ಚಿಕಾಗೊ: ಕರೋನಾ ಜನಮಾನಸದಲ್ಲಿ ಯಾವ ರೀತಿ ಭಯ ಹುಟ್ಟಿಸಿದೆ ಅನ್ನುವುದಕ್ಕೆ ಈ ವ್ಯಕ್ತಿಯೇ ಸಾಕ್ಷಿ. ಭಾರತೀಯ ಮೂಲದ ಕ್ಯಾಲಿಫೋರ್ನಿಯಾ ಪ್ರಜೆ ಕಳೆದ ಮೂರು ತಿಂಗಳಿನಿಂದ ಚಿಕಾಗೋ ವಿಮಾನ ನಿಲ್ದಾಣದಲ್ಲಿ ಅಡಗಿ ಕುಳಿತಿದ್ದ. 3 ತಿಂಗಳಿಂದ ಈತ ವಿಮಾನ ನಿಲ್ದಾಣ ಬಿಟ್ಟು ಹೊರಬಂದಿದ್ದೇ ಇಲ್ಲ. ಇದೀಗ ಈತನನ್ನು ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದೆ.
ಕರೋನಾದ ಕಾರಣದಿಂದಾಗಿ ತನ್ನನ್ನು ತಾನೇ ಬಂಧನದಲ್ಲಿಟ್ಟಿದ್ದ :
ಭಾರತೀಯ ಮೂಲದ ಕ್ಯಾಲಿಫೋರ್ನಿಯಾ ಪ್ರಜೆ ಆದಿತ್ಯ ಸಿಂಗ್ ಅಕ್ಟೋಬರ್ 19 ರಂದು ಒ'ಹೇರ್ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಕರೋನಾ (Coronavirus) ಎಂದರೆ ಅತಿಯಾಗಿ ಭಯಬಿದ್ದಿದ್ದ ಆದಿತ್ಯ ಸಿಂಗ್, ಕರೋನಾದಿಂದ ತನ್ನನ್ನು ಬಚಾವಾಗಿಸಿಕೊಳ್ಳಲು ಕಂಡುಕೊಂಡ ಮಾರ್ಗ ಎಂಥವರನ್ನೂ ಬೆಚ್ಚಿ ಬೀಳಿಸಬಹುದು. ವಿಮಾಣ ನಿಲ್ದಾಣ (Airport) ತಲುಪುತ್ತಿದ್ದಂತೆ ಆದಿತ್ಯ ಭದ್ರತಾ ವಲಯವನ್ನು ಪ್ರವೇಶಿಸಿದ್ದಾನೆ. ನಂತರ ಈತ ಅಲ್ಲಿಂದ ಹೊರ ಬರಲೇ ಇಲ್ಲ. ಬರೋಬ್ಬರಿ ಮೂರು ತಿಂಗಳ ಈ ಸ್ಥಳದಲ್ಲಿಯೇ ತಲೆಮರೆಸಿಕೊಂಡಿದ್ದ. ಜನವರಿ 16 ರಂದು ವಿಮಾನ ನಿಲ್ದಾಣದ ಸಿಬ್ಬಂದಿಯ ಗಮನಕ್ಕೆ ಈ ವಿಷಯ ಬಂದಿದ್ದು ಆದಿತ್ಯನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆದಿತ್ಯ, ಕರೋನಾ (COVID-19) ಭಯದಿಂದ ಈ ರೀತಿ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ. ಪ್ರಸ್ತುತ, ಭದ್ರತಾ ಸಿಬ್ಬಂದಿ ಆದಿತ್ಯ ಸಿಂಗ್ ಹೇಳಿಕೆಯ ಸತ್ಯಾಸತ್ಯತೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬ್ರಿಟನ್‌ನಲ್ಲಿ ಹೈ ಸ್ಪೀಡ್ Corona ಹಾವಳಿ : ಪ್ರತಿ 30 ಸೆಕೆಂಡಿಗೆ ಓರ್ವ ವ್ಯಕ್ತಿ ಆಸ್ಪತ್ರೆಗೆ ದಾಖಲು
ಆದಿತ್ಯನ ಸುಳ್ಳು ಪತ್ತೆಹಚ್ಚಿದ್ದು ಹೇಗೆ?
ವಿಮಾನ ನಿಲ್ದಾಣ ಭದ್ರತಾ ಸಿಬ್ಬಂದಿಗೆ ಆದಿತ್ಯ ಸಿಂಗ್ ಸಿಕ್ಕಿಬಿದ್ದ ಕೂಡಲೇ, ಆತ ತಾನು ವಿಮಾನ ನಿಲ್ದಾಣದ ಸಿಬ್ಬಂದಿ ಎಂದು ಹೇಳಿ ಗುರುತಿನ ಚೀಟಿಯನ್ನು (ID Card) ತೋರಿಸಿದ್ದಾನೆ. ಆದರೆ ಆ ಐಡಿ ಕಾರ್ಡ್ ಒಬ್ಬ ಭದ್ರತಾ ಸಿಬ್ಬಂದಿಯದಾಗಿದ್ದು, ಐಕಾರ್ಡ್ ಕಳೆದು ಹೋಗಿರುವ ಬಗ್ಗೆ ದೂರು ದಾಖಲಾಗಿತ್ತು. ಹೀಗಾಗಿ ಆದಿತ್ಯನ ಸುಳ್ಳನ್ನು ಕಂಡು ಹಿಡಿದ ಭದ್ರತಾ ಸಿಬ್ಬಂದಿ ಆತನ್ನು ವಶಕ್ಕೆ ಪಡೆದಿದ್ದಾರೆ.
ಆದಿತ್ಯನ ಹಿನ್ನೆಲೆ ಏನು ?
ಆದಿತ್ಯ ಸಿಂಗ್ ಬಗ್ಗೆ ಇದುವರೆಗೆ ಪೊಲೀಸರಿಗೆ (Police) ದೊರೆತ ಮಾಹಿತಿಯ ಪ್ರಕಾರ, ಆದಿತ್ಯ ಸಿಂಗ್ ಹಾಸ್ಪಿಟಾಲಿಟಿಯಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಆತನ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ(Criminal Case) ದಾಖಲಾಗಿಲ್ಲ. ಆದಿತ್ಯ ನಿರುದ್ಯೋಗಿಯಾಗಿದ್ದು, ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ನೆಲೆಸಿದ್ದಾನೆ. ವಿಮಾನ ನಿಲ್ದಾಣ ಕ್ಯಾಂಪಸ್‌ನಲ್ಲಿ ತಲೆಮರೆಸಿಕೊಂಡಿದ್ದಕ್ಕಾಗಿ ಆದಿತ್ಯ ಸಿಂಗ್‌ಗೆ 1 ಸಾವಿರ ಯುಎಸ್ ಡಾಲರ್ ದಂಡ ವಿಧಿಸಲಾಗಿದೆ ಮತ್ತು ಒ'ಹೇರ್ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿಷೇಧಿಸಲಾಗಿದೆ.
ಇದನ್ನೂ ಓದಿ : Holocaust On Earth-ಆಗಸದಿಂದ ಭೂಮಿಗಪ್ಪಳಿಸಲಿವೆ ಬೆಂಕಿ ಚೆಂಡುಗಳು, ಇದು ಭೂ- ವಿನಾಶದ ಸಂಕೇತವೇ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.