ನವದೆಹಲಿ: ಜಗತ್ತಿಗೇ ಕಂಟಕವಾಗಿ ಕಾಡುತ್ತಿರುವ  ಕರೋನಾವೈರಸ್ (Coronavirus) COVID-19 ಪ್ರಕರಣಗಳ ಸಂಖ್ಯೆ ಭಾನುವಾರ (ಏಪ್ರಿಲ್ 5, 2020) 10:50ರ ಹೊತ್ತಿಗೆ ಜಾಗತಿಕವಾಗಿ 12,49,107ಕ್ಕೆ ತಲುಪಿದ್ದು, 67,999 ಜೀವಗಳನ್ನು ಬಲಿ ಪಡೆದಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನಾವೈರಸ್ ಸಂಪನ್ಮೂಲ ಕೇಂದ್ರ ಬಿಡುಗಡೆ ಮಾಡಿರುವ ಹೇಳಿಕೆಯಿಂದ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಜಾಗತಿಕವಾಗಿ ಗರಿಷ್ಠ ಸಂಖ್ಯೆಯ ಸಕಾರಾತ್ಮಕ ಪ್ರಕರಣಗಳಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ, ಸುಮಾರು 3,21,762 ಅಮೆರಿಕನ್ನರು  COVID-19 ಸುಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮಾರಣಾಂತಿಕ ವೈರಸ್ ಅಮೆರಿಕ(America)ದಲ್ಲಿ  9,132 ಜೀವಗಳನ್ನು ಬಲಿ ಪಡೆದಿದೆ, ಅದರಲ್ಲೂ 2,220 ಸಾವುಗಳೊಂದಿಗೆ ನ್ಯೂಯಾರ್ಕ್ ನಗರವು ಹೆಚ್ಚು ವಿಪತ್ತುಗಳನ್ನು ಕಂಡಿದೆ. ಈ ಹಿನ್ನೆಲೆಯಲ್ಲಿ ಯುರೋಪಿಯನ್ ರಾಷ್ಟ್ರಗಳು ಅಮೆರಿಕವನ್ನು COVID-19ನ ಹೊಸ ಕೇಂದ್ರಬಿಂದು ಎಂದು ಕರೆಯುತ್ತಿವೆ.


ಇಟಲಿ (Italy) ಮೂರನೇ ಸ್ಥಾನದಲ್ಲಿದೆ. ಆದರೆ ಈ ದೇಶವು ಸುಮಾರು 15,887 ಜನರನ್ನು ಕಳೆದುಕೊಂಡಿದ್ದು ವಿಶ್ವದ ಅತಿ ಹೆಚ್ಚು ಸಾವುಗಳನ್ನು ಕಂಡ ದೇಶವಾಗಿದೆ.


ಕೊರೋನಾವೈರಸ್ನ 97,351 ಪಾಸಿಟಿವ್ ಪ್ರಕರಣಗಳನ್ನು ವರದಿ ಮಾಡಿರುವ ಜರ್ಮನಿ (Germany) ನಾಲ್ಕನೇ ಸ್ಥಾನದಲ್ಲಿದ್ದು, 1,524 ಮಂದಿ ಮಾರಕ ವೈರಸ್ಗೆ ಬಲಿಯಾಗಿದ್ದಾರೆ. 90,863 ಕೊರೋನಾ ಪೀಡಿತರ ಬಗ್ಗೆ ದೃಢಪಡಿಸಿದ ಬಳಿಕ ಫ್ರಾನ್ಸ್ Covid-19 ದಾಳಿಗೆ ಸಿಲುಕಿದ ರಾಷ್ಟ್ರಗಳಲ್ಲಿ ಐದನೇ ಸ್ಥಾನದಲ್ಲಿದೆ. ಈ ದೇಶದಲ್ಲಿ ಇದುವರೆಗೂ ಕರೋನಾವೈರಸ್ ನಿಂದಾಗಿ 7,574 ಫ್ರೆಂಚ್ ಜನರು ಪ್ರಾಣ ಕಳೆದುಕೊಂಡಿದ್ದಾರೆ.


ಎಪ್ರಿಲ್ 4ರಂದು ಸ್ಪೇನ್ (Spain) ಹೆಚ್ಚಿನ ಕೊರೋನಾ ವೈರಸ್ ಸಕಾರಾತ್ಮಕ ಪ್ರಕರಣಗಳನ್ನು ವರದಿ ಮಾಡುವ ಮೂಲಕ ಇಟಲಿಯನ್ನೇ ಮೀರಿಸಿದೆ. 


ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನಿಸಿ ವಿಶ್ವ ಆರೋಗ್ಯ ಸಂಸ್ಥೆ (WHO) Covid-19 ಅನ್ನು ಜಾಗತಿಕ ಸಾಂಕ್ರಾಮಿಕ ರೋಗವೆಂದು ಘೋಷಿಸಿದ ಬಳಿಕ ವಿಶ್ವದಾದ್ಯಂತ ಅನೇಕ ದೇಶಗಳು ಹಲವಾರು ಪೀಡಿತ ಪ್ರದೇಶಗಳಿಂದ ಪ್ರಯಾಣವನ್ನು ನಿರ್ಬಂಧಿಸಿವೆ ಮತ್ತು ಲಾಕ್‌ಡೌನ್‌ಗಳನ್ನು ಜಾರಿಗೆ ತಂದಿವೆ.