ನವದೆಹಲಿ: ನಿಮಗೆ ವಿದೇಶಕ್ಕೆ ಹೋಗಬೇಕೆನ್ನುವ ಕನಸು ಇದ್ದರೆ ಅದೀಗ ಈಡೇರುವಂತಹ ಸಮಯ ಬಂದಿದೆ. ಓ ಅದೇಗೆ ಅಂತೀರಾ?. ಹೌದು, ಕೇಂದ್ರ ಗೃಹ ಸಚಿವಾಲಯ ತಿಳಿಸಿರುವ ಪ್ರಕಾರ ಆಧಾರ ಕಾರ್ಡ್ ಇದ್ದರೆ ನೀವು ಭೂತಾನ್ ಮತ್ತು ನೇಪಾಳ ದೇಶಗಳಿಗೆ ಯಾವುದೇ ವೀಸಾದ ಅಗತ್ಯವಿಲ್ಲದೆ ಹೋಗಬಹುದು.


COMMERCIAL BREAK
SCROLL TO CONTINUE READING

ಭಾರತೀಯ ನಾಗರಿಕರಾಗಿರುವ ಯಾವುದೇ ವ್ಯಕ್ತಿಗಳಿಗೆ ಇನ್ನ್ಮುಂದೆ ಈ ಎರಡು ದೇಶಗಳಿಗೆ ಹೋಗಬೇಕಾದರೆ ಯಾವುದೇ ರೀತಿಯ ವೀಸಾದ ಅಗತ್ಯವಿಲ್ಲ, ನಿಮ್ಮ ಬಳಿ ಪಾಸ್ ಪೋರ್ಟ್ ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತಿನ ಚೀಟಿ ಇದ್ದರೆ ಈ ಎರಡು ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದು.


ಈ ಹಿಂದೆ 65 ಕ್ಕಿಂತ ಅಧಿಕ 15 ವರ್ಷದೊಳಗಿರುವ ವ್ಯಕ್ತಿಗಳು ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ,ಕೇಂದ್ರ ಸರ್ಕಾರದ ಆರೋಗ್ಯ ಸೇವಾ ಕಾರ್ಡ್ ಪಡಿತರ ಚೀಟಿಯನ್ನು ತೋರಿಸಬೇಕಾಗಿತ್ತು,ಆದರೆ ಆಧಾರ್ ಕಾರ್ಡ್ ಮಾತ್ರ ಗಣನೆಗೆ ತೆಗೆದುಕೊಂಡಿರಲಿಲ್ಲ.ಆದರೆ ಈಗ ಆಧಾರ್ ಕಾರ್ಡ್ ನ್ನು ಈ ಪಟ್ಟಿಗೆ ಸೇರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.