ಪಾಕಿಸ್ತಾನದ ರಾಷ್ಟ್ರೀಯ ಸಿಹಿ ತಿನಿಸಾಗಿ ಗುಲಾಬ್ ಜಾಮೂನ್ ಆಯ್ಕೆ!

ಟ್ವಿಟ್ಟರ್ ನಲ್ಲಿ ಸರ್ಕಾರ ಮಾಡಿದ ರಸಪ್ರಶ್ನೆ ಸ್ಪರ್ಧೆಯಲ್ಲಿ, 47% ರಷ್ಟು ಜನರು ಗುಲಾಬ್ ಜಾಮುನ್ ಅನ್ನು ರಾಷ್ಟ್ರೀಯ ಸಿಹಿತಿಂಡಿಯಾಗಿ ಆಯ್ಕೆ ಮಾಡಿದ್ದಾರೆ.

Updated: Jan 10, 2019 , 02:53 PM IST
ಪಾಕಿಸ್ತಾನದ ರಾಷ್ಟ್ರೀಯ ಸಿಹಿ ತಿನಿಸಾಗಿ ಗುಲಾಬ್ ಜಾಮೂನ್ ಆಯ್ಕೆ!
Pic: TTwitter@pid_gov

ನವದೆಹಲಿ: ಹೊಸ ವರ್ಷದಲ್ಲಿ ಇಡೀ ಪ್ರಪಂಚವು ಪಟಾಕಿಗಳಲ್ಲಿ ಮುಳುಗಿಹೋದಾಗ, ಪಾಕಿಸ್ತಾನ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಷಯ ಎಲ್ಲರ ಗಮನ ಸೆಳೆದಿದೆ. ಹೊಸ ವರ್ಷದ ಮೊದಲ ದಿನ ಅಂದರೆ ಜನವರಿ 1 ರಂದು ಪಾಕಿಸ್ತಾನ ಸರಕಾರವು ಅವರ ರಾಷ್ಟ್ರೀಯ ಸಿಹಿತಿನಿಸಿನ ಬಗ್ಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರವಾಗಿ ಜಿಲೇಬಿ, ಗುಲಾಬ್ ಜಾಮುನ್ ಮತ್ತು ಬರ್ಫಿ ಈ ಮೂರು ಆಯ್ಕೆ ನೀಡಲಾಗಿತ್ತು.

ಗುಲಾಬ್ ಜಾಮೂನ್ ಗೆ ಹೆಚ್ಚು ಮತ:
ಟ್ವಿಟ್ಟರ್ನಲ್ಲಿ ಸರ್ಕಾರದ ರಸಪ್ರಶ್ನೆ ಸ್ಪರ್ಧೆಯಲ್ಲಿ, 47% ರಷ್ಟು ಜನರು ಗುಲಾಬ್ ಜಾಮುನ್ ಅನ್ನು ತಮ್ಮ ರಾಷ್ಟ್ರೀಯ ಸಿಹಿತಿಂಡಿಯಾಗಿ ಆಯ್ಕೆ ಮಾಡಿದ್ದಾರೆ. ಇದರ ಬಳಿಕ ಅದಕ್ಕಿಂತ ವಿಶೇಷ ವಿಷಯವೆಂದರೆ ಅದರ ಬಗ್ಗೆ ಬಂದಿರುವ ಕಮೆಂಟ್ಸ್.

ಯಾವುದೇ ಸಿಹಿ ಆಹಾರ ದೊರೆತರೂ ಅದನ್ನು ರಾಷ್ಟ್ರೀಯ ಸಿಹಿಯಾಗಿ ತಿನ್ನೋಣ ಎಂದು ಯಾರೋ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಹಲ್ವಾ ಮತ್ತು ಸೋಮ್ಪಾಪುಡಿ ಮರೆತುಹೋದರೆ! ಎಂದಿದ್ದಾರೆ. ಮತ್ತೊಬ್ಬರು, ಖೀರ್ ಮತ್ತು ಜಿಲೇಬಿ ಎಂದರೆ ಪಾಕಿಸ್ತಾನಿ ಜನರಿಗೆ ಮೊದಲಿಂದಲೂ ಪ್ರಿಯ ಎಂದಿದ್ದಾರೆ.

ಯಾವ ಸಿಹಿ ತಿನಿಸಿದೆ ಎಷ್ಟು ಮತ?
ಪಾಕಿಸ್ತಾನಿ ಸರ್ಕಾರದ ಟ್ವಿಟ್ಟರ್ ಖಾತೆಯನ್ನು ನೂರಾರು ಕೋಟಿ ಮಂದಿ ಫಾಲೋ ಮಾದುತ್ತಾರೆ. ಆದರೆ ಕೇವಲ 15 ಜನರು ಈ ರಸಪ್ರಶ್ನೆಯಲ್ಲಿ ಭಾಗವಹಿಸಿದ್ದಾರೆ. ಇದರಲ್ಲಿ, ಶೇಕಡಾ 47 ರಷ್ಟು ಜನರು ಗುಲಾಬ್ ಜಾಮುನ್ಗೆ ಗರಿಷ್ಠ ಮತಗಳನ್ನು ನೀಡಿದ್ದಾರೆ. ಜನಸಂಖ್ಯೆಯಲ್ಲಿ 34 ಪ್ರತಿಶತ ಜನರು ಬಾರ್ಫಿಯನ್ನು ಆಯ್ಕೆ ಮಾಡಿದರು ಮತ್ತು 19 ಪ್ರತಿಶತದಷ್ಟು ಜನರು ರಾಷ್ಟ್ರೀಯ ಸಿಹಿತಿಂಡಿಗಾಗಿ ಜಿಲೇಬಿಗೆ ಮತ ಚಲಾಯಿಸಿದರು.