Helicopter crash in hudson river: ನ್ಯೂಯಾರ್ಕ್‌ನ ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಖ್ಯಾತ MNC ಕಂಪನಿಯ ಸಿಇಒ, ಪತ್ನಿ ಮತ್ತು ಮೂವರು ಮಕ್ಕಳ ದುರಂತ ಅಂತ್ಯ ಕಂಡಿದ್ದಾರೆ. ಈ ದುರ್ಘಟನೆಯಲ್ಲಿ ಪೈಲಟ್ ಸಹ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ಸ್ಪೇನ್ ಮೂಲದ ಖ್ಯಾತ MNC ಕಂಪನಿ Siemensನ ಸಿಇಒ ಅಗಸ್ಟಿನ್ ಎಸ್ಕೋಬಾರ್, ಅವರ ಪತ್ನಿ ಮೆರ್ಸೆ ಕ್ಯಾಂಪ್ರುಬಿ ಮಾಂಟಲ್ (Merce Camprubi Montal) ಮತ್ತು 4, 5, 11 ವರ್ಷ ವಯಸ್ಸಿನ ಮೂವರು ಮಕ್ಕಳು ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ʼಅಮೆರಿಕ-ಚೀನಾ ಸುಂಕ ಯುದ್ಧದಿಂದ ಜಗತ್ತೇ ಸರ್ವನಾಶʼ.. ನಿಜವಾಗುತ್ತಾ ಬಾಬಾ ವಂಗಾ ನುಡಿದ ಭವಿಷ್ಯ!
ಬೆಲ್ 206 ಎಂಬ ಹೆಸರಿನ ಹೆಲಿಕಾಪ್ಟರ್‌ನಲ್ಲಿ ಪೈಲೆಟ್ ಸೇರಿದಂತೆ ಆರು ಜನರು ಪ್ರಯಾಣಿಸುತ್ತಿದ್ದರು. ಎಲ್ಲರೂ ಮೃತಪಪಟ್ಟಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. ಅಗಸ್ಟಿನ್ ಎಸ್ಕೋಬಾರ್ ಅವರು ಸ್ಪೇನ್‌ನ ಬಾರ್ಸಿಲೋನಾ ಮೂಲದವರು. ಉತ್ತರ ಅಮೆರಿಕದಲ್ಲಿ ಕಂಪನಿ ಕಟ್ಟಿ ಬೆಳೆಸಿದ್ದ ಅವರನ್ನ 2018ರಲ್ಲಿ Siemens ಕಂಪನಿ ಸಿಇಒ ಆಗಿ ನೇಮಿಸಲಾಗಿತ್ತು.
ಅಗಸ್ಟಿನ್ ಎಸ್ಕೋಬಾರ್ ಅವರು ಪತ್ನಿ ಮತ್ತು ತಮ್ಮ ಮೂವರು ಮಕ್ಕಳ ಸಮೇತ ನ್ಯೂಯಾರ್ಕ್‌ನ ಪ್ರಸಿದ್ಧ ತಾಣಗಳನ್ನು ಹೆಲಿಕಾಪ್ಟರ್‌ನಲ್ಲಿ ವೀಕ್ಷಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ. ಹಡ್ಸನ್ ನದಿಯಲ್ಲಿ ಹೆಲಿಕಾಪ್ಟರ್ ಪತನೊಂಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
BREAKING: Agustin Escobar, President and CEO of Siemens in Spain, along with his wife and their three children, were identified as the victims of the helicopter that plunged into the Hudson River in New York City on Thursday, according to the New York Post.
The New York… pic.twitter.com/cGOiJWGFAx
— RedWave Press (@RedWave_Press) April 11, 2025
ಇದನ್ನೂ ಓದಿ: "ಬಿಕಿನಿ" ಕಂಡು ಹಿಡಿದಿದ್ದು ಓರ್ವ ಗಂಡು ಅಂತ ನಿಮ್ಗೆ ಗೊತ್ತೆ..! ಆ ಮಹಾಶಯನ ತಲೆಗೆ ಈ ಐಡಿಯಾ ಬಂದಿದ್ದೆ ಇಂಟ್ರಸ್ಟಿಂಗ್..
ಮ್ಯಾನ್‌ಹಟನ್ ಸುತ್ತಮುತ್ತಲಿನ ವಾಯುಪ್ರದೇಶವು ಪ್ರವಾಸಿ ಹೆಲಿಕಾಪ್ಟರ್‌ಗಳಿಗೆ ಹೆಸರುವಾಸಿಯಾಗಿವೆ. ಇವು ಪ್ರವಾಸಿಗರಿಗೆ ಆಗಸದಿಂದ ನದಿ, ಸುತ್ತಮುತ್ತಲಿನ ಪ್ರದೇಶವನ್ನು ವೀಕ್ಷಿಸಲು ಸೇವೆ ಒದಗಿಸುತ್ತಿವೆ. ಅದರಂತೆ ಅಗಸ್ಟಿನ್ ಎಸ್ಕೋಬಾರ್ ತಮ್ಮ ಕುಟುಂಬ ಸಮೇತ ನ್ಯೂಯಾರ್ಕ್‌ನ ಪ್ರಸಿದ್ಧ ತಾಣಗಳನ್ನು ಕಣ್ತುಂಬಿಕೊಳ್ಳಲು ಹೆಲಿಕಾಪ್ಟರ್ ಪ್ರವಾಸ ಕೈಗೊಂಡಿದ್ದರು. ಪ್ರವಾಸಕ್ಕೂ ಮೊದಲು ತಾವು ಪ್ರಯಾಣಿಸುವ ಹೆಲಿಕಾಪ್ಟರ್ ಮುಂದೆ ನಿಂತು ಎಸ್ಕೋಬಾರ್ ಕುಟಂಬ ಪೋಸ್ ನೀಡಿತ್ತು. ಈ ಅಪಘಾತದ ಬಗ್ಗೆ ಫೆಡರಲ್ ವಿಮಾನಯಾನ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ನಡೆಸಲಿವೆ ಅಂತಾ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









