ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದ- ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಆರೋಪ

1995 ಅಥವಾ 1996 ರ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಶಾಪ್ ನಲ್ಲಿನ ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ಗೈದಿದ್ದಾನೆ ಎಂದು ಸಲಹೆ ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಗಂಭೀರ್ ಆರೋಪ ಮಾಡಿದ್ದಾರೆ. 

Last Updated : Jun 22, 2019, 02:58 PM IST
ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರ ಎಸೆಗಿದ್ದ- ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಆರೋಪ    title=
file photo

ನವದೆಹಲಿ: 1995 ಅಥವಾ 1996 ರ ಅವಧಿಯಲ್ಲಿ ಡೊನಾಲ್ಡ್ ಟ್ರಂಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಬರ್ಗ್‌ಡಾರ್ಫ್ ಗುಡ್‌ಮ್ಯಾನ್ ಡಿಪಾರ್ಟ್ಮೆಂಟ್ ಶಾಪ್ ನಲ್ಲಿನ ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ಮೇಲೆ ಬಲವಂತವಾಗಿ ಅತ್ಯಾಚಾರ ಗೈದಿದ್ದಾನೆ ಎಂದು ಸಲಹೆ ಅಂಕಣಗಾರ್ತಿ ಇ. ಜೀನ್ ಕ್ಯಾರೊಲ್ ಗಂಭೀರ್ ಆರೋಪ ಮಾಡಿದ್ದಾರೆ. 

ಶುಕ್ರವಾರದಂದು ನ್ಯೂಯಾರ್ಕ್ ಮ್ಯಾಗಜೀನ್ ನಲ್ಲಿ ಈ ಅತ್ಯಾಚಾರದ ಬಗ್ಗೆ ವಿವರವಾಗಿ ಬರೆದುಕೊಂಡಿರುವ ಕ್ಯಾರೊಲ್ ಟ್ರಂಪ್ ಅವರೊಂದಿಗೆ ಡ್ರೆಸ್ಸಿಂಗ್ ಕೋಣೆಗೆ ಹೋಗಲು ಒಪ್ಪಿದ ನಂತರ ತಮ್ಮನ್ನು ಗೋಡೆಗೆ ಒತ್ತಿ ಲೈಂಗಿಕವಾಗಿ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈ ಎಲ್ಲ ಆರೋಪಗಳನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕ್ಯಾರೊಲ್ ಈ ಘಟನೆಯು ತನ್ನ ಮೇಲೆ ಶಾಶ್ವತ ಗುರುತನ್ನು ಹೊಂದಿದೆ ಎಂದು ಹೇಳುತ್ತಾರೆ.  

ಈಗ ಅವರು ಈ ಎಲ್ಲ ಘಟನೆಯನ್ನು ತಮ್ಮ ಮುಂಬರುವ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಅದನ್ನು ಶುಕ್ರವಾರ ನ್ಯೂಯಾರ್ಕ್ ಮ್ಯಾಗಜೀನ್ ಪ್ರಕಟಿಸಿದೆ.ಈ ಘಟನೆ ನಡೆದಾಗ ಟ್ರಂಪ್ ಗೆ 50 ಆಕೆಗೆ 52 ವಯಸ್ಸು ಎಂದು ಹೇಳಲಾಗಿದೆ. ಇನ್ನೊಂದೆಗೆ ವೈಟ್ ಹೌಸ್ ಕೂಡ ಈ ಇದನ್ನು ಅಲ್ಲಗಳೆದಿದೆ. ಅಧ್ಯಕ್ಷ ಟ್ರಂಪ್ ಅವರ ಹೆಸರಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಸುಮಾರು 25 ವರ್ಷಗಳ ಹಿಂದಿನ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ ಎಂದು ಹೇಳಿದೆ.

Trending News