗಳನ್ನು ಸುಟ್ಟುಹಾಕಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ಎಮೆರ್ಜೆನ್ಸಿ ಯಾರ್ಡ್ ನಿರ್ಮಾಣಗೊಳ್ಳುತ್ತಿದೆ.

ಮಾರ್ಚ್ 15, 2020ರಲ್ಲಿ ಕ್ಲಿಕ್ಕಿಸಲಾಗಿರುವ ಈ ಭಾವಚಿತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರೇನ್ ಗಳು ಕಾರ್ಯನಿರ್ವಹಿಸುತ್ತಿರುವುದು ಕಂಡುಬರುತ್ತಿದೆ.

ಮಾರ್ಚ್ 31, 2020ರಲ್ಲಿ Maxar ವರ್ಲ್ಡ್ ವೈಡ್ ಮೂಲಕ ಕ್ಲಿಕ್ಕಿಸಲಾಗಿರುವ ಈ ಝೂಮ್ ಇನ್ ಫೋಟೋದಲ್ಲಿ ತುಂಬಾ ವೇಗವಾಗಿ ಆಸ್ಪತ್ರೆಯ ಕೆಲಸ ಪ್ರಗತಿಯಲ್ಲಿರುವುದು ಕಂಡುಬರುತ್ತದೆ.

ಮೊದಲ ಆಸ್ಪತ್ರೆಯ ನಿರ್ಮಾಣದ ನಡುವೆಯೇ ರಷ್ಯಾ ಕೊರೊನಾ ಪೀಡಿತ ರೋಗಿಗಳಿಗೆ 500 ಬೆಡ್ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಿರುವುದಾಗಿ ಹೇಳಿಕೊಂಡಿದೆ. ಇದರಿಂದ ರಷ್ಯಾದಲ್ಲಿ ಕೊರೊನಾ ವೈರಸ್ ಚಿಕಿತ್ಸೆಗಾಗಿ ವಿಶೇಷವಾಗಿ ಎರಡು ಆಸ್ಪತ್ರೆಗಳು ನಿರ್ಮಾಣಗೊಂಡಿವೆ. ಸದ್ಯ ರಷ್ಯಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 1000 ಗಡಿ ದಾಟಿದ್ದು, ಅತಿ ಹೆಚ್ಚ್ಯು ಪ್ರಕರಣಗಳು ಮಾಸ್ಕೋದಿಂದ ವರದಿಯಾಗಿವೆ.