World Dangerouse Gangs : ಭಾರತದಲ್ಲಿ, ಲಾರೆನ್ಸ್ ಬಿಷ್ಣೋಯ್ ಮತ್ತು ಅವನ ಗ್ಯಾಂಗ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಸಲ್ಮಾನ್ ಖಾನ್‌ನಿಂದ ಹಿಡಿದು ಬಾಲಿವುಡ್‌ನ ದಿಗ್ಗಜರ ನಿದ್ದೆ ಕೆಡಿಸಿ ಪ್ರಸ್ತುತ ಸುದ್ದಿಯಲ್ಲಿದೆ.. ಆದರೆ ಜಗತ್ತಿನಲ್ಲಿ ಒಂದು ಕ್ರಿಮಿನಲ್ ಸಿಂಡಿಕೇಟ್ ಇದೆ, ಈ ತಂಡ ಕಾರ್ಯವೈಖರಿ ನಿಮ್ಮನ್ನ ಒಂದು ಕ್ಷಣ ಬೆಚ್ಚಿ ಬೀಳುವಂತೆ ಮಾಡುತ್ತದೆ..
ಹೌದು.. ಜಪಾನ್‌ನ ಯಾಕುಜಾ ಗ್ಯಾಂಗ್‌ಗಳು... ನಿರ್ದಿಷ್ಟವಾಗಿ ಹೇಳುವುದಾದರೆ, ಯಮಗುಚಿ-ಗುಮಿ ಗ್ಯಾಂಗ್ ಅನ್ನು ವಿಶ್ವದ ಅತ್ಯಂತ ಹಳೆಯ ಮತ್ತು ಅಪಾಯಕಾರಿ ಕ್ರಿಮಿನಲ್ ಸಂಘಟನೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಗ್ಯಾಂಗ್ ದಶಕಗಳಿಂದ ಜಪಾನ್‌ನ ಅಪರಾಧ ಜಗತ್ತನ್ನು ಆಳಿದೆ. ಆದರೆ ಈಗ ಈ ತಂಡ ತನ್ನ ಎದುರಾಳಿಯ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ:ಹಿಂದೂ ಪವಿತ್ರ "ತಿಲಕ"ಗಳನ್ನು "ಲೈಂಗಿಕ ಕ್ರಿಯೆ" ಭಂಗಿಗಳಿಗೆ ಹೋಲಿಸಿದ ಸಚಿವ..! ಭುಗಿಲೆದ್ದ ಆಕ್ರೋಶ..
ಜಪಾನ್‌ನ ಅತಿದೊಡ್ಡ ಯಾಕುಜಾ ಗ್ಯಾಂಗ್, ಯಮಗುಚಿ-ಗುಮಿ, ಇತ್ತೀಚೆಗೆ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ, ತಮ್ಮ ಆಂತರಿಕ ಸಂಘರ್ಷವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡುವ ಪತ್ರವನ್ನು ಸಲ್ಲಿಸಿವೆ. ಭವಿಷ್ಯದಲ್ಲಿ ಯಾವುದೇ ತೊಂದರೆ ಸೃಷ್ಟಿಸುವುದಿಲ್ಲ ಎಂದು ಭರವಸೆ ನೀಡಿವೆ. ಈ ಪತ್ರವನ್ನು ಗ್ಯಾಂಗ್‌ನ ಮೂವರು ಹಿರಿಯ ಸದಸ್ಯರು ಹ್ಯೋಗೋ ಪ್ರಿಫೆಕ್ಚರಲ್ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
2015 ರಲ್ಲಿ ಯಮಗುಚಿ-ಗುಮಿಯ ಹಲವಾರು ಬಣಗಳು ಬೇರ್ಪಟ್ಟು "ಕೋಬ್ ಯಮಗುಚಿ-ಗುಮಿ"ಯನ್ನು ರಚಿಸಿದಾಗ ಈ ದ್ವೇಷ ಪ್ರಾರಂಭವಾಯಿತು. ಇದಾದ ನಂತರ, ಜಪಾನ್‌ನ ಅನೇಕ ನಗರಗಳಲ್ಲಿ ಬೀದಿಗಳಲ್ಲಿ ಗುಂಡು ಹಾರಿಸುವುದು, ಇರಿತ ಮತ್ತು ಹಿಂಸಾಚಾರದ ಅನೇಕ ಘಟನೆಗಳು ವರದಿಯಾಗಿವೆ. ಈ ಘರ್ಷಣೆಗಳು ಜಪಾನ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸವಾಲೊಡ್ಡಿದವು.
ಇದನ್ನೂ ಓದಿ:2 ಡಿವೋರ್ಸ್ ಆದ್ರೂ ಸುಮ್ಮನಿರದೆ.. 18ರ ಹರೆಯದ ಬಾಲಕನನ್ನೇ ಪ್ರೀತಿಸಿ ಮದುವೆಯಾದ 30 ವರ್ಷದ ಅಂಟಿ..!
ಯಾಕುಜಾ ಗ್ಯಾಂಗ್‌ಗಳ ಶಕ್ತಿ ಈಗ ಮೊದಲಿನಂತಿಲ್ಲ. 2024 ರಲ್ಲಿ ಜಪಾನ್‌ನಾದ್ಯಂತ ಸಂಘಟಿತ ಅಪರಾಧ ಗ್ಯಾಂಗ್‌ಗಳ ಸದಸ್ಯತ್ವವು 18,800 ಕ್ಕೆ ಇಳಿದಿದ್ದು, ಮೊದಲ ಬಾರಿಗೆ 20,000 ಕ್ಕಿಂತ ಕಡಿಮೆಯಾಗಿದೆ. 2014 ರಲ್ಲಿ ಯಮಗುಚಿ-ಗುಮಿಯ ಸದಸ್ಯತ್ವ 6000 ರಷ್ಟಿತ್ತು, ಈಗ ಅದು 3300 ಕ್ಕೆ ಇಳಿದಿದೆ. ಅದೇ ಸಮಯದಲ್ಲಿ, ಕೋಬ್ ಯಮಗುಚಿ-ಗುಮಿಯಲ್ಲಿ ಕೇವಲ 120 ಸದಸ್ಯರು ಮಾತ್ರ ಉಳಿದಿದ್ದಾರೆ.
ಕೋಬ್ ಯಮಗುಚಿ-ಗುಮಿ ಈ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಕೊಂಡಿದ್ದಾರೋ ಇಲ್ಲವೋ ಎಂಬುದು ಪ್ರಸ್ತುತ ಸ್ಪಷ್ಟವಾಗಿಲ್ಲ. ಪೊಲೀಸರು ಇದರ ಮೇಲೆ ನಿರಂತರ ನಿಗಾ ಇಟ್ಟಿದ್ದಾರೆ. ಇದು ಏಕಪಕ್ಷೀಯ ಘೋಷಣೆಯಾಗಿರಬಹುದು, ತಾತ್ಕಾಲಿಕ ಶಾಂತಿಯನ್ನು ನೀಡಬಹುದು.. ಆದರೆ ಶಾಶ್ವತ ಪರಿಹಾರವಲ್ಲ ಎಂಬ ಭಯವಿದೆ.
ಇದನ್ನೂ ಓದಿ:ಭಾರತದ ಟಾಪ್ 3 ಶ್ರೀಮಂತ ರಾಜ್ಯಗಳು ಇವು.. ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತೆ..?
ಯಾಕುಜಾ ದುರ್ಬಲಗೊಳ್ಳುತ್ತಿದ್ದರೂ, ಜಪಾನ್ ಈಗ ಹೊಸ ರೀತಿಯ ಅಪರಾಧಿಗಳೊಂದಿಗೆ ಸೆಣಸಾಡುತ್ತಿದೆ. ಟೋಕುರ್ಯು ಎಂಬ ಹೊಸ ಗ್ಯಾಂಗ್ ಈಗ ಹುಟ್ಟಿಕೊಂಡಿದೆ. ಅದಕ್ಕೆ ಯಾವುದೇ ಸ್ಥಿರ ರಚನೆ ಅಥವಾ ನಾಯಕತ್ವವಿಲ್ಲ. ಈ ಗ್ಯಾಂಗ್‌ಗಳು ಸಾಮಾಜಿಕ ಮಾಧ್ಯಮಗಳ ಮೂಲಕ ದಂಧೆ ಶುರುಮಾಡಿವೆ. 2023 ರಲ್ಲಿ, ಸುಮಾರು 10,000 ಅಪರಾಧಿಗಳನ್ನು ತನಿಖೆ ಮಾಡಲಾಯಿತು. ಇದು ಯಾಕುಜಾ ಯುದ್ಧವು ಕೊನೆಗೊಳ್ಳುತ್ತಿದ್ದರೂ, ಜಪಾನ್‌ನ ಬೀದಿಗಳಲ್ಲಿ ಅಪರಾಧದ ಬೆದರಿಕೆ ಇನ್ನೂ ಮುಂದುವರೆದಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









