)
Pakistan News: ಪಾಕಿಸ್ತಾನದ ಪೇಶಾವರದಲ್ಲಿರುವ ಪಾಕಿಸ್ತಾನದ ಪೇಶಾವರದಲ್ಲಿ ಸೋಮವಾರ(ನ.24) ಸ್ಫೋಟ ಹಾಗೂ ಗುಂಡಿನ ದಾಳಿ ನಡೆದಿದ್ದು ಈ ದುರ್ಘಟನೆಯಲ್ಲಿ ಕನಿಷ್ಠ 3 ಜನರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಪಾಕಿಸ್ತಾನದ ಪೇಶಾವರದ ಸದ್ದರ್ ಪ್ರದೇಶದಲ್ಲಿರುವ ಅರೆಸೈನಿಕ ಪಡೆಗಳ ಪ್ರಧಾನ ಕಚೇರಿ ಬಳಿ ಇಂದು ಬೆಳಗ್ಗೆ ಓರ್ವ ಆತ್ಮಾಹುತಿ ಬಾಂಬ್ ಸ್ಫೋಟಿಸಿಕೊಂಡ ಪರಿಣಾಮ ಮೂವರು ಭದ್ರತಾ ಸಿಬ್ಬಂದಿ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೇ ವೇಳೆ ಭದ್ರತಾ ಸಿಬ್ಬಂದಿ ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು ಮೂವರು ಉಗ್ರರನ್ನು ಸದೆಬಡಿಯಲಾಗಿದೆ. ಇದರಿಂದ ಒಟ್ಟು ಆರು ಜನರು ಮೃತಪಟ್ಟಂತೆ ಆಗಿದೆ.
ಇಂದು (ನವೆಂಬರ್ 24) ಬೆಳಿಗ್ಗೆ ಪೇಶಾವರದಲ್ಲಿರುವ ಅರೆಸೈನಿಕ ಪಡೆ ಪ್ರಧಾನ ಕಚೇರಿಯ ಮೇಲೆ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂದು ಪೊಲೀಸರು ಸುದ್ದಿ ಸಂಸ್ಥೆ ರಾಯಿಟರ್ಸ್ಗೆ ಮಾಹಿತಿ ನೀಡಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು ಪಾಕಿಸ್ತಾನದ ವಾಯುವ್ಯ ನಗರದಲ್ಲಿ ಎರಡು ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರೆ.
ಗಡಿನಾಡಿನ ಕಾನ್ಸ್ಟಾಬ್ಯುಲರಿ ಪ್ಯಾರಾಮಿಲಿಟರಿ ಪಡೆಯ ಪ್ರಧಾನ ಕಚೇರಿಯಾಗಿರುವ ಸಂಕೀರ್ಣವು ಇಬ್ಬರು ಆತ್ಮಾಹುತಿ ಬಾಂಬರ್ಗಳ ದಾಳಿಗೆ ಒಳಗಾಗಿರುವುದಾಗಿ ಮೂಲಗಳು ತಿಳಿಸಿವೆ.
ಲಭ್ಯವಿರುವ ಮಾಹಿತಿಗಳ ಪ್ರಕಾರ, ಮೊದಲಿಗೆ ಕಾನ್ಸ್ಟಾಬ್ಯುಲರಿಯ ಮುಖ್ಯ ದ್ವಾರದ ಬಳಿ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದ್ದರೆ, ಇನ್ನೊಬ್ಬ ಆವರಣವನ್ನು ಪ್ರವೇಶಿಸಿ ದಾಳಿ ನಡೆಸಿದ್ದಾನೆ ಎಂದು ಹಿರಿಯ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಪ್ಯಾರಾಮಿಲಿಟರಿ ಪ್ರಧಾನ ಕಚೇರಿಯೊಳಗೆ ಕೆಲವು ಭಯೋತ್ಪಾದಕರು ಅಡಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಸೇನೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದು ಪ್ರದೇಶವನ್ನು ಸುತ್ತುವರೆದಿದ್ದಾರೆ. ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಮನಾರ್ಹವಾಗಿ, ದಾಳಿಗೊಳಗಾಗಿರುವ ಪ್ಯಾರಾಮಿಲಿಟರಿ ಪಡೆಯ ಪ್ರಧಾನ ಕಚೇರಿಯು ಜನದಟ್ಟಣೆಯ ಪ್ರದೇಶದಲ್ಲಿ, ಮಿಲಿಟರಿ ಕಂಟೋನ್ಮೆಂಟ್ಗೆ ಸನಿಹದಲ್ಲಿದೆ. ಘಟನೆ ಬಳಿಕ ಸೈನ್ಯ, ಪೊಲೀಸರು ಮತ್ತು (ಭದ್ರತಾ) ಸಿಬ್ಬಂದಿ ಈ ಪ್ರದೇಶವನ್ನು ಸುತ್ತುವರೆದಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಪ್ರದೇಶದಲ್ಲಿ ಸದ್ಯ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪಾಕಿಸ್ತಾನದ ಪೇಶಾವರದಲ್ಲಿ ದಾಳಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಪರಿಶೀಲಿಸದ ವಿಡಿಯೋಗಳು ಹರಿದಾಡುತ್ತಿವೆ. ಇದರಲ್ಲಿ ಒಂದು ವೀಡಿಯೋದಲ್ಲಿ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ತಮ್ಮ ಬಂದೂಕುಗಳನ್ನು ತೋರಿಸಿ ಕೂಗುತ್ತಿರುವುದನ್ನು ತೋರಿಸಿದ್ದರೆ, ಇನ್ನೊಂದು ವಿನಾಶವನ್ನು ತೋರಿಸಿದೆ.
🚨 Pakistan BURNING 💥
Gunmen attack paramilitary force headquarters in Peshawar — EXPLOSIONS heard, exchange of fire ongoing. pic.twitter.com/YDfC0bqjo6
— Megh Updates 🚨™ (@MeghUpdates) November 24, 2025
💥 alert.
Peshawar FC headquarter. @ajaykraina sir as we discussed military targets are fair game. pic.twitter.com/wU5Tc0Rrtm
— Aadi Achint 🇮🇳 (@AadiAchint) November 24, 2025