)
ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ರಾಜಕೀಯದ ನಡುವೆ ಇತರ ಸಾಮ್ಯತೆಗಳಿವೆಯೋ ಇಲ್ಲವೋ, ಗೊತ್ತಿಲ್ಲ, ಆದರೆ ಒಂದು ವಿಷಯದಲ್ಲಿ ಬಹಳ ಸಾಮ್ಯತೆಗಳಿವೆ.ಹೌದು, ಈ ದೇಶಗಳ ರಾಜಕಾರಣದಲ್ಲಿ ಪುರುಷ ಪ್ರಾಬಲ್ಯ ಇರುವುದನ್ನು ಕಾಣಬಹುದು.ಅದರಲ್ಲೂ ವಿಶೇಷವಾಗಿ ನಾವು ಪಾಕಿಸ್ತಾನ, ಮತ್ತು ಆಫ್ಘಾನಿಸ್ತಾನದಲ್ಲಿ ಇದನ್ನು ಕಾಣಬಹುದಾಗಿದೆ.ಅದಾಗ್ಯೂ ಇದಕ್ಕೆ ಅಪವಾದ ಎನ್ನುವಂತೆ ಬಾಂಗ್ಲಾದೇಶದ ರಾಜಕಾರಣವಿತ್ತು, ಸುಮಾರು ಮೂವತ್ತು ವರ್ಷಗಳ ಕಾಲ ಪುರುಷ ಪ್ರಾಬಲ್ಯ, ಮಿಲಿಟರಿ ಹಸ್ತಕ್ಷೇಪ, ಇಸ್ಲಾಮಿಕ್ ಮೂಲಭೂತವಾದ ಮತ್ತು ರಾಜಕೀಯ ಹಿಂಸಾಚಾರದಿಂದ ಗುರುತಿಸಲ್ಪಟ್ಟ ಬಾಂಗ್ಲಾದೇಶದ ರಾಜಕೀಯವು ಮುಖ್ಯವಾಗಿ ಖಲೀದಾ ಜಿಯಾ, ಶೇಖ್ ಹಸೀನಾ ರಂತಹ ಇಬ್ಬರೂ ಮಹಿಳೆಯರ ನಡುವೆಯೇ ಸುತ್ತುತ್ತಿತ್ತು ಎಂದು ಹೇಳಬಹುದು.
ಇಂದು, ವಿವಿಧ ಕಾರಣಗಳಿಗಾಗಿ, ಅವರಿಲ್ಲದೆ ಬಾಂಗ್ಲಾದೇಶದ ರಾಜಕೀಯವು ಖಾಲಿಯಾಗಿದೆ. ದಂಗೆಯ ನಂತರ ಶೇಖ್ ಹಸೀನಾ ಈಗಾಗಲೇ ದೆಹಲಿಗೆ ಗಡಿಪಾರು ಆಗಿದ್ದಾರೆ. ಆದಾಗ್ಯೂ, ಶೇಖ್ ಹಸೀನಾ ಅನುಪಸ್ಥಿತಿಯಲ್ಲಿ ಅಪಾರ ಜನಪ್ರಿಯತೆಯನ್ನು ಗಳಿಸಿದ್ದ ಅವರ ಕಟ್ಟಾ ಎದುರಾಳಿ ಖಲೀದಾ ಜಿಯಾ ನಿಧನರಾಗಿದ್ದಾರೆ. ಹಾಗಾಗಿ ಈಗ ಬಾಂಗ್ಲಾದೇಶದಲ್ಲಿ ಮಹಿಳಾ ರಾಜಕಾರಣ ಅಂತ್ಯವಾಯ್ತಾ? ಎನ್ನುವ ಪ್ರಶ್ನೆ ಎದುರಾಗಿದೆ.
ಖಲೀದಾ ಜಿಯಾ:
ಖಲೀದಾ ಜಿಯಾ ಡಿಸೆಂಬರ್ 30, 2025 ರಂದು ಬೆಳಿಗ್ಗೆ 6 ಗಂಟೆಗೆ ಢಾಕಾದಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ಕಳೆದ 20 ದಿನಗಳಿಂದ ವೆಂಟಿಲೇಟರ್ನಲ್ಲಿದ್ದರು. ಹಲವಾರು ವರ್ಷಗಳಿಂದ ಎದೆಯ ಸೋಂಕು, ಯಕೃತ್ತು, ಮೂತ್ರಪಿಂಡ, ಮಧುಮೇಹ, ಸಂಧಿವಾತ ಮತ್ತು ಕಣ್ಣಿನ ಸಮಸ್ಯೆಗಳಿಂದ ಬಳಲುತ್ತಿದ್ದರು.ಈಗ ಅವರ ನಿಧನವನ್ನು ಅವರ ಕುಟುಂಬ ಧೃಡಪಡಿಸಿದೆ. ಈ ನಿಧನದೊಂದಿಗೆ ಈಗ ಬಾಂಗ್ಲಾದೇಶದ ರಾಜಕೀಯದಲ್ಲಿ ಒಂದು ಅಧ್ಯಾಯವೇ ಕೊನೆಗೊಂಡಂತೆ ಆಗಿದೆ.
Deeply saddened to learn about the passing away of former Prime Minister and BNP Chairperson Begum Khaleda Zia in Dhaka.
Our sincerest condolences to her family and all the people of Bangladesh. May the Almighty grant her family the fortitude to bear this tragic loss.
As the… pic.twitter.com/BLg6K52vak
— Narendra Modi (@narendramodi) December 30, 2025
ಫೆಬ್ರವರಿ 27, 1991 ರಂದು ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಆಯ್ಕೆ ಖಲೀದಾ ಜಿಯಾ, ಪತಿ ಜಿಯಾವುರ್ ರೆಹಮಾನ್ ಹತ್ಯೆಗೂ ಮುನ್ನ ರಾಜಕೀಯ ಪ್ರಪಂಚದಿಂದ ದೂರವಿದ್ದರು.ಅ ಆದರೆ ಅವರ ಪತಿ ಜಿಯಾವುರ್ ರೆಹಮಾನ್ ಅವರ ಹತ್ಯೆಯ ನಂತರ, ಪಕ್ಷದ ಸಾರಥ್ಯವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದರು.ಅವರು 2001 ರಲ್ಲಿ ಅಧಿಕಾರಕ್ಕೆ ಮರಳಿ 2006 ರವರೆಗೆ ಪ್ರಧಾನಿಯಾಗಿದ್ದರು.
ಖಲೀದಾ ಜಿಯಾ ಅವರನ್ನು ಚುನಾವಣಾ ರಾಜಕೀಯದಲ್ಲಿ ಅತ್ಯಂತ ಬಲಿಷ್ಠ ನಾಯಕಿ ಎಂದು ಪರಿಗಣಿಸಲಾಗಿದೆ. 1991 ರಿಂದ 2008 ರವರೆಗಿನ ಪ್ರತಿಯೊಂದು ಸಾರ್ವತ್ರಿಕ ಚುನಾವಣೆಯಲ್ಲೂ ಅವರು ಗೆಲುವನ್ನು ಸಾಧಿಸಿದ್ದರು.ಅವರ ಪಕ್ಷ ಸೋತರೂ ಅವರೆಂದಿಗೂ ಸೋಲಲಿಲ್ಲ, ಆದರೆ ಅವರ ಅಂತಿಮ ಸೋಲು ಚುನಾವಣೆಯ ಮೂಲಕ ಬಂದಿದ್ದಲ್ಲ, ಬದಲಾಗಿ ಕೋರ್ಟ್ ಮೂಲಕ ಬಂದಿದ್ದು, 2018 ರಲ್ಲಿ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ, ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಇದರ ಹೊರತಾಗಿಯೂ, ಪಕ್ಷವು ಕೊನೆಯವರೆಗೂ ಅವರ ಮೇಲೆ ಅವಲಂಬಿತವಾಗಿತ್ತು.ಬಿಎನ್ಪಿಗೆ ಅವರ ಜನಪ್ರಿಯತೆಗೆ ಸರಿಸಾಟಿಯಾದ ಬೇರೆ ನಾಯಕಿ ಇರಲಿಲ್ಲ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಖಲೀದಾ ಅವರು ಫೆಬ್ರವರಿ 12, 2026 ರಂದು ನಿಗದಿಯಾಗಿದ್ದ ಸಾರ್ವತ್ರಿಕ ಚುನಾವಣೆಯಲ್ಲಿಯೂ ಮುಂದಾಳತ್ವ ವಹಿಸುವವರಿದ್ದರು.
ಶೇಖ್ ಹಸೀನಾ:
ಇನ್ನೊಂದೆಡೆಗೆ ಖಾಲೀದ್ ಜಿಯಾ ವಿರೋಧಿಯಾಗಿದ್ದ ಶೇಖ್ ಹಸೀನಾ ಬಾಂಗ್ಲಾದೇಶದಲ್ಲಿ 20 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿದ್ದರು. ಅವರು ಮೊದಲು 1996 ರಲ್ಲಿ ಪ್ರಧಾನಿಯಾದರು ಮತ್ತು 2009 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು. ಅವರು 2014, 2019 ಮತ್ತು 2024 ರಲ್ಲಿ ಸತತ ಅವಧಿಗೆ ಸೇವೆ ಸಲ್ಲಿಸಿದರು. ಒಟ್ಟಾರೆಯಾಗಿ, ಅವರು ಐದು ಬಾರಿ ಸೇವೆ ಸಲ್ಲಿಸಿದ್ದರು. ಆದರೆ ಬದಲಾದ ಪರಿಸ್ಥಿತಿಯಲ್ಲಿ 2024 ರಲ್ಲಿ, ಮೀಸಲಾತಿ ವಿವಾದದಿಂದ ಭುಗಿಲೆದ್ದ ಪ್ರತಿಭಟನೆಗಳು ದಂಗೆಯಾಗಿ ಉಲ್ಬಣಗೊಂಡವು. ಇದರಿಂದಾಗಿ ಆಗಸ್ಟ್ 5, 2024 ರಂದು, ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ ಭಾರತಕ್ಕೆ ಗಡಿಪಾರಾಗಬೇಕಾಗಿ ಬಂತು.
ಈಗ ಇಬ್ಬರೂ ಮಹಿಳೆಯರು ರಾಜಕೀಯದಿಂದ ವಿಮುಖವಾಗಿರುವುದರಿಂದ ಬಾಂಗ್ಲಾದೇಶದಲ್ಲಿ ಮಹಿಳಾ ರಾಜಕಾರಣ ಅಂತ್ಯವಾಯ್ತಾ? ಎನ್ನುವ ಪ್ರಶ್ನೆ ಎದುರಾಗಿದೆ. ಖಲೀದಾ ಜಿಯಾ ಮತ್ತು ಶೇಖ್ ಹಸೀನಾ ನಂತರ, ಜನಪ್ರಿಯ ಮಹಿಳಾ ವ್ಯಕ್ತಿಗಳು ಯಾರೂ ಇಲ್ಲ. ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. 2024 ರ ದಂಗೆಯ ನಂತರ ರಚನೆಯಾದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್, 2025 ರವರೆಗೆ ಪಕ್ಷದ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ. ಮತ್ತೊಂದೆಡೆ, ಬಿಎನ್ಪಿ ಇದೆ, ಅದರ ನಾಯಕಿ ಖಲೀದಾ ಜಿಯಾ ಕೂಡ ಈಗ ನಿಧನರಾಗಿದ್ದಾರೆ. ಈಗ ಅವರ ನಿಧನದ ನಂತರ ಪಕ್ಷದ ಸಂಪೂರ್ಣ ಜವಾಬ್ದಾರಿ ಅವರ ಮಗ ತಾರಿಕ್ ರೆಹಮಾನ್ ಮೇಲೆ ಬಿದ್ದಿದೆ, ಅವರು ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸುತ್ತಿದ್ದಾರೆ.
ಖಲೀದಾ ಜಿಯಾ ನಂತರ, ಬಿಎನ್ಪಿಗೆ ಬಲವಾದ ಮಹಿಳಾ ನಾಯಕಿಯ ಕೊರತೆಯೂ ಇದೆ. ಅವರ 28 ವರ್ಷದ ಮೊಮ್ಮಗಳು ಜೈಮಾ ರೆಹಮಾನ್ ಸುದ್ದಿಯಲ್ಲಿದ್ದಾರೆ.ಲಂಡನ್ನಲ್ಲಿ ಶಿಕ್ಷಣ ಪಡೆದ ನ್ಯಾಯವಾದಿ ಜೈಮಾ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ರಾಜಕೀಯ ಸಭೆಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅವರ ಉಪಸ್ಥಿತಿಯು ಪಕ್ಷಕ್ಕೆ ಹೊಸ ಬಲವನ್ನು ನೀಡಲಿದೆ ಎನ್ನಲಾಗಿದೆ.ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶವನ್ನು ಇನ್ನೂ ಘೋಷಿಸಿಲ್ಲ ಅಥವಾ ಪಕ್ಷದ ಯಾವುದೇ ಔಪಚಾರಿಕ ಹುದ್ದೆಯನ್ನು ಅಲಂಕರಿಸಿಲ್ಲ.
My mother, BNP Chairperson Begum Khaleda Zia, has responded to the call of Almighty Allah and left us today. Inna lillahi wa inna ilayhi raji'un (Indeed, we belong to Allah, and to Him we shall return).
To many, she was the leader of the nation, an uncompromising leader, the… pic.twitter.com/bLsEtzYWgi
— Tarique Rahman (@trahmanbnp) December 30, 2025
ಇತರ ಪಕ್ಷಗಳ ಸ್ಥಿತಿ ಏನು?
ಇತರ ಪಕ್ಷಗಳಿಗೆ ಈ ಚಿತ್ರಣ ಇನ್ನೂ ಸ್ಪಷ್ಟವಾಗಿದೆ. ಇಸ್ಲಾಮಿಕ್ ಮೂಲಭೂತವಾದಿಗಳನ್ನು ಬೆಂಬಲಿಸುತ್ತದೆ ಎಂದು ಪರಿಗಣಿಸಲ್ಪಟ್ಟ ಮತ್ತು ಹೆಚ್ಚಾಗಿ ಭಾರತ ವಿರೋಧಿ ಪಕ್ಷವೆಂದು ಹಣೆಪಟ್ಟಿ ಕಟ್ಟಲ್ಪಡುವ ಜಮಾತ್-ಎ-ಇಸ್ಲಾಮಿಯಲ್ಲಿಯೂ ಮಹಿಳಾ ನಾಯಕಿಯರಿಲ್ಲ. ಕಳೆದ ವರ್ಷ ಜುಲೈನಲ್ಲಿ ನಡೆದ ಪ್ರತಿಭಟನೆಗಳ ನಂತರ ರೂಪುಗೊಂಡ ರಾಷ್ಟ್ರೀಯ ನಾಗರಿಕ ಪಕ್ಷವು ಸಂಪೂರ್ಣವಾಗಿ ಪುರುಷ ಪ್ರಾಬಲ್ಯದ ನಾಯಕತ್ವವನ್ನು ಹೊಂದಿದೆ.ಪಕ್ಷದ ಮುಖ್ಯಸ್ಥೆ ನಹಿದ್ ಇಸ್ಲಾಂ ಮತ್ತು ಅವರ ಸಹೋದ್ಯೋಗಿಗಳು ಶೇಖ್ ಹಸೀನಾ ವಿರೋಧಿ ಚಳವಳಿಯಿಂದ ಹೊರಹೊಮ್ಮಿದರೂ, ಇಲ್ಲಿಯೂ ಮಹಿಳಾ ನಾಯಕತ್ವವಿಲ್ಲ.ಹಾಗಾಗಿ ಈಗ ಖಲೀದಾ ಜಿಯಾ ಮತ್ತು ಶೇಖ್ ಹಸೀನಾ ಅವರ ಅನುಪಸ್ಥಿತಿಯ ನಂತರ ಬಾಂಗ್ಲಾದೇಶದಲ್ಲಿ ಮಹಿಳಾ ರಾಜಕಾರಣದಲ್ಲಿ ನಿಜಕ್ಕೂ ಶೂನ್ಯತ್ವ ಆವರಿಸಿದೆ ಎಂದೇ ಹೇಳಬಹುದು.