ಪತ್ನಿಗೆ ಡೈವೋರ್ಸ್ ನೀಡಿದ್ದ ಅಮೆಜಾನ್ ಮುಖ್ಯಸ್ಥನಿಗೆ ವಿಶ್ ಮಾಡಿದ ಡೊನಾಲ್ಡ್ ಟ್ರಂಪ್..!

Updated: Jan 11, 2019 , 07:21 PM IST
ಪತ್ನಿಗೆ ಡೈವೋರ್ಸ್ ನೀಡಿದ್ದ ಅಮೆಜಾನ್ ಮುಖ್ಯಸ್ಥನಿಗೆ ವಿಶ್ ಮಾಡಿದ ಡೊನಾಲ್ಡ್ ಟ್ರಂಪ್..!

ನವದೆಹಲಿ: ಅಮೆರಿಕಾದ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಪತ್ನಿ ಮೆಕೆಂಜಿಗೆ ಡೈವೋರ್ಸ್ ನೀಡಿದ್ದಕ್ಕೆ ವಿಶ್ ಮಾಡಿದ್ದಾರೆ.

ಮೆಕ್ಸಿಕೋಗೆ ಪ್ರಯಾಣ ಬೆಳೆಸುತ್ತಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡೊನಾಲ್ಡ್ ಟ್ರಂಪ್ " ನಾನು ಅವರಿಗೆ ವಿಶ್ ಮಾಡುತ್ತೇನೆ, ಮುಂಬರುವವರು ಬ್ಯೂಟಿಯಾಗಿರುತ್ತಾರೆ" ಎಂದು ತಿಳಿಸಿದ್ದಾರೆ.

ಬುಧುವಾರವಷ್ಟೇ ಪತ್ನಿಗೆ ವಿಚ್ಚೆಧನ ನೀಡಿದ್ದ ಬೆಜೋಸ್ ಅವರು ಲಾರೆನ್ ಸ್ಯಾನ್ಚೆಜ್ ಅವರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ತಿಳಿದು ಬಂದಿವೆ. ನ್ಯಾಷನಲ್ ತನಿಖೆದಾರ ಡೇವಿಡ್ ಪೆಕರ್ ಅವರು ಹೇಳುವಂತೆ "ಕಳೆದ ನಾಲ್ಕು ತಿಂಗಳಿಂದ ಬೆಜೋಸ್ ಮತ್ತು ಲಾರೆನ್ ಸ್ಯಾನ್ಚೆಜ್ ನಡುವೆ ಸಂಬಂಧವಿರುವ ವಿಚಾರವಾಗಿ ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಬೆಜೋಸ್ ಅವರ ಅಮೆಜಾನ್ ಕಂಪನಿಯನ್ನು ಸಾರ್ವಜನಿಕವಾಗಿ ಟೀಕಿಸಿದ್ದರು.