Lockdown ಹಿನ್ನೆಲೆ ತನ್ನ ತಾಯಿಯ ಅಂತಿಮ ವಿದಾಯಕ್ಕೂ ತೆರಳಲಾಗಿಲ್ಲ ಈ ದೇಶದ ಪ್ರಧಾನಿಗೆ

ಕೊರೊನಾವೈರಸ್ ಕಾರಣದಿಂದಾಗಿ, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ತನ್ನ ತಾಯಿಗೆ ಕೊನೆಯ ವಿದಾಯ ಹೇಳಲು ಸಹ ತಲುಪಲು ಸಾಧ್ಯವಾಗಿಲ್ಲ.

Last Updated : May 26, 2020, 07:17 PM IST
Lockdown ಹಿನ್ನೆಲೆ ತನ್ನ ತಾಯಿಯ ಅಂತಿಮ ವಿದಾಯಕ್ಕೂ ತೆರಳಲಾಗಿಲ್ಲ ಈ ದೇಶದ ಪ್ರಧಾನಿಗೆ title=

ನವದೆಹಲಿ: ಕೊರೊನಾವೈರಸ್ ಹಿನ್ನೆಲೆ, ನೆದರ್ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ತನ್ನ ತಾಯಿಗೆ ಕೊನೆಯ ವಿದಾಯ ಹೇಳಲು ಸಹ ತಲುಪಲು ಸಾಧ್ಯವಾಗಿಲ್ಲ.  ಅವರ ತಾಯಿ ಮೇ 13 ರಂದು ಅವರ 96 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಪ್ರಧಾನಿ ರುಟ್ಟೆಯ ತಾಯಿ ಹೇಗ್ ನಗರದ ತನ್ನ ಮನೆಯಲ್ಲಿ ವಾಸವಾಗಿದ್ದರು. ಕೊನೆಯ ಗಳಿಗೆಯಲ್ಲಿ ರುಟ್ಟೆ ತನ್ನ ತಾಯಿಯ ಬಳಿ ತಲುಪುವುದು ಕಷ್ಟವೇನಲ್ಲ, ಆದರೆ ಲಾಕ್‌ಡೌನ್ ನಿಯಮಗಳನ್ನು ಅನುಸರಿಸಿ ಹೋಗದಿರಲು ಅವರು ನಿರ್ಧರಿಸಿದ್ದಾರೆ. ಆದರೆ, ಕೊರೊನಾ ವೈರಸ್ ಸೋಂಕಿನ ಕಾರಣ ಪ್ರಧಾನ ಮಂತ್ರಿಗಳ ತಾಯಿ ಸಾವನ್ನಪ್ಪಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಪ್ರಧಾನಿ ರುಟ್ಟೆ ವಕ್ತಾರರು, "ಕೊರೊನಾ ಸೋಂಕನ್ನು ನಿಯಂತ್ರಿಸಲು ವಿಧಿಸಲಾಗಿರುವ ಲಾಕ್ ಡೌನ್ ನಿನ್ನೆಲೆ ಪ್ರಧಾನಿಯವರು ತನ್ನ ತಾಯಿಯ ಅಂತಿಮ ದರ್ಶನಕ್ಕೆ ತೆರಳದೆ ಇರಲು ನಿರ್ಧರಿಸಿದ್ದಾರೆ. ಅವರು ಲಾಕ್ ಡೌನ್ ನ ಎಲ್ಲ ನಿಯಮಗಳನ್ನು ಪಾಲಿಸುತಿದ್ದಾರೆ" ಎಂದು ಅವರು ಹೇಳಿದ್ದಾರೆ. ಆದರೆ, ಪ್ರಧಾನಿ ರುಟ್ಟೆ ಅವರ ತಾಯಿ ಕೊವಿಡ್ 19 ಕಾಯಿಲೆಯಿಂದ ಬಳಲುತ್ತಿರಲಿಲ್ಲ ಮತ್ತು ಅವರು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ಡಚ್ ಮಾಧ್ಯಮ ವರದಿ ಮಾಡಿದೆ.

ತನ್ನ ತಾಯಿಯ ನಿಧನಕ್ಕೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ರುಟ್ಟೆ, "ಇದು ನನ್ನ ಸಂಪೂರ್ಣ ಕುಟುಂಬದ ಪಾಲಿಗೆ ಬಂದೊದಗಿದ ಕಠಿಣ ಪ್ರಸಂಗ. ಇನ್ಮುಂದೆ ನಮಗೆ ನಮ್ಮ ತಾಯಿಯ ನೆನಪಿನಲ್ಲಿ ಬದುಕಬೇಕಾಗಲಿದೆ. ನಾವು ನಮ್ಮ ಎಲ್ಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ತಮ್ಮ ತಾಯಿಯವರಿಗೆ ವಿದಾಯ ಹೇಳಿದ್ದು, ದೇವರು ನಮಗೆ ಈ ದುಃಖ ಭರಿಸುವ ಶಕ್ತಿ ನೀಡಲಿ" ಎಂದು ಹೇಳಿದ್ದಾರೆ.

ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ನೆದರ್ಲ್ಯಾಂಡ್ಸ್ ನಲ್ಲಿ ಕಡಿಮೆ ಕಟ್ಟುನಿಟ್ಟಾದ ಲಾಕ್ ಡೌನ್ ವಿಧಿಸಲಾಗಿದೆ. ಸೋಮವಾರದಿಂದ ದೇಶದ ನಾಗರಿಕರಿಗೆ ಕೆಯರ್ ಹೋಮ್ ಗಳಿಗೆ ತೆರಳಲು ಡಚ್ ಅಧಿಕಾರುಗಳು ಅನುಮತಿ ನೀಡಿದ್ದಾರೆ. ಕೊರೊನಾ ಹಿನ್ನೆಲೆ ಇದುವರೆಗೆ ಅಲ್ಲಿ 5 ಸಾವಿರಕ್ಕೂ ಅಧಿಕ ಜನ ಮೃತಪಟ್ಟಿರುವುದು ಇಲ್ಲಿ ಗಮನಾರ್ಹ.

Trending News