ಇರಾನ್‌ನಲ್ಲಿ ಅನಿಲ ಸ್ಫೋಟ; ಕನಿಷ್ಠ 11 ಮಂದಿ ಮೃತ

ಈ ಘಟನೆಯಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೆಹರ್ ತನ್ನ ವರದಿಯಲ್ಲಿ ತಿಳಿಸಿದೆ.

Updated: Dec 6, 2019 , 03:24 PM IST
ಇರಾನ್‌ನಲ್ಲಿ ಅನಿಲ ಸ್ಫೋಟ; ಕನಿಷ್ಠ 11 ಮಂದಿ ಮೃತ
File Image

ದುಬೈ: ಇರಾನ್‌ನ(Iran) ಪಶ್ಚಿಮ ಕುರ್ದಿಸ್ತಾನ್ ಪ್ರಾಂತ್ಯ(Western Kurdistan Province)ದಲ್ಲಿ ಗುರುವಾರ ನಡೆದ ಅನಿಲ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಸುದ್ದಿ ಸಂಸ್ಥೆ ಮೆಹರ್ ಪ್ರಾಂತೀಯ ತುರ್ತು ಅಧಿಕಾರಿಯನ್ನು ಉಲ್ಲೇಖಿಸಿ ಈ ಮಾಹಿತಿಯನ್ನು ನೀಡಿದೆ.

ಈ ಘಟನೆಯಲ್ಲಿ ಐವರು ಮಕ್ಕಳು ಸೇರಿದಂತೆ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೆಹರ್ ತನ್ನ ವರದಿಯಲ್ಲಿ ತಿಳಿಸಿದೆ. ಸುಕ್ವೆಜ್ ನಗರದಲ್ಲಿ ರಾತ್ರಿ ವಿವಾಹ ಕಾರ್ಯಕ್ರಮವೊಂದರಲ್ಲಿ ಸಂಭವಿಸಿದ ಈ ಅನಿಲ ಸ್ಫೋಟದಿಂದಾಗಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇತರ ಡಜನ್ಗಟ್ಟಲೆ ಜನರು ಸಹ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಘಟನೆಯ ನಂತರ ರಕ್ಷಕರು ಮತ್ತು ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿ ಸಂತ್ರಸ್ತರ ರಕ್ಷಣಾ ಕಾರ್ಯ ಕೈಗೊಂಡಿದೆ.