ಹಿಜಾಬ್ ಬೇಡ ಎನ್ನುತ್ತಲೇ ನಡುರಸ್ತೆಯಲ್ಲಿಯೇ ಬೆತ್ತಲೆಯಾದ ಮಹಿಳೆ..! ವಿಡಿಯೋ ವೈರಲ್‌

ಮೂಲಭೂತ ನೀತಿಗಳ ವಿರುದ್ಧ ಮಹಿಳೆಯರ ಪ್ರತಿಭಟನೆಗಳು ನಿರಂತರವಾಗಿ ಮುಂದುವರೆದಿವೆ. ಅದಂತೆ ಹಿಜಾಬ್ ವಿವಾದ ಮತ್ತೆ ಭುಗಿಲೆದ್ದಿದೆ. ಇತ್ತೀಚೆಗೆ, ಮಶಾದ್ ನಗರದಲ್ಲಿ ಮಹಿಳೆಯೊಬ್ಬರು ತಮ್ಮ ಪ್ರತಿಭಟನೆಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದು, ಚರ್ಚೆಯ ವಿಷಯವಾಗಿದೆ.. ಈ ಕುರಿತ ವಿಡಿಯೋ ಸಹ ವೈರಲ್‌ ಆಗಿದೆ.

Written by - Krishna N K | Last Updated : Apr 5, 2025, 05:42 PM IST
    • ಮೂಲಭೂತ ನೀತಿಗಳ ವಿರುದ್ಧ ಮಹಿಳೆಯರ ಪ್ರತಿಭಟನೆಗಳು ನಿರಂತರ
    • ಮಶಾದ್ ನಗರದಲ್ಲಿ ಮಹಿಳೆಯೊಬ್ಬರು ತಮ್ಮ ಪ್ರತಿಭಟನೆಯನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ
    • ಇರಾನ್‌ನ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯ ವಿರುದ್ಧ ಮಹಿಳೆ ಬೆತ್ತಲೆಯಾಗಿ ಪ್ರತಿಭಟಿಸಿದಳು.
ಹಿಜಾಬ್ ಬೇಡ ಎನ್ನುತ್ತಲೇ ನಡುರಸ್ತೆಯಲ್ಲಿಯೇ ಬೆತ್ತಲೆಯಾದ ಮಹಿಳೆ..! ವಿಡಿಯೋ ವೈರಲ್‌

World News : ಇರಾನ್‌ನ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯ ವಿರುದ್ಧ ಮಹಿಳೆ ಬೆತ್ತಲೆಯಾಗಿ ಪ್ರತಿಭಟಿಸಿದಳು. ಈ ಘಟನೆ ದೇಶದ ಎರಡನೇ ಅತಿದೊಡ್ಡ ನಗರವಾದ ಮಶಾದ್‌ನಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.. ಅಷ್ಟೇ ಅಲ್ಲ, ವಿವಸ್ತ್ರಳಾಗಿ ಪೊಲೀಸ್‌ ವಾಹನದ ಬಾನೆಟ್ ಮೇಲೆ ನಿಂತು ಪ್ರತಿಭಟನೆ ಮಾಡಿದಳು.

Add Zee News as a Preferred Source

ಅಲ್ಲಿಗೆ ಬಂದ ಪೊಲೀಸ್ ಅಧಿಕಾರಿಗಳು ಮಹಿಳೆಯ ಮನವೊಲಿಸಲು ಮತ್ತು ಅವಳನ್ನು ಕಾರಿನಿಂದ ಕೆಳಗಿಳಿಸಲು ಹಲವಾರು ಬಾರಿ ಪ್ರಯತ್ನಿಸಿದರು. ಆದರೆ ಅವಳು ಸ್ವಲ್ಪವೂ ಬಗ್ಗಲಿಲ್ಲ. ಈ ಪ್ರತಿಭಟನೆಗೆ ನಿಖರವಾದ ಕಾರಣ ಸ್ಪಷ್ಟವಾಗಿಲ್ಲ, ಆದರೆ ಸಾಮಾಜಿಕ ಮಾಧ್ಯಮದಲ್ಲಿ ಇದು ದೇಶದಲ್ಲಿ ಇತ್ತೀಚೆಗೆ ವಿಧಿಸಲಾದ ವಸ್ತ್ರ ಸಂಹಿತೆಯ ನಿರ್ಬಂಧಗಳಿಗೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತಿದೆ.. 

ಇದನ್ನೂ ಓದಿ: ಈ ವರ್ಷದಂದೇ ಪ್ರಪಂಚದ ವಿನಾಶ..! 300 ವರ್ಷಗಳ ಹಿಂದಿನ ನ್ಯೂಟನ್‌ ಪತ್ರ ಪತ್ತೆ, ಶಾಕಿಂಗ್‌ ವಿಚಾರ ಬಹಿರಂಗ.. 

ಆ ಹುಡುಗಿಗೆ ಮಾನಸಿಕ ಸಮಸ್ಯೆ ಇದೆ ಅಥವಾ ಆ ದೇಶದ ಕಠಿಣ ಕಾನೂನುಗಳಲ್ಲಿ ಸಮಸ್ಯೆ ಇದೆ ಎಂದು ಕೆಲವರು ಹೇಳುತ್ತಾರೆ. ಇರಾನ್‌ನಲ್ಲಿ ಮಹಿಳೆಯರ ಮೇಲೆ ವಿಧಿಸಲಾಗಿರುವ ಕಠಿಣ ಕಾನೂನುಗಳ ವಿರುದ್ಧ ಹಲವು ಕಡೆಗಳಿಂದ ಪ್ರತಿಭಟನೆ ವ್ಯಕ್ತವಾಗುತ್ತಿದೆ.

ಸದ್ಯ ಮಹಿಳೆಯ ಪ್ರತಿಭಟನೆಯ ವಿಡಿಯೋ ವೈರಲ್‌ ಆಗಿದ್ದು, ಜಾಗತಿಕ ಗಮನ ಸೆಳೆದಿದೆ. ಕಳೆದ ಡಿಸೆಂಬರ್‌ನಲ್ಲಿ, ಇರಾನ್ ಸಂಸತ್ತು ಕಠಿಣ ಶಿಕ್ಷೆಗಳು ಮತ್ತು ದಂಡಗಳನ್ನು ಒದಗಿಸುವ ಹಿಜಾಬ್ ಮಸೂದೆಯನ್ನು ಅಂಗೀಕರಿಸಿತು. ಈ ಮಸೂದೆಯು ಕೂದಲು, ತೋಳುಗಳು ಅಥವಾ ಕಾಲುಗಳನ್ನು ಕಾಣದಂತೆ ಬಟ್ಟೆ ತೋಡದ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಶಿಕ್ಷೆ ಮತ್ತು ಕಠಿಣ ದಂಡ ವಿಧಿಸುವ ವಿಷಯ ಒಳಗೊಂಡಿತ್ತು..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

...Read More

Trending News