ಕೆನಡಾದ ಭಾರತೀಯ ರೆಸ್ಟೋರೆಂಟವೊಂದರಲ್ಲಿ ಸ್ಪೋಟ, 15 ಜನರಿಗೆ ಗಾಯ

     

Last Updated : May 25, 2018, 12:02 PM IST
ಕೆನಡಾದ ಭಾರತೀಯ ರೆಸ್ಟೋರೆಂಟವೊಂದರಲ್ಲಿ ಸ್ಪೋಟ, 15 ಜನರಿಗೆ ಗಾಯ  title=

ಒಟ್ಟಾವಾ: ಕೆನಡಾದ ಮಿಸ್ಸಿಸ್ಸೌಗ ನಗರದ ಭಾರತೀಯ ರೆಸ್ಟಾರೆಂಟ್ನಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ. ಗುರುವಾರ ರಾತ್ರಿ ಸುಮಾರು 10.30 ರ ವೇಳೆಗೆ ಹ್ಯುರೋಂಟೊರಿಯ ಬೀದಿ ಮತ್ತು ಎಗ್ಲಿಟನ್ ಅವೆನ್ಯೂ ಈಸ್ಟ್ನಲ್ಲಿರುವ ಬಾಂಬೆ ಬೇಲ್ನಲ್ಲಿ ಈ ಘಟನೆ ಸಂಭವಿಸಿದೆ.

ಈ ಸ್ಪೋಟದಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಅವರನ್ನು ಟೊರೊಂಟೊ ನಗರದಲ್ಲಿನ  ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎ ಪೀಲ್ ಪ್ರಾದೇಶಿಕ ಪಾರ್ಮೆಡಿಕ್ ಸರ್ವಿಸಸ್ ವಕ್ತಾರರು ಗ್ಲೋಬಲ್ ನ್ಯೂಸ್ಗೆ ತಿಳಿಸಿದ್ದಾರೆ, ರೆಸ್ಟೋರೆಂಟ್ ಕಟ್ಟಡವು ಗಾಜಿನದ್ದಾಗಿರುವುದರಿಂದ  ಹಾನಿಗೊಳಗಾಗಿದೆ ಎಂದು ತಿಳಿದುಬಂದಿದೆ. ಇನ್ನು ಸ್ಪೋಟದ ಕಾರಣವನ್ನು ತಿಳಿಯಲು ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

Trending News