ಪಾಕ್ ಪ್ರಧಾನಿ IMRAN KHAN ಸಂಬಳ ಎಷ್ಟು ಗೊತ್ತಾ? ಇಲ್ಲಿದೆ SALARY SLIP

ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಹಣದುಬ್ಬರ ಮಟ್ಟ ಕಳೆದ 12 ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೆಲ ಅಗತ್ಯ ವಸ್ತುಗಳ ಬೆಲೆ ಕೂಡ ಗಗನಮುಖಿಯಾಗಿವೆ. ಗೋದಿ ಉತ್ಪಾದನೆಯಲ್ಲಿ ಭಾರಿ ಇಳಿಕೆ ಕಂಡುಬಂದಿರುವ ಕಾರಣ, ಒಂದು ಚಪಾತಿ ತಿನ್ನುವುದು ಕೂಡ ಪಾಕ್ ನಲ್ಲಿ ದುಬಾರಿಯಾಗಿ ಪರಿಣಮಿಸಿದೆ.

Last Updated : Feb 12, 2020, 02:26 PM IST
ಪಾಕ್ ಪ್ರಧಾನಿ IMRAN KHAN ಸಂಬಳ ಎಷ್ಟು ಗೊತ್ತಾ? ಇಲ್ಲಿದೆ SALARY SLIP title=

ಕರಾಚಿ:ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಸದ್ಯ ಸರಿಯಾಗಿಲ್ಲ, ಹಣದುಬ್ಬರದ ಹೊಡೆತದ ಕಾರಣ ಅಗತ್ಯ ವಸ್ತುಗಳ ಬೆಲೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಹೀಗಾಗಿ ಸಾಮಾನ್ಯ ಜನರಿಗೆ ಒಂದು ಚಪಾತಿ ತಿನ್ನುವುದು ಕೂಡ ದುಬಾರಿಯಾಗಿ ಪರಿಣಮಿಸಿದೆ. ಹಲವು ಮನೆಗಳಲ್ಲಿ ಒಲೆ ಕೂಡ ಉರಿಯುವುದು ಕಷ್ಟಕರವಾಗಿ ಪರಿಣಮಿಸಿದೆ. ಇದು ಜನಸಾಮಾನ್ಯರ ಪರಿಸ್ಥಿತಿಯಾದರೆ ಇನ್ನೊಂದೆಡೆ ಪಾಕ್ ಪ್ರಧಾನಿ ಪರಿಸ್ಥಿತಿ ಕೂಡ ಹೀಗೆಯೇ ಇದೆ. ಪಾಕ್ ಪ್ರಧಾನಿ ಇಮ್ರಾನ್ ಸಂಬಳ ಎಷ್ಟು ಎಂಬುದು ಬಹಳಷ್ಟು ಕಡಿಮೆ ಜನರಿಗೆ ತಿಳಿದಿದೆ. ಆದರೆ, ಪಾಕ್ ಪ್ರಧಾನಿ ಪಡೆಯುತ್ತಿರುವ ಸಂಬಳದಿಂದ ಅವರ ಮನೆ ಖರ್ಚು ಸಾಗುವುದೂ ಕೂಡ ಕಷ್ಟಕರವಾಗಿದೆ ಎಂದರೆ ನಂಬುತ್ತೀರಾ?

ಖುದ್ದಾಗಿ ಮನೆ ಖರ್ಚಿನ ಮಾತು ಒಪ್ಪಿದ ಇಮ್ರಾನ್
ಈ ಕುರಿತು ಸ್ವತಃ ಹೇಳಿಕೆ ನೀಡಿರುವ ಇಮ್ರಾನ್ ತಮಗೆ ಸಿಗುವ ಸಂಬಳದಲ್ಲಿ ತಮ್ಮ ಮನೆ ಖರ್ಚು ನಿಭಾಯಿಸುವುದು ಕಷ್ಟಕರವಾಗಿದೆ ಎಂದಿದ್ದಾರೆ. ದೇಶದ ಉದ್ಯಮಿಗಳ ಜೊತೆ ನಡೆಸಿರುವ ಒಂದು ಸಭೆಯಲ್ಲಿ ಇಮ್ರಾನ್ ಈ ಕುರಿತು ಹೇಳಿಕೆ ನೀಡಿದ್ದಾರೆ. ವ್ಯಾಪಾರಿಗಳಿಗೆ ಟ್ಯಾಕ್ಸ್ ಪಾವತಿಯ ಮಹತ್ವದ ಕುರಿತು ಇಮ್ರಾನ್ ಹೇಳಿಕೊಡುತ್ತಿದ್ದರು. ಈ ವೇಳೆ ಅವರು ತಮ್ಮ ಸಂಬಳದ ಕುರಿತು ಉಲ್ಲೇಖಿಸಿರುವ ಅವರು, ತಮ್ಮ ಮನೆಯ ಖರ್ಚು ಕೂಡ ನಿಭಾಯಿಸುವುದು ತಮಗೆ ಕಷ್ಟಕರವಾಗಿದೆ ಎಂದಿದ್ದಾರೆ.

ಇಮ್ರಾನ್ ಸುಳ್ಳು ಹೇಳುತ್ತಿದ್ದಾರೆ
ಪಾಕ್ ಪ್ರಜೆಗಳ ಹೃದಯ ಗೆಲ್ಲಲು ಇಮ್ರಾನ್ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪಾಕ್ ನಲ್ಲಿರುವ ಜನಸಾಮಾನ್ಯರು ತಮ್ಮ ಅವಶ್ಯಕತೆಗೆ ತಕ್ಕಂತೆ ಹಣ ಸಂಪಾದಿಸುತ್ತಿಲ್ಲ. ಏಕೆಂದರೆ ಚಪಾತಿ, ಬೇಳೆ, ಅಕ್ಕಿ ಹಾಗೂ ಎಲ್ಲ ಆಹಾರ ಪದಾರ್ಥಗಳು ದುಬಾರಿಯಾಗಿವೆ. ಪಾಕ್ ನಲ್ಲಿ ಸಾಮಾನ್ಯ ಜನರು ಎದುರಿಸುತ್ತಿರುವ ಪರಿಸ್ಥಿತಿಗೆ ತಾವು ಹೊರತಾಗಿಲ್ಲ ಎಂಬುದೇ ಇಮ್ರಾನ್ ಅವರ ಮಾತಿನ ತಾತ್ಪರ್ಯವಾಗಿದೆ. ವಾಸ್ತವಿಕವಾಗಿ ಹೇಳುವುದಾದರೆ ಇಮ್ರಾನ್ ಪಡೆಯುತ್ತಿರುವ ಬೇಸಿಕ್ ಸಂಬಳದಲ್ಲಿ ಯಾವುದೇ ಸಾಮಾನ್ಯ ನಾಗರಿಕನ ಮನೆ ಖರ್ಚು ಸುಲಭವಾಗಿ ನಿಭಾಯಿಸಬಹುದಾಗಿದ್ದು, ಅವರ ಬೇಸಿಕ್ ಸ್ಯಾಲರಿ 1,07,280 ಪಾಕ್ ರೂ.ಗಳಷ್ಟಾಗಿದೆ.

ಝೀ ಮೀಡಿಯಾ ಬಳಿ ಇದೆ ಇಮ್ರಾನ್ ಖಾನ್ ಸ್ಯಾಲರಿ ಸ್ಲಿಪ್
ಝೀ ಮಿಡಿಯಾ ಸಂಸ್ಥೆಯ ಸುದ್ದಿ ವಾಹಿನಿಯಾಗಿರುವ WIONಗೆ ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ವಿಸ್ತೃತ ಸ್ಯಾಲರಿ ಸ್ಲಿಪ್ ಇದೆ. ಈ ಸ್ಯಾಲರಿ ಸ್ಲಿಪ್ ನೋಡಿ ಅವರ ಸಂಬಳ ಎಷ್ಟು ಎಂಬುದನ್ನು ನೀವೂ ಕೂಡ ಊಹಿಸಬಹುದು. ಇಮ್ರಾನ್ ಅವರ ಒಂದು ತಿಂಗಳ ಗ್ರಾಸ್ ಸ್ಯಾಲರಿ 2,01,575 ಪಾಕ್ ರೂ.ಗಳಷ್ಟಾಗಿದೆ. ಅವರು ತಮ್ಮ ಒಟ್ಟು ಸಂಬಳದ ಮೇಲೆ ತೆರಿಗೆ ಪಾವತಿಸುತ್ತಾರೆ. ತೆರಿಗೆ ಪಾವತಿಯ ಬಳಿಕ ಅವರ ಸಂಬಳ 1,96,979 ಪಾಕಿಸ್ತಾನಿ ರೂಪಾಯಿಗಳಷ್ಟಾಗಲಿದೆ. ಅಂದರೆ ಇಮ್ರಾನ್ ತಿಂಗಳಿಗೆ ರೂ.4,595 ತೆರಿಗೆ ಪಾವತಿಸುತ್ತಾರೆ. ಇಮ್ರಾನ್ ನಿರಂತರವಾಗಿ ತಮ್ಮ ದೇಶದ ವಿರೋಧಿ ಪಕ್ಷಗಳ ಮುಖಂಡರ ಮೇಲೆ ಟ್ಯಾಕ್ಸ್ ಕಳ್ಳತನದ ಆರೋಪ ಮಾಡುತ್ತಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

ಅವರ ಸಂಬಳದ ವಿವರ ಕೆಳಗಿನಂತಿದೆ
ಬೇಸಿಕ್ ಸಂಬಳ - 1,07,280 ರೂ.
ಇತರೆ ಮಾಸಿಕ ಭತ್ಯೆ - 50,000 ರೂ.
ತಾತ್ಕಾಲಿಕ ಪರಿಹಾರ ಭತ್ಯೆ - 21,456 ರೂ.
ತೆರಿಗೆ ಪಾವತಿ -4,595 ರೂ.
ನೆಟ್ ಸ್ಯಾಲರಿ - 1,96,000 ರೂ.

ಭಾರತೀಯ ರೂಪಾಯಿ ಮೌಲ್ಯದ ಪ್ರಕಾರ ಇಮ್ರಾನ್ ಖಾನ್ ಮಾಸಿಕ ಸಂಬಳ ಸುಮಾರು 1 ಲಕ್ಷ ರೂ.ಗಳಾಗಲಿದ್ದು, ಯಾವುದೇ ದೇಶದ ಪ್ರಧಾನಿ ಪಡೆಯುತ್ತಿರುವ ಸಂಬಳಕ್ಕಿಂತ ಭಾರಿ ಕಡಿಮೆಯಾಗಿದೆ. ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಪಾಕ್ ಮಾಧ್ಯಮಗಳು ಇಮ್ರಾನ್ ಖಾನ್ ಅವರ ಸಂಬಳ ಅವರ ಮಂತ್ರಿಮಂಡಲದ ಯಾವುದೇ ಓರ್ವ ಮಂತ್ರಿಗಿಂತಲೂ ಕೂಡ ಕಡಿಮೆಯಾಗಿದೆ ಎಂದಿವೆ.

Trending News