ಪ್ಯಾರಿಸ್ : ಕೊನೆಗೂ ಬ್ರಹ್ಮಾಂಡದ ಸುತ್ತ ಇರುವ ಕಪ್ಪು ರಂದ್ರದ ಮೊದಲ ಫೋಟೋವನ್ನು ಖಗೋಳಶಾಸ್ತ್ರಜ್ಞರು ಅನಾವರಣಗೊಳಿಸಿದ್ದಾರೆ.ಬಿಳಿ-ಬಿಸಿ ಅನಿಲ ಮತ್ತು ಪ್ಲಾಸ್ಮಾದ ಜ್ವಾಲೆಯ-ಕಿತ್ತಳೆ ಹಾಲೋನಿಂದ ಸುತ್ತುವರಿದ ಗಾಢವಾದ ಚಿತ್ರವು ಕಳೆದ 30 ವರ್ಷಗಳಲ್ಲಿ ಯಾವುದೇ ಕಲಾವಿದರ ನಿರೂಪಣೆಯಂತೆ ಕಾಣುತ್ತದೆ.ಆದರೆ ಈಗ ಅದನ್ನು ನಿಜವಾಗಿಯೂ ಫೋಟೋ ರೂಪದಲ್ಲಿ ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.



COMMERCIAL BREAK
SCROLL TO CONTINUE READING

18 ನೇ ಶತಮಾನದಿಂದಲೂ  ವಿಜ್ಞಾನಿಗಳು ಅಗೋಚರವಾದ "ಗಾಢ ನಕ್ಷತ್ರಗಳ ವಿಚಾರವಾಗಿ ಕುತೂಹಲವನ್ನು ಹೊಂದಿದ್ದಾರೆ.ಆದರೆ ಅದನ್ನು ಎಂದಿಗೂ ಕೂಡ ಟೆಲಿಸ್ಕೂಪ್ ಮೂಲಕ ಸೆರೆ ಹಿಡಿಯಲು ಸಾಧ್ಯವಾಗಿರಲಿಲ್ಲ.ಆದರೆ ಈಗ ನಿರಂತರ ಪರಿಶ್ರಮದಿಂದ 50 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿ M87 ಎಂದು ಕರೆಯುವ ಗ್ಯಾಲಾಕ್ಸಿಯಲ್ಲಿರುವ ಈ ರಂದ್ರವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. 



ಕಪ್ಪು ರಂದ್ರದ ಫೋಟೋ ಅನಾವರಣಗೊಳಿಸಿದ ನಂತರ ಮಾತನಾಡಿದ ಫ್ರಾನ್ಸ್ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್ (ಸಿಎನ್ಆರ್ಎಸ್) ನಲ್ಲಿ ಖಗೋಳಶಾಸ್ತ್ರಜ್ಞ ಫ್ರೆಡೆರಿಕ್ ಗುತ್ " ಇದರ ದೂರ ಮೊದಲು ಕಲ್ಪನೆಗೆ ಸೀಮಿತವಾಗಿತ್ತು" ಎಂದು ತಿಳಿಸಿದರು. ಇನ್ನೊಂದೆಡೆ ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿ ಖಗೋಳವಿಜ್ಞಾನಿ ಪಾಲ್ ಮೆಕ್ನಮಾರಾ ಇದನ್ನು "ಅತ್ಯುತ್ತಮ ತಾಂತ್ರಿಕ ಸಾಧನೆ" ಎಂದು ಬಣ್ಣಿಸಿದ್ದಾರೆ .



"ತನ್ನದೇ ತೂಕದ ಅಡಿಯಲ್ಲಿ ಕುಸಿಯುವ ಬೃಹತ್  ದೂರದರ್ಶಕವನ್ನು ನಿರ್ಮಿಸಲು ಬದಲಾಗಿ, ನಾವು ಅನೇಕ ವೀಕ್ಷಣಾಲಯಗಳನ್ನು ಸಂಯೋಜಿಸಿದ್ದೆವು " ಎಂದು ಗ್ರೆನೊಬಲ್ನಲ್ಲಿರುವ ಮಿಲಿಮೆಟ್ರಿಕ್ ರೇಡಿಯೋ ಆಸ್ಟ್ರೋನಮಿ (ಐಆರ್ಎಎಂ) ಸಂಸ್ಥೆಯ ಖಗೋಳಶಾಸ್ತ್ರಜ್ಞ ಮೈಕಲ್ ಬ್ರೆಮರ್ ಹೇಳಿದ್ದಾರೆ.